AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brahmi leaves : ಒಂದೆಗಲದಲ್ಲಿದೆ ಆರೋಗ್ಯ ಗುಟ್ಟು, ಒಮ್ಮೆ ತಿಳಿದರೆ ಮತ್ತೆ ಮತ್ತೆ ಬಳಸ್ತೀರಾ

ನಮ್ಮ ಸುತ್ತಮುತ್ತಲೂ ಕಣ್ಣಾಯಿಸಿದರೆ ನೂರಾರು ಬಗೆಯ ಔಷಧೀಯ ಗಿಡ ಮೂಲಿಕೆಗಳು ಸಿಗುತ್ತವೆ. ನಮ್ಮ ಹಿರಿಯರು ಈ ಗಿಡ ಮೂಲಿಕೆಗಳನ್ನೆ ವಿವಿಧ ರೀತಿಯ ರೋಗಗಳನ್ನು ಗುಣ ಪಡಿಸಲೇಂದು ಬಳಸುತ್ತಿದ್ದರು. ಅಂತಹ ಸಸ್ಯಗಳಲ್ಲಿ ಒಂದೆಲಗ ಕೂಡ ಒಂದಾಗಿದೆ. ಹೆಸರೇ ಹೇಳುವಂತೆ ಒಂದೇ ಎಲೆಯನ್ನು ಹೊಂದಿದ್ದು, ಇದರಲ್ಲಿ ಔಷಧೀಯ ಗುಣವು ಹೇರಳವಾಗಿದೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾದಾಗ ಇದರಿಂದ ಔಷಧಿಯನ್ನು ತಯಾರಿಸಿ ಸೇವಿಸಿದರೆ ಬಹುಬೇಗನೇ ಗುಣಮುಖವಾಗುತ್ತದೆ

Brahmi leaves : ಒಂದೆಗಲದಲ್ಲಿದೆ ಆರೋಗ್ಯ ಗುಟ್ಟು, ಒಮ್ಮೆ ತಿಳಿದರೆ ಮತ್ತೆ ಮತ್ತೆ ಬಳಸ್ತೀರಾ
ಸಾಯಿನಂದಾ
| Edited By: |

Updated on: Mar 16, 2024 | 6:04 PM

Share

ಮನೆಯ ಹಿತ್ತಲಿನಲ್ಲಿ ಸಿಗುವ ಬಹುತೇಕ ಸಸ್ಯಗಳನ್ನು ಔಷಧಿಗಳ ಬಳಕೆಯೊಂದಿಗೆ ಆಹಾರದಲ್ಲಿ ಪದಾರ್ಥಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳ ಸಾಲಿನಲ್ಲಿ ಮೊದಲಿಗೆ ಇರುವುದೇ ಈ ಬ್ರಾಹ್ಮಿ ಅಥವಾ ಒಂದೆಲಗ. ಒಂದೆಲಗದಿಂದ‌ ಪಲ್ಯ, ತಂಬುಳಿ, ಚಟ್ನಿ, ಸಲಾಡ್‌ ಹೀಗೆ ವಿಧ ವಿಧವಾದ ರುಚಿಕರವಾದ ಆಹಾರವನ್ನು ತಯಾರಿಸಲಾಗುತ್ತದೆ. ಅಷ್ಟೇ ಅಲ್ಲದೇ ಆರೋಗ್ಯದಿಂದ ಹಿಡಿದು ತ್ವಚೆ ಹಾಗೂ ಕೂದಲಿನ ಆರೈಕೆಯವರೆಗೂ ಇದರ ಪ್ರಯೋಜನವು ಬಹುದೊಡ್ಡದಾಗಿದೆ.

  1. ಮೂರು ನಾಲ್ಕು ಚಮಚದಷ್ಟು ಒಂದೆಲಗ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ನಿಯಮಿತವಾಗಿ ಸೇವಿಸುತ್ತ ಬಂದರೆ ಸ್ವರದ ಸಮಸ್ಯೆಯೂ ದೂರವಾಗುತ್ತದೆ.
  2. ಒಂದೆಲಗ ಸೊಪ್ಪುನ್ನು ಅರೆದು ಅದರ ರಸವನ್ನು ಒಂದು ಲೋಟ ಬಿಸಿ ಹಾಲಿಗೆ ಸೇರಿಸಿ ದಿನಕ್ಕೆರಡು ಬಾರಿಕುಡಿಯುವುದರಿಂದ ಮಹಿಳೆಯರ ಬಿಳಿ ಮುಟ್ಟಿನ ಸಮಸ್ಯೆಯೂ ನಿವಾರಣೆಯಾಗುತ್ತದೆ.
  3. ಆನೆಕಾಲು ರೋಗದಿಂದ ಬಳಲುತ್ತಿರುವವರು ಈ ಒಂದೆಲಗದ ರಸವನ್ನು ಪ್ರತಿನಿತ್ಯ ಸೇವಿಸುತ್ತ ಬಂದರೆ ಆರೋಗ್ಯದಲ್ಲಿ ನಾನಾ ರೀತಿಯ ಬದಲಾವಣೆಗಳನ್ನು ಕಾಣುತ್ತೀರಿ.
  4. ಒಂದೆಲಗದ ರಸವನ್ನು ಹಿಂಡಿ ಗಾಯ ಹಾಗೂ ಚರ್ಮದ ಸಮಸ್ಯೆಯಿದ್ದ ಜಾಗಕ್ಕೆ ಹಚ್ಚುತ್ತಿದ್ದರೆ ಬೇಗನೆ ಗುಣಮುಖ ಕಾಣುತ್ತದೆ.
  5. ಕೆಮ್ಮಿನಂತಹ ಸಮಸ್ಯೆಗೆ ಒಂದೆಲಗ ಸೊಪ್ಪನ್ನು ಜಜ್ಜಿ ರಸ ತೆಗೆದು, ಇದಕ್ಕೆ ಶುಂಠಿ, ಕಾಳುಮೆಣಸು ಹಾಗೂ ಬೆಲ್ಲ ಸೇರಿಸಿ ಕಷಾಯ ಮಾಡಿ ಕುಡಿಯುವುದು ಪರಿಣಾಮಕಾರಿಯಾದ ಮನೆ ಮದ್ದಾಗಿದೆ.
  6. ಎಳ್ಳೆಣ್ಣೆಯನ್ನು ಒಂದೆಲಗದ ರಸದೊಂದಿಗೆ ಬೆರಸಿ ಕುದಿಸಿ, ಈ ಎಣ್ಣೆಯನ್ನು ತಲೆಗೆ ಹಚ್ಚುತ್ತಿದ್ದರೆ ಕಣ್ಣಿನ ದೃಷ್ಟಿಯೂ ಸುಧಾರಿಸುತ್ತದೆ.
  7. ವಿಪರೀತ ತಲೆನೋವು ಕಾಡುತ್ತಿದ್ದರೆ ಈ ಒಂದೆಲಗ ಸೊಪ್ಪುನ್ನು ಅರೆದು ರಸವನ್ನು ತೆಗೆದು ಹಣೆಗೆ ಲೇಪಿಸಿಕೊಂಡರೆ ತಕ್ಷಣವೇ ಈ ಸಮಸ್ಯೆಯೂ ನಿವಾರಣೆಯಾಗುತ್ತದೆ.
  8. ತೆಂಗಿನೆಣ್ಣೆಗೆ ಒಂದೆಲಗದ ರಸವನ್ನು ಸೇರಿಸಿ ಕುದಿಸಿ, ಈ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆ ಕೂದಲಿನ ಆರೋಗ್ಯವು ಉತ್ತಮವಾಗಿರುತ್ತದೆ.
  9. ಅರ್ಧ ಚಮಚ ಒಂದೆಲಗದ ರಸಕ್ಕೆ ಒಂದು ಚಮಚದಷ್ಟು ಜೇನುತುಪ್ಪ ಸೇರಿಸಿ ಸೇವಿಸಿದರೆ ರಕ್ತಹೀನತೆ ಸಮಸ್ಯೆಯಿಂದ ಮುಕ್ತಿ ಹೊಂದುವಿರಿವಿರಿ.
  10. ಹತ್ತು ಒಂದೆಲಗದ ಎಲೆ ಮತ್ತು ಐದು ಕಾಳುಮೆಣಸನ್ನು ಅರೆದು ಮಜ್ಜಿಗೆಯಲ್ಲಿ ಸೇರಿಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಹೃದಯದ ಆರೋಗ್ಯವು ಸುಧಾರಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್