Green Tea Bag : ಬಳಸಿದ ಗ್ರೀನ್ ಟೀ ಬ್ಯಾಗ್ಗಳನ್ನು ಎಸೆಯಬೇಡಿ ಇದರಲ್ಲಿದೆ ಹಲವು ಪ್ರಯೋಜನ
ಟೀ ಕಾಫಿ ಎಂದರೆ ಯಾರಿಗೆ ತಾನೇ ಇಷ್ಟ ಹೇಳಿ. ಆದರೆ ಅತಿಯಾದ ಟೀ ಕಾಫಿ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಗ್ರೀನ್ ಟೀ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ. ಇದರಲ್ಲಿ ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಇವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಆದರೆ ಒಮ್ಮೆ ಬಳಸಿದ ಗ್ರೀನ್ ಟೀ ಬ್ಯಾಗ್ ಗಳನ್ನು ಎಸೆಯುವ ಮುನ್ನ ಇದರ ಉಪಯೋಗಗಳೇನು ಎಂದು ತಿಳಿಯುವುದು ಒಳ್ಳೆಯದು.

ಸಾಂದರ್ಭಿಕ ಚಿತ್ರ
ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರು ಗ್ರೀನ್ ಟೀಯನ್ನು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಡಯಟ್ ಮಾಡುವವರು ಮೊದಲು ಆಯ್ಕೆ ಮಾಡುವುದೇ ಈ ಗ್ರೀನ್ ಟೀಯನ್ನು. ಇದರ ನಿಯಮಿತ ಸೇವನೆಯಿಂದ ದೀರ್ಘಕಾಲದ ಕಾಯಿಲೆಗಳು ಬರದಂತೆ ತಡೆಯುತ್ತದೆ. ಅದಲ್ಲದೇ ತೂಕ ಇಳಿಕೆಗೂ ಸಹಕಾರಿಯಾಗಿದೆ. ಅದಲ್ಲದೇ ಒಮ್ಮೆ ಬಳಸಿದ ಗ್ರೀನ್ ಟೀ ಬ್ಯಾಗನ್ನು ಮತ್ತೆ ವಿವಿಧ ರೀತಿಯಲ್ಲಿ ಮರುಬಳಕೆ ಮಾಡಬಹುದು.
ಬಳಸಿದ ಗ್ರೀನ್ ಟೀ ಬ್ಯಾಗಿನ ಮರುಬಳಕೆ ಹೀಗಿರಲಿ
- ಬಳಸಿದ ಗ್ರೀನ್ ಟೀ ಬ್ಯಾಗ್ ತೆಗೆದು ಬಿಸಿಲಿನಲ್ಲಿ ಒಣಗಿಸಿ. ಈ ಒಣಗಿದ ಗ್ರೀನ್ ಟೀಯನ್ನು ಕಬೋರ್ಡ್ ಗೆ ಹಾಕಿದರೆ ಕೆಟ್ಟ ವಾಸನೆ ಬರುವುದಿಲ್ಲ.
- ಹೂವಿನ ಗಿಡಗಳಿಗೆ, ಸಸ್ಯಗಳ ಬುಡಕ್ಕೆ ಗ್ರೀನ್ ಟೀ ಪುಡಿಯನ್ನು ಹಾಕಿದರೆ ಗಿಡಗಳು ಸೊಂಪಾಗಿ ಬೆಳೆಯುತ್ತವೆ.
- ಕೆಲವೊಮ್ಮೆ ಫ್ರಿಡ್ಜ್ ನಿಂದ ಕೆಟ್ಟ ವಾಸನೆ ಬರುತ್ತದೆ. ಹೀಗಾದಾಗ ಬಿಸಿಲಿನಲ್ಲಿ ಒಣಗಿಸಿದ ಗ್ರೀನ್ ಟೀ ಬ್ಯಾಗನ್ನು ಫ್ರಿಡ್ಜ್ ನಲ್ಲಿಟ್ಟರೆ ಕೆಟ್ಟ ವಾಸನೆ ದೂರವಾಗುತ್ತದೆ.
- ಈ ಗ್ರೀನ್ ಟೀಯನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿಕೊಂಡರೆ ಕೂದಲು ಮೃದುವಾಗುವುದಲ್ಲದೆ ಹೊಳಪು ಹೆಚ್ಚಾಗುತ್ತದೆ.
- ನಾನ್ ಸ್ಟಿಕ್ ಪ್ಯಾನ್ ಗಳನ್ನು ಜಿಡ್ಡಿನಾಂಶವಿರುತ್ತದೆ. ಎಷ್ಟೇ ತೊಳೆದರೂ ಎಣ್ಣೆಯ ಅಂಶ ಬಿಡುವುದಿಲ್ಲ. ಗ್ರೀನ್ ಟೀ ಪುಡಿ ಬಳಸಿ ತೊಳೆದರೆ ಎಣ್ಣೆ ಅಂಶವು ಬಿಡುತ್ತದೆ.
- ಒಂದು ಬಕೆಟ್ ನೀರಿನಲ್ಲಿ ಬಳಸಿದ ಟೀ ಬ್ಯಾಗ್ ಹಾಕಿ, ಅದರಲ್ಲಿ ಪಾದಗಳನ್ನು ಇಟ್ಟರೆ ಪಾದದ ಬಿರುಕು ಹಾಗೂ ಒರಟು ಇಲ್ಲವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




