AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Protein Rich Vegetarian Food: ಮೊಟ್ಟೆಗಿಂತ ಹೆಚ್ಚು ಪ್ರೋಟೀನ್ ಸಮೃದ್ಧವಾಗಿರುವ ಸಸ್ಯಾಹಾರ ಮೂಲಗಳು

ಮೊಟ್ಟೆಯನ್ನು ಪ್ರೋಟೀನ್ ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಆದರೆ ಹೆಚ್ಚಾಗಿ ಸಸ್ಯಾಹಾರಿಗಳು ಮೊಟ್ಟೆಗಳನ್ನು ಸೇವನೆ ಮಾಡುವುದಿಲ್ಲ. ಹಾಗಾಗಿ ಈ ಕೆಲವೊಂದು ಸಸ್ಯಾಹಾರಗಳನ್ನು ಸೇವನೆ ಮಾಡುವುದರಿಂದ ಪ್ರೋಟೀನ್ ಪೋಷಕಾಂಶವನ್ನು ಪಡೆಯಬಹುದು. ಅನೇಕ ಸಸ್ಯಹಾರಿ ಆಹಾರಗಳು ಮೊಟ್ಟೆಗಳಿಗಿಂತ ಹೆಚ್ಚು ಪ್ರೋಟೀನ್ ಅಂಶವನ್ನು ಹೊಂದಿರುತ್ತದೆ. ಅವುಗಳ ಕುರಿತ ಮಾಹಿತಿ ಇಲ್ಲಿದೆ.

Protein Rich Vegetarian Food: ಮೊಟ್ಟೆಗಿಂತ ಹೆಚ್ಚು ಪ್ರೋಟೀನ್ ಸಮೃದ್ಧವಾಗಿರುವ ಸಸ್ಯಾಹಾರ ಮೂಲಗಳು
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 07, 2023 | 5:39 PM

Share
ಪ್ರೋಟೀನ್ ನಮ್ಮ ಆಹಾರದಲ್ಲಿ ಇರಬೇಕಾದಂತಹ ಅಗತ್ಯ ಪೋಷಕಾಂಶವಾಗಿದೆ. ಇದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಮತ್ತು ತೂಕ ಇಳಿಕೆಯಲ್ಲಿಯೂ ಕೂಡಾ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಂತೆ ಉತ್ತಮ ಆರೋಗ್ಯಕ್ಕಾಗಿ ಸಮತೋಲಿತ ಆಹಾರ ತೆಗೆದುಕೊಳ್ಳುವುದು ಬಹಳ ಮುಖ್ಯ. ಸಮತೋಲಿತ ಆಹಾರವು ಕಾರ್ಬೋಹೈಡ್ರೇಟ್ ಗಳು, ಕ್ಯಾಲೋರಿ, ಕೊಬ್ಬು ಮತ್ತು ಪ್ರೋಟೀನ್ ಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಬಹಳ ಮುಖ್ಯ. ಇವುಗಳಲ್ಲಿ ಪ್ರೋಟೀನ್ ಸ್ನಾಯುಗಳನ್ನು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಲ್ಲದೆ ಪ್ರೋಟೀನ್ ಭರಿತ ಆಹಾರವು ದೇಹ ಶಕ್ತಿಯನ್ನು ಹೆಚ್ಚಿಸಲು ಬಹಳ ಮುಖ್ಯ. ಮೊಟ್ಟೆಗಳನ್ನು ಪ್ರೋಟೀನ್ ಪ್ರಾಥಮಿಕ ಉತ್ತಮ ಪರಿಗಣಿಸಲಾಗುತ್ತದೆ. ಆದರೆ ಅನೇಕ ಸಸ್ಯಹಾರಿಗಳು ಮೊಟ್ಟೆಯನ್ನು ಸೇವನೆ ಮಾಡುವುದಿಲ್ಲ. ಹಾಗಾಗಿ  ಮೊಟ್ಟೆಯ ಬದಲಿಗೆ ಈ ಕೆಲವೊಂದು ಆಹಾರಗಳನ್ನು ಸೇವನೆ ಮಾಡುವುದರಿಂದ ಪ್ರೋಟೀನ್ ಅಂಶವನ್ನು ಪಡೆಯಬಹುದು.

ಪ್ರೋಟೀನ್ ನಲ್ಲಿ ಸಮೃದ್ಧವಾಗಿರುವ ಸಸ್ಯಾಹಾರಗಳು:

ಸೋಯಾಬೀನ್: ಅನೇಕ ಜನರ ಸೋಯಾಬೀನ್ ರುಚಿಯನ್ನು ಇಷ್ಟಪಡುವುದಿಲ್ಲ ಹಾಗಾಗಿ ಅದನ್ನು ಅಷ್ಟಾಗಿ ಸೇವನೆ ಮಾಡಲು ಹೋಗುವುದಿಲ್ಲ. ಆದರೆ ಸೋಯಾಬೀನ್ ಸಸ್ಯಾಧಾರಿತ ಪ್ರೋಟೀನ್ ನ ಅತ್ಯುತ್ತಮ ಮೂಲವಾಗಿದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಪ್ರೋಟೀನ್ ಲಭಿಸುತ್ತದೆ. ಸುಮಾರು 100 ಗ್ರಾಂ ಸೋಯಾಬೀನ್ 36 ಗ್ರಾಂ ನಷ್ಟು ಪ್ರೋಟೀನ್ ನ್ನು ಹೊಂದಿರುತ್ತದೆ.

ಕ್ವಿನೋವಾ (ನವಣೆ) : ಇದು ಸಂಪೂರ್ಣ ಧಾನ್ಯವಾಗಿದೆ. ಫೈಬರ್, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಇತರೆ ಸಾಕಷ್ಟು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಕ್ವಿನೋವಾ ತೂಕ ಇಳಿಕೆಗೂ ಸಹಕಾರಿಯಾಗಿದೆ.  ಒಂದು ಕಪ್ ಕ್ವಿನೋವಾದಲ್ಲಿ ಸುಮಾರು 7 ಗ್ರಾಂ ಪ್ರೋಟೀನ್ ಕಂಡುಬರುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿದ ಅನುಭವವಾಗುತ್ತದೆ. ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಪ್ರೋಟೀನ್ ಮಟ್ಟವೂ ಹೆಚ್ಚುತ್ತದೆ.
ಚಿಯಾ ಬೀಜಗಳು: ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಹಾಗೂ ಒಮೆಗಾ-3 ಕೊಬ್ಬಿನಾಮ್ಲದಲ್ಲಿ ಸಮೃದ್ಧವಾಗಿರುವ ಚಿಯಾ ಬೀಜಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪ್ರೋಟೀನ್ ನಿಮಗೆ ಶಕ್ತಿಯನ್ನು ನೀಡುತ್ತದೆ. ನೀವು ಮೊಟ್ಟೆಯನ್ನು ತಿನ್ನದಿದ್ದರೆ, ಪ್ರೋಟೀನ್ ಕೊರತೆಯನ್ನು ಪೂರೈಸಲು ನೀವು ಚಿಯಾ ಬೀಜಗಳನ್ನು ತಿನ್ನಬಹುದು.
ಕಡಲೆ:  ಕಡಲೆಯನ್ನು ತಿನ್ನುವುದರಿಂದಲೂ ದೇಹಕ್ಕೆ ಸಾಕಷ್ಟು ಪ್ರಮಾಣದ ಪ್ರೋಟೀನ್ ಲಭಿಸುತ್ತದೆ. ಸಾಮಾನ್ಯವಾಗಿ ಒಂದು ಮೊಟ್ಟೆಯಲ್ಲಿ ಸುಮಾರು 6 ಗ್ರಾಂ ಪ್ರೋಟೀನ್ ಕಂಡುಬರುತ್ತದೆ ಆದರೆ100 ಗ್ರಾಂ ಬೇಯಿಸಿದ ಕಡಲೆಯಲ್ಲಿ ಸುಮಾರು 19 ಗ್ರಾಮ್ ಪ್ರೋಟೀನ್ ಇರುತ್ತದೆ.
ಚೀಸ್: ಚೀಸ್ ಜನಪ್ರಿಯ ಡೈರಿ ಉತ್ಪನ್ನವಾಗಿದ್ದು, ಇದು ಪ್ರೋಟೀನ್ ನ ಉತ್ತಮ ಮೂಲವಾಗಿದೆ. ಒಂದು ಕಪ್ ಚೀಸ್ ನಲ್ಲಿ ಸುಮಾರು 25 ಗ್ರಾಂ ಪ್ರೋಟೀನ್ ಇರುತ್ತದೆ. ಅದರಲ್ಲೂ ಕಾಟೇಜ್ ಚೀಸ್ ಉತ್ತಮ. ಏಕೆಂದರೆ ಇದು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬನ್ನು ಹೊಂದಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ