ಮನೆಯಲ್ಲಿಯೇ ಸುಲಭವಾಗಿ ಕಲ್ಲಂಗಡಿ ಬೆಳೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಬೇಸಿಗೆಗೆ ರಸಭರಿತವಾಗಿರುವ ಕಲ್ಲಂಗಡಿ ಹಣ್ಣುಗಳನ್ನು ತಿನ್ನುವುದೇ ಒಂದು ರೀತಿಯ ಸಂತೋಷ. ಆದರೆ ಅವುಗಳನ್ನು ಮಾರುಕಟ್ಟೆಯಲ್ಲಿ ದುಡ್ಡು ಕೊಟ್ಟು ಖರೀದಿ ಮಾಡುವುದರ ಬದಲು ಮನೆಯಲ್ಲಿಯೇ ಬೆಳೆದು ಅವುಗಳನ್ನು ನಾವೇ ಕತ್ತರಿಸಿ ತಿನ್ನುವುದರಲ್ಲಿರುವ ಖುಷಿ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ. ಆದರೆ ಚಿಕ್ಕ ಜಾಗವಿದ್ದಾಗ ಮನೆಯಲ್ಲಿ ಈ ಬಳ್ಳಿಯನ್ನು ಹೇಗೆ ಬೆಳೆಸಬೇಕು? ಅದರ ಆರೈಕೆ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಿ.

ಮನೆಯಲ್ಲಿಯೇ ಸುಲಭವಾಗಿ ಕಲ್ಲಂಗಡಿ ಬೆಳೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 09, 2025 | 3:21 PM

ಬೇಸಿಗೆಯಲ್ಲಿ (Summer) ಮನೆಯಲ್ಲಿಯೇ ಆದ ಕಲ್ಲಂಗಡಿ (watermelons) ತಿನ್ನುವುದರಲ್ಲಿ ಇರುವ ಖುಷಿ ಅಂಗಡಿಯಿಂದ ದುಡ್ಡು ಕೊಟ್ಟು ತರುವುದರಲ್ಲಿ ಇರುವುದಿಲ್ಲ. ಮನೆಯಲ್ಲಿ ಸ್ವಲ್ಪವೇ ಸ್ವಲ್ಪ ಜಾಗವಿದ್ದರೂ ಕೂಡ ಈ ಹಣ್ಣನ್ನು ಸುಲಭವಾಗಿ ಬೆಳೆಯಬಹುದು. ಮನೆಯ ಸುತ್ತಮುತ್ತ ಜಾಗವಿರಲಿ ಇಲ್ಲದಿರಲಿ ಅಥವಾ ಬಾಲ್ಕನಿಗಳಲ್ಲಿ (balcony gardening) ಚಿಕ್ಕ ಜಾಗವಿರಲಿ, ಎಲ್ಲಿ ಚೆನ್ನಾಗಿ ಬಿಸಿಲು ಬರುತ್ತದೆಯೋ ಅಲ್ಲಿಯೇ ಈ ರಸಭರಿತವಾಗಿರುವ ಹಣ್ಣುಗಳನ್ನು ಬೆಳೆಸಬಹುದು. ಸಣ್ಣ ಬೀಜಗಳನ್ನು ಹಾಕಿ, ಅವು ಬಳ್ಳಿಯಾಗಿ ಬೆಳೆದು, ಕಲ್ಲಂಗಡಿ ಹಣ್ಣಾಗಿ ಅದನ್ನು ಕತ್ತರಿಸಿ ತಿನ್ನುವ ಖುಷಿಯನ್ನು ನೀವು ಅನುಭವಿಸಬೇಕಾ? ಹಾಗಾದರೆ ಇದನ್ನು ಮನೆಯಲ್ಲಿಯೇ ಹೇಗೆ ಬೆಳೆಯಬಹುದು ಎಂಬುದನ್ನು ತಿಳಿದುಕೊಳ್ಳಿ. ಹಂತ ಹಂತವಾದ ಸಲಹೆ (Advice) ಇಲ್ಲಿದೆ.

ಸರಿಯಾದ ಸ್ಥಳದ ಆಯ್ಕೆ

ಕಲ್ಲಂಗಡಿ ಹಣ್ಣುಗಳನ್ನು ಬೆಳೆಯುವುದಕ್ಕೆ ನಿರ್ಧಾರ ಮಾಡಿದ ಮೇಲೆ ನೀವು ಮಾಡಬೇಕಾದ ಮೊದಲ ಕೆಲಸ ಆ ಹಣ್ಣುಗಳನ್ನು ಬೆಳೆಯಲು ಸರಿಯಾದ ಜಾಗವನ್ನು ಆರಿಸುವುದು. ಪೂರ್ಣ ಪ್ರಮಾಣದಲ್ಲಿ ಸೂರ್ಯನ ಬೆಳಕು ಬೀಳುವ ಜಾಗ ಬೇಕಾಗುತ್ತದೆ. ಏಕೆಂದರೆ ಈ ಕಲ್ಲಂಗಡಿ ಹಣ್ಣುಗಳು ಸರಿಯಾಗಿ ಪಕ್ವವಾಗಲು ಅವುಗಳಿಗೆ ಪ್ರತಿದಿನ ಎಂಟ ರಿಂದ ಹತ್ತು ಗಂಟೆಗಳ ವರೆಗೆ ಸೂರ್ಯನ ಬೆಳಕು ಬೇಕಾಗುತ್ತದೆ.

ಮಣ್ಣನ್ನು ಸಿದ್ಧಪಡಿಸಿಕೊಳ್ಳುವುದು

ನಾಟಿ ಮಾಡುವ ಮೊದಲು, ಮಣ್ಣಿಗೆ ಕಾಂಪೋಸ್ಟ್ ಅಥವಾ ಹಳೆಯ ಗೊಬ್ಬರ ಸೇರಿಸಿ ಮಣ್ಣಿಗೆ ಒಳ್ಳೆಯ ಪೋಷಣೆ ಸಿಗುವ ರೀತಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಿ. ನೀವು ಈ ಮಣ್ಣಿಗೆ ಮಿಶ್ರಗೊಬ್ಬರ ಅಥವಾ ಹಸುವಿನ ಗೊಬ್ಬರವನ್ನು ಬಳಸಬಹುದು. ಬಳಿಕ ನಾಟಿ ಮಾಡುವ ಮೊದಲು ಅದನ್ನು ಮಣ್ಣಿಗೆ ಹಾಕಬೇಕು. ಕೆಲವೊಮ್ಮೆ ತಾಜಾ ಗೊಬ್ಬರ ಹಾಕುವುದರಿಂದ ಅವು ಎಳೆಯ ಬೇರುಗಳನ್ನು ಸುಡಬಹುದು.

ಇದನ್ನೂ ಓದಿ
ಕಣ್ಣುಗಳಲ್ಲಿ ಕಂಡುಬರುವ ತುರಿಕೆ ಈ ರೋಗದ ಮುನ್ಸೂಚನೆ
ನೇರಳೆ ಹಣ್ಣು ತಿಂದು ಅದರ ಬೀಜ ಎಸೆಯವ ಮುನ್ನ ಉಪಯೋಗ ತಿಳಿಯಿರಿ
ನಿಂಬೆಹಣ್ಣಿಗಿಂತ ಒಣಗಿದ ನಿಂಬೆ ಒಳ್ಳೆಯದು!
ಮಾಂಸಾಹಾರ ಸೇವನೆ ಮಾಡಲು ಸಾಧ್ಯವಾಗದಿದ್ದರೆ ಈ ಹಣ್ಣನ್ನು ತಿನ್ನಿ

ಕಲ್ಲಂಗಡಿ ಬೀಜಗಳನ್ನು ನೆಡಿ

ಸೂರ್ಯನ ಬೆಳಕು ಚೆನ್ನಾಗಿ ಸಿಗುವ ಜಾಗದಲ್ಲಿ ಮಣ್ಣಿನ ಪಾಟ್ ಗಳಲ್ಲಿ ಬೀಜಗಳನ್ನು ಬಿತ್ತುವ ಮೂಲಕ ಪ್ರಾರಂಭಿಸಿ. ಈ ಸಮಯದಲ್ಲಿ ಮಣ್ಣನ್ನು ತೇವವಾಗಿರಿಸಿಕೊಳ್ಳಿ ಆದರೆ ಅತಿಯಾಗಿ ನೀರಿರದಂತೆ ನೋಡಿಕೊಳ್ಳಿ. ಇನ್ನು ಹೊರಾಂಗಣದಲ್ಲಿ ನೇರವಾಗಿ ಬಿತ್ತನೆ ಮಾಡುವುದಾದರೆ ಬೆಚ್ಚಗಿನ ವಾತಾವರಣ ಇರುವಲ್ಲಿ ಬೀಜಗಳನ್ನು ಮಣ್ಣಿನಲ್ಲಿ ಬಿತ್ತಬಹುದು. ಆದರೆ ನೀವು ಈ ಬೀಜಗಳನ್ನು ಸುಮಾರು ಒಂದು ಇಂಚು ಆಳದಲ್ಲಿ ನೆಡಬೇಕು ಮತ್ತು ಅವುಗಳ ನಡುವೆ ಮೂರರಿಂದ ನಾಲ್ಕು ಅಡಿ ಅಂತರವನ್ನು ಕಾಪಾಡಿಕೊಳ್ಳಬೇಕು.

ಬಳ್ಳಿಗೆ ನೀರು ಹಾಕಬೇಕು

ಕಲ್ಲಂಗಡಿ ಹಣ್ಣಿನ ಬಳ್ಳಿಗಳು ಬದುಕುವುದಕ್ಕೆ ತೇವಾಂಶದ ಅಗತ್ಯವಿರುತ್ತದೆ, ವಿಶೇಷವಾಗಿ ಅವುಗಳು ಬೆಳೆಯುವ ಸಮಯದಲ್ಲಿ ವಾರಕ್ಕೆ ಒಂದರಿಂದ ಎರಡು ಇಂಚು ನೀರನ್ನು ಹಾಕಬೇಕು. ಬಳ್ಳಿಯ ಮೇಲ್ಭಾಗಕ್ಕಿಂತ ಹೆಚ್ಚಾಗಿ ಅದರ ಬುಡಕ್ಕೆ ನೀರು ಹಾಕುವುದು ಉತ್ತಮ. ಇದರಿಂದ ನೀರು ಬೇರುಗಳನ್ನು ತಲುಪುತ್ತದೆ ಮತ್ತು ಎಲೆಗಳ ಮೇಲೆ ತೇವಾಂಶ ಉಳಿಯುವುದನ್ನು ತಡೆಯುತ್ತದೆ.

ಪರಾಗಸ್ಪರ್ಶ ಮತ್ತು ಬಳ್ಳಿ ನಿರ್ವಹಣೆ

ಕಲ್ಲಂಗಡಿ ಹಣ್ಣಿನ ಬಳ್ಳಿಯ ಗಂಡು ಹೂವುಗಳು ಪರಾಗಸ್ಪರ್ಶವಾದ ನಂತರ ಹಣ್ಣಾಗಿ ಬೆಳೆಯುತ್ತದೆ.

ಕೀಟ ಮತ್ತು ರೋಗ ನಿಯಂತ್ರಣ

ಕಲ್ಲಂಗಡಿ ಹಣ್ಣಿನ ಬಳ್ಳಿಗೆ, ಕೀಟಗಳು ಬಂದು ಅವುಗಳನ್ನು ಹಾನಿಗೊಳಿಸುತ್ತದೆ ಜೊತೆಗೆ ರೋಗ ಹರಡುತ್ತದೆ. ಹಾಗಾಗಿ ಕೀಟಗಳನ್ನು ದೂರವಿಡುವ ಮೂಲಕ ಬಳ್ಳಿಯನ್ನು ರಕ್ಷಿಸುವುದು ತುಂಬಾ ಮುಖ್ಯ. ಹೆಚ್ಚುವರಿಯಾಗಿ, ಬೇವಿನ ಎಣ್ಣೆ ಅಥವಾ ಕೀಟನಾಶಕ ಬಳಸುವುದರಿಂದ ಕೀಟಗಳನ್ನು ತಡೆಯಬಹುದು, ಆದರೆ ಲೇಡಿಬಗ್‌ ಗಳು ಬಳ್ಳಿಗೆ ಪ್ರಯೋಜನಕಾರಿಯಾಗಿದೆ. ಹಾಗಾಗಿ ಬಳ್ಳಿಗಳು ಚೆನ್ನಾಗಿ ಬೆಳೆಯುತ್ತಿದೆಯೋ ಇಲ್ಲವೋ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಿ, ಬಳ್ಳಿ ಆರೋಗ್ಯವಾಗಿಡಲು ಸೋಂಕಿತ ಎಲೆಗಳನ್ನು ತೆಗೆದುಹಾಕಿ.

ಇದನ್ನೂ ಓದಿ: ಕಣ್ಣುಗಳಲ್ಲಿ ಕಂಡುಬರುವ ತುರಿಕೆ ಈ ರೋಗದ ಆರಂಭಿಕ ಹಂತವಾಗಿರಬಹುದು!

ಕಲ್ಲಂಗಡಿಯ ಕೊಯ್ಲು

ಹಣ್ಣು ಸಾಮಾನ್ಯವಾಗಿ ಬೆಳೆದು ಪೂರ್ಣವಾಗಿ ಪಕ್ವವಾಗಲು 60 ರಿಂದ 90 ದಿನಗಳನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಕಲ್ಲಂಗಡಿ ಹಣ್ಣಾಗಿದ್ದರೆ ಕೆಳಭಾಗದಲ್ಲಿ ಕೆನೆ ಹಳದಿ ಬಣ್ಣ ಮೂಡಿರುತ್ತದೆ, ಈ ರೀತಿಯಾದ ಕಲ್ಲಂಗಡಿ ಕೊಯ್ಲಿಗೆ ಸಿದ್ಧವಾಗಿರುತ್ತದೆ. ಮತ್ತೊಂದು ಲಕ್ಷಣ, ಎಲೆಗಳು ಒಣಗಿ ಕಂದು ಬಣ್ಣಕ್ಕೆ ತಿರುಗಿದ್ದರೆ ನಿಮ್ಮ ಕಲ್ಲಂಗಡಿ ಕೊಯ್ಲಿಗೆ ಸಿದ್ಧವಾಗಿದೆ ಎಂಬುದರ ಸಂಕೇತವಾಗಿದೆ.

ಆದರೆ ಕಲ್ಲಂಗಡಿ ಬೆಳೆಯುವ ಮೊದಲು ನಿಮ್ಮ ಹವಾಮಾನಕ್ಕೆ ತಕ್ಕನಾಗಿರುವ ಸೂಕ್ತವಾದ ಕಲ್ಲಂಗಡಿ ಪ್ರಭೇದಗಳನ್ನು ಆರಿಸಿಕೊಳ್ಳಿ. ಇವುಗಳನ್ನು ಬೆಳೆದ ಮೇಲೆ ನಿಯಮಿತವಾಗಿ ನೀರು ಹಾಕುವುದು, ಸೂಕ್ತವಾದ ಗೊಬ್ಬರ ಹಾಕುವುದು ಮತ್ತು ಕೀಟ ನಿರ್ವಹಣೆ ಆರೋಗ್ಯಕರ ಬಳ್ಳಿ ಬೆಳೆಯುವುದಕ್ಕೆ ಈ ಎಲ್ಲಾ ಅಂಶಗಳು ಬಹಳ ಪ್ರಮುಖವಾಗಿವೆ. ಕೊಯ್ಲು ಮಾಡಿದ ನಂತರ, ಮುಂದಿನ ಋತುವಿನಲ್ಲಿ ಕಲ್ಲಂಗಡಿ ನೆಡುವುದಕ್ಕೆ ಬೀಜಗಳನ್ನು ಉಳಿಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ