Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲಕ್ಕೂ ಮೊದಲು ಪಶ್ಚಿಮ ಘಟ್ಟಗಳ ಈ ಸ್ಥಳಗಳಿಗೆ ಭೇಟಿ ನೀಡಿ

ಮಳೆಗಾಲದಲ್ಲಿ ಈ ಸ್ಥಳಗಳಿಗೆ ಹೋಗಲು ನಿಮಗೆ ಕಷ್ಟವಾಗಬಹುದು. ಹೌದು ಕೆಲವರು ಮಳೆಗಾಲದ ರಜಾ ದಿನಗಳಲ್ಲಿ ಮನೆಯಲ್ಲಿಯೇ ಇರಲು ಇಷ್ಟಪಡುತ್ತಾರೆ. ಮಳೆಗಾಲದ ಪ್ರಯಾಣ ಎಲ್ಲರಿಗೂ ಸಾಧ್ಯವಿಲ್ಲ. ಹಾಗಾಗಿ ಮಳೆಗಾಲಕ್ಕೂ ಮುನ್ನ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.

ಮಳೆಗಾಲಕ್ಕೂ ಮೊದಲು ಪಶ್ಚಿಮ ಘಟ್ಟಗಳ ಈ ಸ್ಥಳಗಳಿಗೆ ಭೇಟಿ ನೀಡಿ
ಸಾಂದರ್ಭಿಕ ಚಿತ್ರ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 16, 2023 | 6:30 AM

ಮಳೆಗಾಲದಲ್ಲಿ ಈ ಸ್ಥಳಗಳಿಗೆ ಹೋಗಲು ನಿಮಗೆ ಕಷ್ಟವಾಗಬಹುದು. ಹೌದು ಕೆಲವರು ಮಳೆಗಾಲದ ರಜಾ ದಿನಗಳಲ್ಲಿ ಮನೆಯಲ್ಲಿಯೇ ಇರಲು ಇಷ್ಟಪಡುತ್ತಾರೆ. ಮಳೆಗಾಲದ ಪ್ರಯಾಣ ಎಲ್ಲರಿಗೂ ಸಾಧ್ಯವಿಲ್ಲ. ಅದರಲ್ಲೂ ಪಶ್ಚಿಮ ಘಟ್ಟಗಳಲ್ಲಿ ಪ್ರಯಾಣಿಸುವುದು ಕಷ್ಟಸಾಧ್ಯ. ಏಕೆಂದರೆ ಈ ಪ್ರದೇಶದಲ್ಲಿ ದೀರ್ಘಕಾಲದವರೆಗೆ ಹೆಚ್ಚಿನ ಮಳೆ ಬೀಳುತ್ತದೆ. ನೀವು ಮಳೆಯಿಂದಾಗಿ ಈ ಪ್ರದೇಶವನ್ನು ತಪ್ಪಿಸುತ್ತಿದ್ದರೆ, ಮಳೆ ಬರುವ ಮೊದಲು ಪಶ್ಚಿಮ ಘಟ್ಟಗಳ ಈ ಪ್ರದೇಶಗಳಿಗೆ ಭೇಟಿ ನೀಡಿ.

ಹೌದು ಇನ್ನು ಮಳೆಗಾಲ ದೂರವಿರುವುದರಿಂದ ನೀವು ಮಳೆಗಾಲ ಶುರುವಾಗುವ ಮೊದಲು ಈ ಅದ್ಬುತ ಸ್ಥಳಗಳಿಗೆ ಭೇಟಿ ನೀಡಿ.

1) ಆಗುಂಬೆ, ಕರ್ನಾಟಕ ಆಗುಂಬೆಯನ್ನ ದಕ್ಷಿಣ ಭಾರತದ ಚಿರಾಪುಂಜಿ ಎಂದೂ ಕರೆಯುತ್ತಾರೆ. ಅತೀ ಹೆಚ್ಚು ಮಳೆಯನ್ನ ಈ ಪ್ರದೇಶ ಪಡೆಯುತ್ತದೆ. ಸದ್ಯಕ್ಕೆ ಮಾನ್ಸೂನ್ ದೂರದಲ್ಲಿದೆ. ನೀವು ಇಲ್ಲಿಗೆ ಭೇಟಿ ನೀಡಿ. ಅರಣ್ಯವನ್ನು ಅನ್ವೇಷಿಸಬಹುದು ಮತ್ತು ಇಲ್ಲಿನ ಕಾಡಿನ ತಪ್ಪಲಲ್ಲಿರುವ ಹಳ್ಳಿಗಳಿಗೆ ಹೋಗಬಹುದು. ಆಗುಂಬೆಯಲ್ಲಿದ್ದಾಗ ಪ್ರಕೃತಿ ಮತ್ತು ಸಾಂಸ್ಕೃತಿಕ ಅನುಭವಗಳನ್ನು ಪಡೆಯಿರಿ. ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿದೆ.

2) ವಟ್ಟಕನಲ್, ತಮಿಳುನಾಡು ವಟ್ಟಕನಾಲ್ ಗ್ರಾಮವು ಕೊಡೈಕೆನಾಲ್‌ನಲ್ಲಿದೆ. ಈ ಪ್ರದೇಶದಲ್ಲಿ ನೀವು ಕಾಣುವ ಅತ್ಯಂತ ರಮಣೀಯ ಸ್ಥಳಗಳಲ್ಲಿ ಇದು ಒಂದಾಗಿದೆ. ಇಲ್ಲಿನ ಹಸಿರಿನ ಸೊಬಗು ಮನಸ್ಸಿಗೆ ಮುದ ನೀಡುತ್ತದೆ. ಜೊತೆಗೆ ಇಲ್ಲಿ ಸಾಕಷ್ಟು ಹೋಮ್‌ಸ್ಟೇಗಳಿವೆ.

3) ಪೊನ್ಮುಡಿ, ಕೇರಳ ಪೊನ್ಮುಡಿ ತಿರುವನಂತಪುರಂನಲ್ಲಿದೆ ಮತ್ತು ಗಿರಿಧಾಮವು ಸುಂದರವಾಗಿದೆ. ಪ್ರಕೃತಿಯಲ್ಲಿ ಸ್ವಲ್ಪ ಶಾಂತವಾದ ಸಮಯವನ್ನ ನೀವು ಕಳೆಯಬೇಕು ಎಂದಾದರೆ ಇಲ್ಲಿಗೆ ಭೇಟಿ ನೀಡಿ. ಇಲ್ಲಿ ಪಕ್ಷಿಗಳು ಮತ್ತು ಚಿಟ್ಟೆಗಳನ್ನು ಆಕರ್ಷಕವಾಗಿರುತ್ತದೆ. ಜೊತೆಗೆ ಬೆಟ್ಟಗಳು ಮತ್ತು ಜಲಪಾತಗಳು ನಿಮಗೆ ಮುದ ನೀಡುತ್ತದೆ.

4) ಪೊಲ್ಲಾಚಿ, ತಮಿಳುನಾಡು ಪೊಲ್ಲಾಚಿಯಲ್ಲಿ ಅಣ್ಣಾಮಲೈ ಬೆಟ್ಟಗಳು ಮತ್ತು ರಮಣೀಯವಾದ ಚಹಾ ತೋಟಗಳನ್ನು ಕಾಣಬಹುದು. ಇದು ಕೊಯಮತ್ತೂರು ಜಿಲ್ಲೆಯಲ್ಲಿದೆ. ನೀವು ಹೆಚ್ಚು ಜನರಿರುವ ಊಟಿ ಮತ್ತು ಕೊಡೈಕೆನಾಲ್‌ ನಿಮಗೆ ಇಷ್ಟವಾಗದಿದ್ದರೆ ಪೊಲ್ಲಾಚಿ ನಿಮಗೆ ಉತ್ತಮ ಆಯ್ಕೆಯಾಗಿದೆ.

5) ಚೋರ್ಲಾ ಘಾಟ್ಸ್, ಗೋವಾ ಚೋರ್ಲಾ ಘಟ್ಟಗಳು ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಸಂಧಿಸುವ ಸ್ಥಳವಾಗಿದೆ. ಇದು ಗೋವಾದ ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದೆ. ಸಾಮಾನ್ಯವಾಗಿ ಗೋವಾ ಹಸಿರಾಗಿದೆ ಎಂದು ನೀವು ಭಾವಿಸಿದರೆ, ನೀವು ಚೋರ್ಲಾ ಘಾಟ್‌ಗಳನ್ನು ನೋಡುವವರೆಗೆ ಕಾಯಿರಿ. ಇಲ್ಲಿನ ಹಸಿರು ನಿಮಗೆ ಹಿತವಾದ ಮತ್ತು ಮರೆಯಲಾಗದ ನೆನಪಾಗಿರುವಂತೆ ಮಾಡುತ್ತದೆ.

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ