
ಈ ಬೇಸಿಗೆಯಲ್ಲಿ ಚರ್ಮದ (skin) ಹೊಳಪಿಗೆ ಎಷ್ಟೇ ಕ್ರೀಮ್‌ಗಳು, ಸೀರಮ್‌ಗಳನ್ನು ಬಳಸಿದ್ರು ಪ್ರಯೋಜನ ಆಗುತ್ತಿಲ್ಲ ಎಂದು ತಲೆಬಿಸಿ ಮಾಡಿಕೊಳ್ಳಬೇಡಿ. ಈ ಬೇಸಿಗೆಯಲ್ಲೂ ಹೊಳಪಿನ ಚರ್ಮ, ಕಾಂತಿಯುತ ತ್ವಚೆ ಬೇಕಾದರೆ, ಪ್ರತಿದಿನ ಹೀಗೆ ಮಾಡಿ. ದಿನನಿತ್ಯದ ಆಹಾರದಲ್ಲಿ (foods) ಕೆಲವೊಂದು ಬದಲಾವಣೆಗಳು ಬೇಕು. ಅದಕ್ಕಾಗಿ ಆಹಾರದಲ್ಲಿ ಯಾವ ರೀತಿ ಬದಲಾವಣೆಗಳನ್ನು ಮಾಡಬೇಕು. ಹಾಗೂ ಈ ಬೇಸಿಗೆಯಲ್ಲೂ ಹೊಳೆಯುವ ಚರ್ಮ ಸಿಗಬೇಕಾದರೆ ಏನ್ ಮಾಡಬೇಕು? ಚರ್ಮವು ಆರೋಗ್ಯಕರವಾಗಿ ಮತ್ತು ಹೆಚ್ಚು ಕಾಂತಿಯುತವಾಗಿ ಇರಬೇಕೆಂದರೆ ಈ ಆಹಾರಗಳ ಸೇವನೆ ಮಾಡುವುದು ಉತ್ತಮ ಎಂದು ಹೇಳಲಾಗಿದೆ.
ಪೌಷ್ಟಿಕತಜ್ಞೆ ಸಾಕ್ಷಿ ಲಾಲ್ವಾನಿ ಹೇಳಿರುವ ಪ್ರಕಾರ, ಚರ್ಮದಿಂದ ವಯಸ್ಸಾಗುವಿಕೆ ಬಗ್ಗೆ ತಿಳಿಸುತ್ತದೆ. ಅದು ವೇಗವಾಗಿ ಆಗಲು ಕೆಲವೊಂದು ಆಹಾರಗಳು ಕಾರಣ ಎಂದು ಹೇಳಿದ್ದಾರೆ. ಇದನ್ನು ವೇಗಗೊಳಿಸುವ ಕೆಲವು ಸಾಮಾನ್ಯ ಆಹಾರ ತಿನ್ನಬಾರದು ಎಂದಿದ್ದಾರೆ. ಸುಕ್ಕುಗಳನ್ನು ಕಡಿಮೆ ಮಾಡಲು ಮತ್ತು ಉತ್ತಮ ಚರ್ಮವನ್ನು ಬೆಂಬಲಿಸಲು ಸಹಾಯ ಮಾಡುವ ಕೆಲವು ಸರಳ ಆಹಾರ ಪದ್ಧತಿಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಕಾಲಜನ್ ಆಹಾರಗಳು: ಕಾಲಜನ್ ಚರ್ಮವನ್ನು ದೃಢವಾಗಿ ಮತ್ತು ಬಲವಾಗಿ ಇಡುತ್ತದೆ. 25 ವರ್ಷ ದಾಟಿದ ನಂತರವು ನಿಮ್ಮ ದೇಹವು ಅದನ್ನು ಕಡಿಮೆ ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದು ಸಡಿಲವಾದ, ಸುಕ್ಕುಗಟ್ಟಿದ ಚರ್ಮಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಚರ್ಮವನ್ನು ದೃಢವಾಗಿ ಹಾಗೂ ಹೊಳೆಯುವಂತೆ ಮಾಡಲು ಕಾಲಜನ್-ವರ್ಧಕ ಆಹಾರ ಸೇವಿಸುವುದು ಉತ್ತಮ.
ಸೂಪ್
ಕೋಳಿ
ಮೀನು
ಸಿಟ್ರಸ್ ಹಣ್ಣುಗಳು
ನೀರು ಕುಡಿಯಿರಿ, ಆದರೆ ಅದಕ್ಕೆ ತೇವಾಂಶ ಆಹಾರ ಸೇರಿಬೇಡಿ: ಚರ್ಮಕ್ಕೆ ಜಲಸಂಚಯನವು ಉತ್ತಮವಾಗಿರಲುನೀರು ಕುಡಿಯಿರಿ. ಆದರೆ ಅದಕ್ಕೆ ತೇವಾಂಶ ಆಹಾರ ಸೇರಿಸಬೇಡಿ. ನೀರು ಸೋಡಿಯಂ ಮತ್ತು ಪೊಟ್ಯಾಸಿಯಮ್ ಮಟ್ಟವನ್ನು ನಿಯಂತ್ರಣದಲ್ಲಿಡಲು, ನಿಮ್ಮ ಚರ್ಮಕ್ಕೆ ತೇವಾಂಶವನ್ನು ಸೇರಿಸಲು ಮತ್ತು ಚರ್ಮ ಒಣಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಸೌತೆಕಾಯಿ
ಕಲ್ಲಂಗಡಿ
ತೆಂಗಿನ ನೀರು
ಎಲೆಗಳ ಸೊಪ್ಪುಗಳು
ಎಲಾಜಿಕ್ ಆಮ್ಲ-ಭರಿತ ಆಹಾರ : ಎಲಾಜಿಕ್ ಆಮ್ಲವು ಸಸ್ಯ ಆಧಾರಿತ ಉತ್ಕರ್ಷಣ ನಿರೋಧಕವಾಗಿದ್ದು ಅದು ಚರ್ಮದ ಮೆಲಟೋನಿನ್ ಮಟ್ಟವನ್ನು ಉತ್ತೇಜಿಸುತ್ತದೆ. ಮೆಲಟೋನಿನ್ ಚರ್ಮದ ಟೋನ್ ಮತ್ತು ಸಮತೆಯಲ್ಲಿ ಪಾತ್ರವಹಿಸುತ್ತದೆ. ಎಲಾಜಿಕ್ ಆಮ್ಲದ ಕೊರತೆಯು ಈ ಸಮತೋಲನವನ್ನು ಹಾಳುಮಾಡುತ್ತದೆ ಮತ್ತು ಇದು ಮಂದ ಚರ್ಮಕ್ಕೆ ಕಾರಣವಾಗುತ್ತದೆ.
ಚೆರ್ರಿಗಳು
ದ್ರಾಕ್ಷಿಗಳು
ಬೀಜಗಳು
ಇದನ್ನೂ ಓದಿ: ಮಾಲಿನ್ಯದಿಂದ ಚರ್ಮ ರೋಗ ಬರದಂತೆ ತಡೆಯಲು ವೈದ್ಯರು ನೀಡಿರುವ ಸಲಹೆ ಪಾಲಿಸಿ
ನಿರೋಧಕಗಳ ಕೊರತೆ: ಆಹಾರದಲ್ಲಿ ಉತ್ಕರ್ಷಣ ನಿರೋಧಕಗಳು ಕಡಿಮೆ ಇದ್ದರೆ, ನಿಮ್ಮ ದೇಹವು ಹೆಚ್ಚು ವಿಷವನ್ನು ಉತ್ಪಾದನೆ ಮಾಡಬಹುದು. ಅದು ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ನಿಮ್ಮ ಚರ್ಮದಲ್ಲಿ ಆಮ್ಲಜನಕ ಮತ್ತು ರಕ್ತ ಪರಿಚಲನೆಯಲ್ಲಿ ತೊಂದರೆ ಉಂಟುಮಾಡುತ್ತದೆ.
ಹಣ್ಣುಗಳು
ಎಲೆಗಳ ಸೊಪ್ಪುಗಳು
ಬಾದಾಮಿ
ಸಕ್ಕರೆ ಹೆಚ್ಚು ತಿನ್ನಬೇಡಿ: ಸಿಹಿತಿಂಡಿಗಳ ಮೇಲಿನ ಹಂಬಲವನ್ನು ನಿರ್ಲಕ್ಷಿಸುವುದು ಕಷ್ಟ , ಆದರೆ ಹೆಚ್ಚು ಸಕ್ಕರೆ ನಿಮ್ಮ ದೇಹದಲ್ಲಿನ ಕಾಲಜನ್ ಮೇಲೆ ಪರಿಣಾಮ ಬೀರುತ್ತದೆ. ಸಕ್ಕರೆ ಅಣುಗಳು ಕಾಲಜನ್‌ಗೆ ಅಂಟಿಕೊಳ್ಳುತ್ತವೆ. ಅದನ್ನು ಕುಗ್ಗಿಸು ಕೆಲಸ ಮಾಡುತ್ತದೆ. ಚರ್ಮ ವಯಸ್ಸಾದಂತೆ ಮತ್ತು ಸುಕ್ಕುಗಳಾಗಿ ಕಾಣಿಸಿಕೊಳ್ಳಬಹುದು.
ತಾಜಾ ಹಣ್ಣುಗಳು
ಹಣ್ಣು
ಹನಿ ತೆಂಗಿನಕಾಯಿ ಸಕ್ಕರೆ
ಜೀವನಶೈಲಿ ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ