Vitamin D: ದೇಹದಲ್ಲಿ ವಿಟಮಿನ್ ಡಿ ಅತಿಯಾದರೆ ಏನಾಗುತ್ತದೆ?

|

Updated on: Mar 16, 2024 | 6:34 PM

ನಮ್ಮ ಮೂಳೆಗಳು, ಹಲ್ಲುಗಳು, ರೋಗನಿರೋಧಕ ವ್ಯವಸ್ಥೆ, ಮೆದುಳಿನ ಆರೋಗ್ಯ ಮತ್ತು ಉರಿಯೂತವನ್ನು ನಿಯಂತ್ರಿಸಲು ವಿಟಮಿನ್ ಡಿ ಅತ್ಯಗತ್ಯ. ಸೂರ್ಯನ ಬೆಳಕಿಗೆ ಪ್ರತಿಕ್ರಿಯೆಯಾಗಿ ದೇಹವು ವಿಟಮಿನ್ ಡಿ ಅನ್ನು ಉತ್ಪಾದಿಸುತ್ತದೆ. ಆದರೆ, ನಮ್ಮ ದೇಹದಲ್ಲಿ ವಿಟಮಿನ್ ಡಿ ಮಿತಿಮೀರಿದರೆ ಅದರಿಂದ ಅಡ್ಡಪರಿಣಾಮಗಳು ಕೂಡ ಉಂಟಾಗುತ್ತವೆ. ಈ ಕುರಿತು ನಿಮಗೆ ತಿಳಿದಿರುವುದು ಅಗತ್ಯ.

Vitamin D: ದೇಹದಲ್ಲಿ ವಿಟಮಿನ್ ಡಿ ಅತಿಯಾದರೆ ಏನಾಗುತ್ತದೆ?
ವಿಟಮಿನ್ ಡಿ
Follow us on

ಸೂರ್ಯನ ಕಿರಣ ಮಾತ್ರವಲ್ಲದೆ ಕೆಲವು ಆಹಾರಗಳು ಮತ್ತು ಸಪ್ಲಿಮೆಂಟ್​ಗಳು ಸಹ ನಮ್ಮ ದೇಹಕ್ಕೆ ವಿಟಮಿನ್ ಡಿಯನ್ನು ಒದಗಿಸುತ್ತವೆ. ವಿಟಮಿನ್ ಡಿ ಕೇವಲ ವಿಟಮಿನ್ ಮಾತ್ರವಲ್ಲ; ಹಾರ್ಮೋನ್ ಅಥವಾ ಪ್ರೋಹಾರ್ಮೋನ್ ಕೂಡ ಆಗಿದೆ. ವಿಟಮಿನ್ ಡಿಯ ಪ್ರಯೋಜನಗಳನ್ನು ನಾವು ತಿಳಿಯುವುದು ಬಹಳ ಮುಖ್ಯ. ಜನರು ಸಾಕಷ್ಟು ವಿಟಮಿನ್ ಡಿ ಪಡೆಯದಿದ್ದರೆ ದೇಹಕ್ಕೆ ಹೇಗೆ ತೊಂದರೆಯಾಗುತ್ತದೆಯೋ ಅದೇರೀತಿ ವಿಟಮಿನ್ ಡಿ ಅತಿ ಹೆಚ್ಚಾದರೆ ಅದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆಯೂ ತಿಳಿಯುವುದು ಬಹಳ ಮುಖ್ಯ.

ವಿಟಮಿನ್ ಡಿ ಕೊರತೆಯಿಂದ ಮೂಳೆ ನೋವು, ಕೀಲು ನೋವು, ಸ್ನಾಯು ದೌರ್ಬಲ್ಯ ಅಥವಾ ಸೆಳೆತ, ಮೂಳೆ ಅಥವಾ ಹಲ್ಲುಗಳ ಬೆಳವಣಿಗೆಯ ಸಮಸ್ಯೆಗಳು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ವಿಟಮಿನ್ ಡಿ ಕೊರತೆಯು ಹೈಪರ್​ಥೈರಾಯ್ಡಿಸಮ್​ಗೆ ಕಾರಣವಾಗಬಹುದು. ಇದು ಪ್ಯಾರಾಥೈರಾಯ್ಡ್ ಗ್ರಂಥಿಗಳು ಹಾರ್ಮೋನ್ ಅಸಮತೋಲನವನ್ನು ಉಂಟುಮಾಡಿದಾಗ ರಕ್ತದ ಕ್ಯಾಲ್ಸಿಯಂ ಮಟ್ಟವನ್ನು ತುಂಬಾ ಹೆಚ್ಚಿಸುತ್ತದೆ.

ಇದನ್ನೂ ಓದಿ: Vitamins: ಮಹಿಳೆಯರ ಆರೋಗ್ಯಕ್ಕೆ ಅತ್ಯಗತ್ಯವಾದ 5 ವಿಟಮಿನ್​ಗಳಿವು

ವಿಟಮಿನ್ ಡಿ ಮಿತಿಮೀರಿದ ಸೇವನೆಯ ಅಡ್ಡಪರಿಣಾಮಗಳು ಇಲ್ಲಿವೆ.

ಅಧಿಕ ರಕ್ತದೊತ್ತಡ:

ದೇಹದಲ್ಲಿ ಹೆಚ್ಚಿನ ವಿಟಮಿನ್ ಡಿ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು.

ಹಸಿವಿನ ಕೊರತೆ:

ಹಸಿವಿನ ಕೊರತೆ: ವಿಟಮಿನ್ ಡಿ ವಿಷತ್ವವು ಹಸಿವು ಕಡಿಮೆಯಾಗಲು ಕಾರಣವಾಗಬಹುದು.

ವಾಕರಿಕೆ:

ದೇಹದ ವಿಟಮಿನ್ ಡಿ ಹೆಚ್ಚಳದಿಂದಾಗಿ ನೀವು ವಾಕರಿಕೆ ಅನುಭವಿಸಬಹುದು.

ಮಲಬದ್ಧತೆ:

ಹೆಚ್ಚು ವಿಟಮಿನ್ ಡಿ ನಿಮ್ಮ ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Vitamin B: ದೇಹದಲ್ಲಿ ವಿಟಮಿನ್ ಬಿ ಅತಿಯಾದರೆ ಉಂಟಾಗುವ ತೊಂದರೆಗಳಿವು

ವಾಂತಿ:

ದೇಹದಲ್ಲಿ ವಿಟಮಿನ್ ಡಿ ಅಧಿಕವಾಗಿರುವ ಕಾರಣ ನೀವು ವಾಂತಿಯನ್ನು ಸಹ ಅನುಭವಿಸಬಹುದು.

ಖಿನ್ನತೆ:

ವಿಟಮಿನ್ ಡಿ ಮಟ್ಟದಲ್ಲಿನ ಹೆಚ್ಚಳವು ಖಿನ್ನತೆಯಂತಹ ಮಾನಸಿಕ ಕಾಯಿಲೆಗಳಿಗೆ ಕಾರಣವಾಗಬಹುದು.

ಆಗಾಗ ಮೂತ್ರ ವಿಸರ್ಜನೆ:

ವಿಟಮಿನ್ ಡಿ ರಕ್ತದ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ಆಗಾಗ ಮೂತ್ರ ವಿಸರ್ಜನೆಯನ್ನು ಪ್ರಚೋದಿಸುತ್ತದೆ ಮತ್ತು ನೀರಿನ ಅಂಶ ಕಡಿಮೆಯಾಗಲು ಕಾರಣವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ