ತೂಕ ಇಳಿಸಬೇಕೆಂದು ನಿರ್ದಿಷ್ಟ ಆಹಾರ ಕ್ರಮವನ್ನು ದೀರ್ಘ ಕಾಲದವರೆಗೆ ಅನುಸರಿಸುವುದು ಕಷ್ಟದ ಸಂಗತಿ. ಇನ್ನು ಒತ್ತಡದ ಬದುಕಿನಲ್ಲಿ ವ್ಯಾಯಮಕ್ಕೆಂದು ಸಮಯ ಮೀಸಲಿಡುವುದು ಕೂಡ ಕಷ್ಟವೇ..
ಡಯಟ್ ಇಲ್ಲದೆ ತೂಕ ಇಳಿಸಿಕೊಳ್ಳುವುದು ಹೇಗೆ?
ಪೋಷಕಾಂಶಯುಕ್ತ ಆಹಾರ ಸೇವಿಸಿ: ಸರಿಯಾಗಿ ಆಹಾರ ಜೀರ್ಣವಾಗಲು ಪೋಷಕಾಂಶಯುಕ್ತ ಆಹಾರವನ್ನೇ ಸೇವಿಸಿ. ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಸೇವಿಸುವುದರಿಂದ ಹೊಟ್ಟೆ ತುಂಬಿದಂತಾಗುವುದು, ಹಾಗಾಗಿ ಬಹಳ ಬೇಗ ಹಸಿವಾಗುವುದಿಲ್ಲ.
ನಾರಿನಾಂಶವಿರುವ ಆಹಾರ ತಿನ್ನಿ: ದ್ವಿದಳ ಧಾನ್ಯ ಫೈಬರ್ ಹಆರೋಗ್ಯ ದೃಷ್ಟಿಯಿಂದ ತೂಕ (Weight)ಇಳಿಸಿಕೊಳ್ಳುವುದು ಒಳ್ಳೆಯದು ಹಾಗೆಂದ ಮಾತ್ರಕ್ಕೆ ಏನೂ ತಿನ್ನದೆ ತೂಕ ಇಳಿಸುವುದು ಅಸಾಧ್ಯ. ಎಂದೂ ನೀವು ಆರೋಗ್ಯಕರ ಆಹಾರವನ್ನು ತಿಂದು ತೂಕ ಇಳಿಸಿಕೊಳ್ಳಬೇಕು.ಣ್ಣು ಮತ್ತು ಬೇಳೆ ಕಾಳುಗಳಲ್ಲಿ ನಾರಿನಾಂಶವಿರುತ್ತದೆ. ನಿತ್ಯವೂ ಹಣ್ಣು , ತರಕಾರಿ ಮತ್ತು ಓಟ್ಸ್ ಹಾಗೂ ಬ್ರೌನ್ ರೈಸ್‌ನಂತಹ ಧಾನ್ಯಗಳನ್ನು ಆಹಾರದಲ್ಲಿ ಸೇರಿಕೊಳ್ಳುವುದರಿಂದ ಫೈಬರನ್ನು ನಿಯಮಿತವಾಗಿ ಸೇವಿಸಲು ಸಾಧ್ಯ. ಹಲವಾರು ತರಕಾರಿಗಳ ಸಿಪ್ಪೆಯಲ್ಲೂ ಹೇರಳ ಫೈಬರ್ ಇದೆ, ಹಾಗಾಗಿ ಅವುಗಳನ್ನು ಎಸೆಯಬೇಡಿ.
ಸರಿಯಾಗಿ ನಿದ್ರೆ ಮಾಡಿ: ಆರು ಗಂಟೆಗಿಂತ ಕಡಿಮೆ ನಿದ್ರಿಸುವುದರಿಂದ ಬೊಜ್ಜು ಹೆಚ್ಚಿಸಬಹುದು. ದೇಹದ ಆರೋಗ್ಯ ಹಾಗೂ ತೂಕ ನಿಯಂತ್ರಣಕ್ಕೆ ಸರಿಯಾದ ನಿದ್ರೆ ಅತ್ಯಗತ್ಯ. ಸರಿಯಾದ ನಿದ್ರೆ ಇಲ್ಲದಿದ್ದರೆ, ಚಯಾಪಚಯ ಕ್ರಿಯೆಗೆ ತೊಂದರೆ ಆಗುತ್ತದೆ ಮತ್ತು ಕೆಲವು ಪ್ರಮುಖ ಹಾರ್ಮೋನ್‍ಗಳಿಗೆ ತೊಂದರೆಯಾಗುತ್ತದೆ.
ಒತ್ತಡ ಕಡಿಮೆ ಮಾಡಿ: ನಿತ್ಯ ಯೋಗ, ವ್ಯಾಯಾಮ ಮಾಡುವುದು, ಕೆಫಿನ್ ಸೇವನೆ ಕಡಿಮೆ ಮಾಡುವುದು, ಧ್ಯಾನ ಮಾಡುವುದು, ಅನಗತ್ಯ ಕೆಲಸಗಳನ್ನು ತಿರಸ್ಕರಿಸುವುದು, ಮನೆಯ ಹೊರಗೆ ಸಮಯ ಕಳೆಯುವುದು ಇತ್ಯಾದಿಗಳಿಂದ ಒತ್ತಡ ನಿವಾರಣೆ ಸಾಧ್ಯ. ಯೋಗದಿಂದ ಒತ್ತಡ ನಿವಾರಣೆ ಆಗುತ್ತದೆ ಮತ್ತು ತೂಕ ಇಳಿಯುತ್ತದೆ.
ಸಿಹಿ ಕಡಿಮೆ ಮಾಡಿ: . ಕೃತಕ ಸಿಹಿ ಪಾನೀಯಗಳ ಬದಲು, ಪುದೀನ, ಶುಂಠಿ , ಲಿಂಬೆ ಅಥವಾ ಲಿಂಬೆ ಹಣ್ಣಿನ ಪೇಯಗಳನ್ನು ಸೇವಿಸಬಹುದು. ಹರ್ಬಲ್, ಗ್ರೀನ್ ಮತ್ತು ಬ್ಲ್ಯಾಕ್ ಟೀ ಕೂಡ ಒಳ್ಳೆಯದು. ಹಣ್ಣಿನ ರಸದ ಬದಲು, ಇಡೀ ಹಣ್ಣನ್ನು ತಿನ್ನುವುದು ಒಳ್ಳೆಯದು.
ವಿಟಮಿನ್ ಡಿ ಸೇವನೆ: ವಿಟಮಿನ್ ಡಿಯ ಕೊರತೆ ಕೂಡ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮೆಟಬೋಲಿಕ್ ಸಿಂಡ್ರೊಮ್, ಖಿನ್ನತೆ ಮತ್ತು ಆತಂಕ, ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್, ಆಸ್ಟಿಯೋಪೊರೋಸಿಸ್ ಮತ್ತು ಅಸ್ಥಿಸಂಧಿವಾತ ದಂತಹ ರೋಗಗಳು ವಿಟಮಿನ್ ಡಿ ಕೊರತೆಯಿಂದ ಬರುತ್ತವೆ.
ಇಲ್ಲಿ ನೀಡಲಾದ ಮಾಹಿತಿಗಳು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ