ಮಣ್ಣಿನ ಮಡಿಕೆ ನೀರು ಕುಡಿಯೋದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?

ಬೇಸಿಗೆಯ ಸಮಯದಲ್ಲಿ ಬಹುತೇಕ ಹೆಚ್ಚಿನವರು ಫ್ರಿಡ್ಜ್‌ನಲ್ಲಿಟ್ಟ ತಂಪು ನೀರನ್ನೇ ಕುಡಿಯಲು ಇಷ್ಟಪಡುತ್ತಾರೆ. ಈ ತಂಪು ನೀರು ಖುಷಿ ನೀಡಬಹುದು ಆದರೆ ಅತಿಯಾದ ತಂಪು ನೀರು ಹಾನಿಯನ್ನೂ ಉಂಟು ಮಾಡಬಹುದು. ಹಾಗಾಗಿ ಬೇಸಿಗೆಯ ಧಗೆಯಿಂದ ಪಾರಾಗಲು ಮಣ್ಣಿನ ಮಡಿಕೆಯಲ್ಲಿಟ್ಟ ನೀರನ್ನು ಕುಡಿಯುವುದು ಸೂಕ್ತ. ಇದು ದೇಹಕ್ಕೆ ತಂಪು ಮಾತ್ರವಲ್ಲ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ.

ಮಣ್ಣಿನ ಮಡಿಕೆ ನೀರು ಕುಡಿಯೋದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Pinterest

Updated on: Feb 26, 2026 | 5:52 PM

ಹಿಂದೆಲ್ಲಾ ಮಣ್ಣಿನ ಮಡಿಕೆಯಲ್ಲೇ ಅಡುಗೆ ತಯಾರಿಸುತ್ತಿದ್ದರು, ನೀರನ್ನು ಶೇಖರಿಸಿಡುತ್ತಿದ್ದರು. ಬೇಸಿಗೆಯಲ್ಲಂತೂ ಈ ಮಡಕೆ ನೀರನ್ನೇ ಕುಡಿದು ಬಿಸಿಲ ಧಗೆಯನ್ನು ಹೋಗಲಾಡಿಸುತ್ತಿದ್ದರು. ಈಗಂತೂ ಫ್ರಿಡ್ಜ್‌ ನೀರನ್ನೇ ಕುಡಿಯುವುದರಿಂದ ಯಾರು ಸಹ ಮಣ್ಣಿನ ಮಡಕೆಗಳನ್ನು ಬಳಕೆ ಮಾಡುವುದೇ ಇಲ್ಲ. ಆದ್ರೆ ಫ್ರಿಡ್ಜ್‌ ನೀರು ದೇಹಕ್ಕೆ ಒಳ್ಳೆಯದಲ್ಲ. ಹಾಗಾಗಿ ಈ ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡಲು ಮಣ್ಣಿನ ಮಡಕೆ ನೀರನ್ನು (Earthen Pot Water) ಕುಡಿಯುವುದೇ ಬೆಸ್ಟ್.‌ ಈ ಮಣ್ಣಿನ ಮಡಿಕೆಗಳು ನೀರನ್ನು ತಂಪಾಗಿಸುವುದು ಮಾತ್ರವಲ್ಲದೆ ನೀರನ್ನು ನೈಸರ್ಗಿಕವಾಗಿ ಶುದ್ಧೀಕರಿಸಲು ಸಹ ಸಹಕಾರಿಯಾಗಿದ್ದು, ಈ ನೀರನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಾಗಿ ಈ ಬೇಸಿಗೆಯಲ್ಲಿ ಫ್ರಿಡ್ಜ್‌ ಕೋಲ್ಡ್‌ ನೀರು ಬದಲು ಮಣ್ಣಿನ ಮಡಿಕೆ ನೀರು ಕುಡಿಯುವ ಮೂಲಕ ಈ ಒಂದಷ್ಟು ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ.

ಮಣ್ಣಿನ ಮಡಿಕೆ ನೀರು ಕುಡಿಯುವುದರ ಪ್ರಯೋಜನಗಳೇನು?

ಹೊಟ್ಟೆ ಸಂಬಂಧಿ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ: ನಾವು ತಿನ್ನುವ ಹೆಚ್ಚಿನ ಆಹಾರವು ದೇಹದಲ್ಲಿ ಆಮ್ಲೀಯವಾಗುತ್ತದೆ ಮತ್ತು ನಂತರ ವಿಷವನ್ನು ಉತ್ಪಾದಿಸುತ್ತದೆ. ಜೇಡಿಮಣ್ಣು ಕ್ಷಾರೀಯ ಸ್ವಭಾವವನ್ನು ಹೊಂದದ್ದು, ಈ ಮಣ್ಣಿನ ಮಡಕೆಯಲ್ಲಿನ ನೀರಿನ pH ಮಟ್ಟವು ಸ್ಥಿರವಾಗಿರುತ್ತದೆ. ಇದು ಆಮ್ಲೀಯ ಆಹಾರ ಪದಾರ್ಥಗಳೊಂದಿಗೆ ಪ್ರತಿಕ್ರಿಯಿಸುತ್ತದೆ ಮತ್ತು pH ಸಮತೋಲನವನ್ನು ಸೃಷ್ಟಿಸುತ್ತದೆ, ಹೀಗಾಗಿ ಮಣ್ಣಿನ ಮಡಿಕೆಯ ನೀರನ್ನು ಕುಡಿಯುವುದರಿಂದ  ಆಮ್ಲೀಯತೆ, ಮಲಬದ್ಧತೆ, ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆಯನ್ನು ದೂರವಿಡಬಹುದು.

ದೇಹದ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ: ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಕುಡಿಯುವುದು ದೇಹಕ್ಕೆ ಅತ್ಯಂತ ಪ್ರಯೋಜನಕಾರಿ. ಸಂಶೋಧನೆಯ ಪ್ರಕಾರ, ಮಣ್ಣಿನ ಪಾತ್ರೆಗಳಲ್ಲಿ ಸಂಗ್ರಹಿಸಿದ ನೀರು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ:  ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿದ ನೀರಿನಲ್ಲಿ ಯಾವುದೇ ರಾಸಾಯನಿಕಗಳು ಇರುವುದಿಲ್ಲ. ಆದ್ದರಿಂದ, ಪ್ರತಿದಿನ ಮಣ್ಣಿನ ಮಡಕೆ ಅಥವಾ ಹೂಜಿಯಿಂದ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  ಅಲ್ಲದೆ ಈ ನೀರಿನಲ್ಲಿರುವ ಖನಿಜಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಶಾಖದ ಹೊಡೆತದಿಂದ ರಕ್ಷಣೆ ನೀಡುತ್ತದೆ: ಬೇಸಿಗೆಯ ತಿಂಗಳುಗಳಲ್ಲಿ ವಿಪರೀತ ಬಿಸಿಲಿನ ಧಗೆ ಇರುತ್ತದೆ. ಈ ಶಾಖದ ಹೊಡೆತದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಮಣ್ಣಿನ ಮಡಿಕೆ ನೀರು ಕುಡಿಯಿರಿ. ಈ ಮಣ್ಣಿನ ಮಡಕೆ ನೀರಿನಲ್ಲಿ ಖನಿಜಗಳು ಮತ್ತು ಪೋಷಕಾಂಶಗಳಿದ್ದು,  ಇದು ತ್ವರಿತವಾಗಿ ಪುನರ್ಜಲೀಕರಣಗೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮೊಬೈಲ್‌ ನೋಡುತ್ತಾ ಊಟ ಮಾಡಿದರೆ ಏನಾಗುತ್ತದೆ ಗೊತ್ತಾ?

ನೈಸರ್ಗಿಕ ಶುದ್ಧೀಕರಣಕಾರಕ:  ಈ ಮಣ್ಣಿನ ಮಡಕೆ ಆಹ್ಲಾದಕರವಾದ ಮಣ್ಣಿನ ಪರಿಮಳವನ್ನು ಹೊಂದಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಮಣ್ಣಿನ ಮಡಕೆಯ ನೀರು ಗಂಟಲು ಮತ್ತು ಕರುಳಿಗೆ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಮಡಿಕೆಯನ್ನು ಜೇಡಿಮಣ್ಣಿನಿಂದ ತಯಾರಿಸುವುದರ ಕಾರಣ, ಇದು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಮಣ್ಣಿನ ಪಾತ್ರೆಯಲ್ಲಿರುವ ಜೇಡಿಮಣ್ಣು ನೀರಿನಿಂದ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಈ ನೀರು ದೇಹದ ವಿಷವನ್ನು ಶುದ್ಧೀಕರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಫ್ರಿಡ್ಜ್‌ ನೀರು ನೀರು ಗಂಟಲು ನೋವು ಸೇರಿದಂತೆ ಇತರ ಸಮಸ್ಯೆಗಳನ್ನು ಉಂಟುಮಾಡಬಹುದು, ಆದರೆ ಮಣ್ಣಿನ ಮಡಿಕೆ ನೀರು ಕುಡಿಯುವುದರಿಂದ ಈ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us