ವಿಟಮಿನ್​​ ಡಿ ಕೊರತೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NH) ಪ್ರಕಾರ, ಸೂರ್ಯನ ನೇರಳಾತೀತ ಕಿರಣಗಳು ನಿಮ್ಮ ಚರ್ಮದ ಮೇಲೆ ಬಿದ್ದಾಗ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ.

ವಿಟಮಿನ್​​ ಡಿ ಕೊರತೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ

Updated on: Jul 21, 2023 | 6:23 AM

ವಿಟಮಿನ್ ಡಿ ಆರೋಗ್ಯಕರ ಕೋಶಗಳ ಬೆಳವಣಿಗೆಗೆ ಅತ್ಯಂತ ಪ್ರಮುಖವಾದ ಸಂಯುಕ್ತವಾಗಿದೆ, ಮತ್ತು ಇದು ಕ್ಯಾಲ್ಸಿಯಂ ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ವಿಟಮಿನ್ ಡಿ ರಿಕೆಟ್ಸ್ ಮತ್ತು ಆಸ್ಟಿಯೊಪೊರೋಸಿಸ್ನಂತಹ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NH) ಪ್ರಕಾರ, ಸೂರ್ಯನ ನೇರಳಾತೀತ ಕಿರಣಗಳು ನಿಮ್ಮ ಚರ್ಮದ ಮೇಲೆ ಬಿದ್ದಾಗ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಇದಲ್ಲದೇ ಕೆಲವು ಆಹಾರಗಳಲ್ಲಿ ನೈಸರ್ಗಿಕವಾಗಿ ವಿಟಮಿನ್ ಡಿ ಸಮೃದ್ಧವಾಗಿದೆ.

ವಿಟಮಿನ್ ಡಿ ಅಧಿಕವಾಗಿರುವ ಆರೋಗ್ಯಕರ ಆಹಾರಗಳು:

ಸಾಲ್ಮನ್:

ಸಾಲ್ಮನ್‌ನಂತಹ ಕೊಬ್ಬಿನ ಮೀನುಗಳು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಆದ್ದರಿಂದ ನಿಮ್ಮಲ್ಲಿ ವಿಟಮಿನ್​​ ಡಿ ಕೊರತೆ ಕಂಡುಬಂದರೆ ನಿಮ್ಮ ಆಹಾರ ಕ್ರಮದಲ್ಲಿ ಸಾಲ್ಮನ್‌ನಂತಹ ಕೊಬ್ಬಿನ ಮೀನುಗಳನ್ನು ಸೇರಿಸಿ.

ಎಲೆಕೋಸು:

ಎಲೆಕೋಸು ವಿಟಮಿನ್ ಬಿ ಮತ್ತು ಡಿ ಯ ಮೂಲವಾಗಿದೆ. ಅಧ್ಯಯನಗಳು ಹೇಳುವಂತೆ ಕೇಂಪ್‌ಫೆರಾಲ್ ಮತ್ತು ಕ್ವೆರ್ಸೆಟಿನ್, ಅತ್ಯುತ್ತಮವಾದ ಉತ್ಕರ್ಷಣ ನಿರೋಧಕಗಳು ಮೆದುಳಿನ ಕಾರ್ಯನಿರ್ವಹಣೆಗೆ ಉತ್ತಮವಾಗಿವೆ.

ಕಿತ್ತಳೆ ಹಣ್ಣು:

ಕಿತ್ತಳೆ ಹಣ್ಣು ವಿಟಮಿನ್ ಡಿ ಯ ಸಮೃದ್ಧ ಮೂಲವಾಗಿದೆ. ಹೆಚ್ಚುವರಿಯಾಗಿ, ಇದು ದೇಹವು ಕಾಲಜನ್ ಅನ್ನು ತಯಾರಿಸಲು ಸಹಾಯ ಮಾಡುತ್ತದೆ. ಕಾಲಜನ್ ಗಾಯಗಳನ್ನು ಗುಣಪಡಿಸುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮಧುಮೇಹವು ಮೂತ್ರಪಿಂಡದ ಹಾನಿಯನ್ನುಂಟು ಮಾಡಬಹುದು: ಡಾ.ಸುಮಿತ್ ಶರ್ಮಾ

ಅಣಬೆ:

ಬಿಸಿಲಿನಲ್ಲಿ ಒಣಗಿದ ಅಣಬೆಗಳು ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದೆ. ಇದು ಉತ್ತಮ ರುಚಿಯ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಮೊಟ್ಟೆಯ ಹಳದಿ ಲೋಳೆ:

ಮೊಟ್ಟೆಯಲ್ಲಿನ ಹಳದಿ ಲೋಳೆಯು ವಿಟಮಿನ್ ಡಿ ಯಿಂದ ತುಂಬಿರುತ್ತದೆ. ಅಧ್ಯಯನಗಳ ಪ್ರಕಾರ, ಒಂದು ಮೊಟ್ಟೆಯ ಹಳದಿ ಲೋಳೆಯ ಜೊತೆಗೆ ಮೊಟ್ಟೆ ಕ್ಯಾಲ್ಸಿಯಂ, ಪ್ರೋಟೀನ್, ಸತು ಮತ್ತು ಅಗತ್ಯ ಖನಿಜಗಳ ಉತ್ತಮ ಮೂಲವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: