AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಮೂಡುವ ಫಂಗಸ್ ದೂರಮಾಡುವುದು ಹೇಗೆ?

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಶಿಲೀಂಧ್ರಗಳು ಮೂಡುವುದು ಸಾಮಾನ್ಯ, ಬಿಳಿ ಸೇರಿದಂತೆ ಲೈಟ್​ ಕಲರ್ ಬಟ್ಟೆಗಳಲ್ಲಿ ಕಪ್ಪು ಬಣ್ಣದ ಚುಕ್ಕಿಗಳು ಮೂಡುತ್ತವೆ

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಮೂಡುವ ಫಂಗಸ್ ದೂರಮಾಡುವುದು ಹೇಗೆ?
ClothImage Credit source: Zameen.com
Follow us
TV9 Web
| Updated By: ನಯನಾ ರಾಜೀವ್

Updated on: Jul 28, 2022 | 8:30 AM

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಶಿಲೀಂಧ್ರಗಳು ಮೂಡುವುದು ಸಾಮಾನ್ಯ, ಬಿಳಿ ಸೇರಿದಂತೆ ಲೈಟ್​ ಕಲರ್ ಬಟ್ಟೆಗಳಲ್ಲಿ ಕಪ್ಪು ಬಣ್ಣದ ಚುಕ್ಕಿಗಳು ಮೂಡುತ್ತವೆ. ಮಳೆಗಾಲದಲ್ಲಿ ಸೂರ್ಯನ ಆಗಮನವಾಗದ ಕಾರಣ ಬಟ್ಟೆಗಳಲ್ಲಿ ನೀರಿನ ಅಂಶವು ಸಂಪೂರ್ಣವಾಗಿ ಆರದ ಕಾರಣ ಬಟ್ಟೆಯಲ್ಲಿ ಕಲೆಗಳು ಉಂಟಾಗುತ್ತವೆ.

ಸಿಲಿಕಾ ಜೆಲ್​: ಸಿಲಿಕಾ ಜೆಲ್​ ಅನ್ನು ಬಟ್ಟೆಗಳ ಮಧ್ಯೆ ಇಡಿ, ಅದು ಬಟ್ಟೆಯಲ್ಲಿರುವ ನೀರಿನ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಕಹಿಬೇವಿನ ಎಲೆ: ನೀವು ಕಹಿಬೇವಿನ ಎಲೆಗಳನ್ನು ಒಣಗಿಸಿ ಬಟ್ಟೆಗಳ ಮಧ್ಯೆ ಇಡುವುದರಿಂದ ಬಟ್ಟೆಯಲ್ಲಿರುವ ನೀರಿನಾಂಶವು ಹೀರಿಕೊಂಡು ಬಟ್ಟೆಯನ್ನು ಬೆಚ್ಚಗಿಡುತ್ತದೆ.

ನಿಂಬೆಹಣ್ಣು: ಬಟ್ಟೆಯಲ್ಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣನ್ನು ಬಳಕೆ ಮಾಡಬಹುದು. ನಿಂಬೆಹಣ್ಣನ್ನು ಬಟ್ಟೆಗಳ ಮೇಲೆ ರಬ್ ಮಾಡಿ.

ಬಿಳಿ ವಿನೆಗರ್: ಬಟ್ಟೆಯನ್ನು ಸ್ವಚ್ಛವಾಗಿಡಲು ಬಿಳಿ ವಿನೆಗರ್ ಬಳಕೆ ಮಾಡಬೇಕು. ಬಟ್ಟೆಯನ್ನು ಸೋಪಿನ ನೀರಿನಿಂದ ತೊಳೆದ ಬಳಿಕ ಬಟ್ಟೆಯನ್ನು ವೈಟ್ ವಿನೆಗರ್​ ಅಲ್ಲಿ ಅದ್ದಿಡಬೇಕು. ಹಾಗೆಯೇ ಶಿಲೀಂದ್ರಗಳಿಂದ ಬರುವ ವಾಸನೆಯೂ ದೂರವಾಗುತ್ತದೆ.

ಬೇಕಿಂಗ್ ಸೋಡಾ: ಬಟ್ಟೆಯಲ್ಲಿರುವ ಫಂಗಸ್​ ದೂರ ಮಾಡಲು ಬಟ್ಟೆಯನ್ನು ಮೊದಲು ಒದ್ದೆ ಮಾಡಿ ಬಳಿಕ ಅದರ ಮೇಲೆ ಬೇಕಿಂಗ್ ಸೋಡಾವನ್ನು ಹಾಕಿ. ಸುಮಾರು 20 ನಿಮಿಷಗಳ ಬಳಿಕ ಡಿಟರ್ಜೆಂಟ್ ಬಳಸಿ ಸ್ವಚ್ಛಗೊಳಿಸಬೇಕು.

ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಸಂಡೂರು: ಭಾರೀ ಮಳೆಗೆ ಮುಳುಗಿದ ರೈಲ್ವೆ ಅಂಡರ್​ಪಾಸ್
ಸಂಡೂರು: ಭಾರೀ ಮಳೆಗೆ ಮುಳುಗಿದ ರೈಲ್ವೆ ಅಂಡರ್​ಪಾಸ್