ಇತ್ತೀಚಿನ ದಿನಗಳಲ್ಲಿ ತಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಆಕರ್ಷಕವಾಗಿ ಕಾಣಲು ಪ್ಲಾಸ್ಟಿಕ್ ಸರ್ಜರಿಯ ಮೊರೆಹೋಗುತ್ತಾರೆ. ಕೃತಕವಾಗಿ ತಮ್ಮ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಲು ಹೋಗಿ ಪ್ರಾಣ ಕಳೆದುಕೊಂಡ ಅದೆಷ್ಟೋ ನಿದರ್ಶನಗಳಿವೆ. ಕೆಲವೊಂದು ಸರ್ಜರಿಗಳಿಂದ ಮುಖದ ಅಂದವನ್ನೇ ಕಳೆದುಕೊಂಡವರು ಇದ್ದಾರೆ. ಅಂತದ್ದೇ ಘಟನೆಯೊಂದು ಇದೀಗಾ ಭಾರೀ ಸುದ್ದಿಯಲ್ಲಿದೆ.
28 ವರ್ಷದ ಜೆಸ್ಸಿಕಾ ಬುರ್ಕೊ ಎಂಬ ಹೆಸರಿನ ಯುವತಿ ತನ್ನ ತುಟಿಗಳು ದಪ್ಪವಾಗಿ ಹಾಗೂ ಆಕರ್ಷಕವಾಗಿ ಕಾಣಲು ಲಿಪ್ ಫಿಲ್ಲರ್ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾಳೆ. ಈ ಲಿಪ್ ಫಿಲ್ಲರ್ನಲ್ಲಿ ತುಟಿಗಳಿಗೆ ಚುಚ್ಚು ಮದ್ದುಗಳನ್ನು ಚುಚ್ಚುವುದಾಗಿದೆ. ಇದು ಕೃತಕವಾಗು ತುಟಿಗಳು ಉಬ್ಬಿದ ಆಕಾರದಲ್ಲಿ ನಿಲ್ಲಲು ಕಾರಣವಾಗುತ್ತದೆ. ಈ ಪ್ರಕ್ರಿಯೆಗೆ ಸಾಕಷ್ಟು ದುಡ್ಡು ಸುರಿಯುವವರು ಇದ್ದಾರೆ. ಆದರೆ ಜೆಸ್ಸಿಕಾ ಉಚಿತವಾಗಿ ಮಾಡಿಸಿಕೊಂಡಿದ್ದು, ಇದೀಗಾ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಹೌದು ಲಿಪ್ ಫಿಲ್ಲರ್ನ ನಂತರ ಅವಳ ತುಟಿ ಕೆಂಪು ಬಣ್ಣಕ್ಕೆ ತಿರುಗಿದ್ದು, ಸಾಕಷ್ಟು ನೋವನ್ನು ಅನುಭವಿಸಿದ್ದಾಳೆ. ಸಿರಿಂಜ್ ತನ್ನ ರಕ್ತನಾಳವನ್ನು ನೋಯಿಸಿದೆ ಮತ್ತು ತುಟಿಗಳು ಊದಿಕೊಳ್ಳಲು ಕಾರಣವಾಯಿತು ಎಂದು ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ಕೆಲಸದ ಸ್ಥಳದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ; ಕಾರಣ ಇಲ್ಲಿದೆ
ಅವಳ ತುಟಿಗಳು ಸಾಮಾನ್ಯವಾಗಿ ಇದ್ದ ಗಾತ್ರಕ್ಕಿಂತ ಎರಡು ಪಟ್ಟು ಉಬ್ಬಿಕೊಂಡಿದ್ದು, ಈಕೆ ಮುಖದ ಅಂದವನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾಳೆ.
ಲಿಪ್ ಫಿಲ್ಲರ್‌ಗಳನ್ನು ಪಡೆಯುವ ಅಪಾಯಗಳೇನು?
ಲಿಪ್ ಫಿಲ್ಲರ್‌ಗಳು ಸ್ವತಃ ಅಪಾಯಕಾರಿ ವಿಧಾನವಾಗಿದ್ದು, ನಿರ್ಧಾರ ತೆಗೆದುಕೊಳ್ಳುವ ಮೊದಲು ಅವುಗಳ ಬಗ್ಗೆ ತಿಳಿದಿರುವುದು ಮುಖ್ಯ. ಯಾಕೆಂದರೆ ಇದು ಕೆಲವೊಮ್ಮೆ ನರಗಳ ಮೇಲೆ ನೇರವಾಗಿ ಪರಿಣಾಮ ಬೀರಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: