ಭಾವನಾತ್ಮಕ ಸುರಕ್ಷತೆ ಮತ್ತು ಬದ್ಧತೆ ಆರೋಗ್ಯಕರ ಸಂಬಂಧದ ತಳಹದಿಯಾಗಿದೆ. ನೀವು ಸಂಬಂಧದಲ್ಲಿರುವಾಗ ನಿಮಗೆ ನಂಬಿಕೆ, ಆರೋಗ್ಯಕರ ಸಂವಹನ ಮತ್ತು ಒಟ್ಟಾರೆ ಯೋಗಕ್ಷೇಮದ ಅಗತ್ಯವಿರುತ್ತದೆ. ಸಂಬಂಧದಲ್ಲಿ ಭಾವನಾತ್ಮಕ ಸುರಕ್ಷತೆ ಇದ್ದಾಗ ಮಾತ್ರ ಇವೆಲ್ಲವೂ ಸಾಧ್ಯ. ಕೆಲವೊಮ್ಮೆ ನಾವುಗಳು ಸಂಬಂಧದಲ್ಲಿ ಅಸುರಕ್ಷಿತ ಭಾವನೆಯನ್ನು ಎದುರಿಸಿರುತ್ತೇವೆ. ಆದ್ದರಿಂದ ಸಂಬಂಧವನ್ನು ಆರೋಗ್ಯಕರವಾಗಿರಿಸಲು ನಾವು ನಮಗೆ ಮತ್ತು ಸಂಗಾತಿಗೆ ಸಂಬಂಧದಲ್ಲಿ ಸುರಕ್ಷಿತವಾಗಿರುವ ಭಾವನೆಯನ್ನು ಮೂಡಿಸುವುದು ಮುಖ್ಯ. ದಿನದ ಒಂದು ಸಣ್ಣ ಅಭ್ಯಾಸಗಳೊಂದಿಗೆ, ನಮ್ಮ ಸಂಗಾತಿಯು ಸಂಬಂಧದಲ್ಲಿ ಸುರಕ್ಷಿತವಾಗಿರಲು ನಾವು ಸಹಾಯ ಮಾಡಬಹುದು. ಮತ್ತು ಅವರಿಗೆ ಸಂಬಂಧದಲ್ಲಿ ಆರೋಗ್ಯಕರ ಸ್ಥಳವನ್ನು ರಚಿಸಬಹುದು.
ಥೆರಪಿಸ್ಟ್ ಸದಾಫ್ ಸಿದ್ದಿಕಿ ಅವರು ಸಂಗಾತಿಯು ಸಂಬಂಧದಲ್ಲಿ ಸುರಕ್ಷಿತ ಭಾವನೆಯನ್ನು ಹೊಂದಲು ಸಹಾಯ ಮಾಡುವ ನಾಲ್ಕು ಮಾರ್ಗಗಳನ್ನು ವಿವರಿಸಿದ್ದಾರೆ:
ಅವರ ನ್ಯೂನತೆಗಳನ್ನು ಗೌರವದಿಂದ ಸಮೀಪಿಸಿ: ಕೆಲವೊಮ್ಮೆ ಜನರು ತಮ್ಮ ದುರ್ಬಲತೆಯಿಂದಾಗಿ ಸಂಬಂಧದಲ್ಲಿ ಕಷ್ಟಕರ ಸಮಯವನ್ನು ಎದುರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಸಂಗಾತಿಯ ನ್ಯೂನತೆಗಳನ್ನು ಟೀಕಿಸುವ ಬದಲು, ನಾವು ಅವರನ್ನು ಗೌರವ ಮತ್ತು ಸಹಾನೂಭೂತಿಯಿಂದ ಮಾತನಾಡಿಸಬೇಕು. ಅವರನ್ನು ಪ್ರೀತಿಯಿಂದ ಸಮಧಾನಪಡಿಸಬೇಕು. ಇದು ಸಂಗಾತಿಯಲ್ಲಿ ಸುರಕ್ಷತೆಯ ಭಾವನೆಯನ್ನು ಮೂಡಿಸುತ್ತದೆ.
ಇದನ್ನೂ ಓದಿ:Relationship: ನಿಮ್ಮ ಸಂಬಂಧದಲ್ಲಿ ಈ ಬದಲಾವಣೆಯಾಗಲು ಕಾರಣವೇನು?
ಒಳ್ಳೆಯ ಸಂವಹನ: ಒಂದು ಸಣ್ಣ ಮೆಚ್ಚುಗೆಯ ಮಾತು ನಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಸಂಬಂಧದಲ್ಲಿ ನಾವು ಒಬ್ಬರನ್ನೊಬ್ಬರು ಪಡೆಯಲು ಎಷ್ಟು ಅದೃಷ್ಟವಂತರು ಎಂಬುದನ್ನು ಸಂಗಾತಿಗೆ ಆಗಾಗ್ಗೆ ಹೇಳುತ್ತಿರಬೇಕು. ಸಂಗಾತಿಯ ಕಡೆಗೆ ಸಣ್ಣ ಅಭಿನಂದನೆಯನ್ನು ತೊರುವುದು ಸಂಬಂಧದಲ್ಲಿ ಪ್ರೀತಿ ಮತ್ತು ಗೌರವವನ್ನು ಅನುಭವಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ಸಂಗಾತಿಗಳ ನಡುವೆ ಅನ್ಯೋನ್ಯತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ.
ಅಗತ್ಯಗಳು: ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಹೊಂದಿರುತ್ತಾನೆ. ಸಂಗಾತಿಯು ನಿಮ್ಮ ಸಂಬಂಧದಲ್ಲಿ ಸುರಕ್ಷಿತ ಭಾವನೆಯನ್ನು ಹೊಂದಲು ನೀವು ನಿಮ್ಮ ಸಂಗಾತಿಯ ಅಗತ್ಯಗಳು ಏನೆಂಬುದನ್ನು ತಿಳಿದು ಅದನ್ನು ಪೂರೈಸಲು ಪ್ರಯತ್ನಿಸಬೇಕು. ಕೆಲವೊಮ್ಮೆ ಸಂಗಾತಿಗೆ ನಿಮ್ಮ ಭಾವನಾತ್ಮಕ ಬೆಂಬಲದ ಅಗತ್ಯವಿರುತ್ತದೆ, ಅಂತಹ ಸಮಯದಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲಿ.
ಗಡಿಗಳು: ನಿಮ್ಮ ಗಡಿಗಳನ್ನು ಸ್ಪಷ್ಟವಾಗಿ ಮತ್ತು ಆತ್ಮೀಯವಾಗಿ ಹೇಳುವುದು ಮುಖ್ಯವಾಗಿದೆ. ನಿಮ್ಮ ಪಾಲುದಾರರಿಗೆ ಸುರಕ್ಷಿತ ಮತ್ತು ಬೆಂಬಲದ ಸ್ಥಳವಾಗಲು ನೀವು ಪ್ರಯತ್ನ ಪಡಬಹುದಾದರೂ, ಅವರನ್ನು ಸರಿಪಡಿಸಲು ಅಥವಾ ಅವರ ಗುಣಪಡಿಸುವ ಪ್ರಯಾಣಕ್ಕೆ ನೀವು ಜವಬ್ದಾರರಾಗಿರುವುದಿಲ್ಲ. ಯಾವ ನಡವಳಿಕೆಗಳು ನಿಮಗೆ ಸ್ವೀಕಾರಾರ್ಹವಲ್ಲ ಮತ್ತು ನಿಮ್ಮ ಸಂಬಂಧದಲ್ಲಿ ಸುರಕ್ಷತೆಯನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ಅಸುರಕ್ಷಿತ ಸಂಗಾತಿಗೆ ತಿಳಿಯುವಂತೆ ಗಡಿಗಳನ್ನು ರೂಪಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:30 pm, Thu, 18 May 23