AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shruti Haasan: ‘ಸಲಾರ್​’ ನಟಿ ಶ್ರುತಿ ಹಾಸನ್​ ಮೂಗಿಗೆ ಪ್ಲಾಸ್ಟಿಕ್​ ಸರ್ಜರಿ ಆಗಿದ್ದು ನಿಜವೇ? ಮತ್ತೆ ಸ್ಪಷ್ಟನೆ ನೀಡಿದ ಕಮಲ್​ ಪುತ್ರಿ

Shruti Haasan Nose Job: ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ ಕಾರಣಕ್ಕೆ ಅನೇಕ ನಟಿಯರು ಟ್ರೋಲ್​ ಆದ ಉದಾಹರಣೆ ಇದೆ. ಶ್ರುತಿ ಹಾಸನ್​ ಅವರಿಗೂ ಆ ಕಾಟ ತಪ್ಪಿಲ್ಲ.

Shruti Haasan: ‘ಸಲಾರ್​’ ನಟಿ ಶ್ರುತಿ ಹಾಸನ್​ ಮೂಗಿಗೆ ಪ್ಲಾಸ್ಟಿಕ್​ ಸರ್ಜರಿ ಆಗಿದ್ದು ನಿಜವೇ? ಮತ್ತೆ ಸ್ಪಷ್ಟನೆ ನೀಡಿದ ಕಮಲ್​ ಪುತ್ರಿ
ಶ್ರುತಿ ಹಾಸನ್
TV9 Web
| Edited By: |

Updated on:Oct 13, 2022 | 3:44 PM

Share

ಪ್ರಭಾಸ್​ ನಟನೆಯ ‘ಸಲಾರ್​’ (Salaar) ಸಿನಿಮಾ ಮೂಲಕ ನಟಿ ಶ್ರುತಿ ಹಾಸನ್​ (Shruti Haasan) ಅವರು ದೊಡ್ಡ ಗೆಲುವು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರಕ್ಕೆ ಅವರು ಆಯ್ಕೆ ಆದಾಗ ಒಂದಷ್ಟು ಜನರು ಟ್ರೋಲ್​ ಮಾಡಿದ್ದರು. ಈ ರೀತಿಯ ಹಲವು ಟೀಕೆಗಳನ್ನು ಎದುರಿಸಿಕೊಂಡೇ ಬಂದಿದ್ದಾರೆ ಶ್ರುತಿ ಹಾಸನ್​. ವೃತ್ತಿಜೀವನದ ಆರಂಭದಿಂದ ಇಲ್ಲಿಯವರೆಗೆ ಅನೇಕ ವಿಚಾರಗಳಲ್ಲಿ ಅವರು ಟೀಕೆಗೆ ಒಳಗಾಗಿದ್ದುಂಟು. ಅದರಲ್ಲೂ ಅವರ ಮೂಗಿನ ಬಗ್ಗೆ ನೆಟ್ಟಿಗರು ನೂರಾರು ರೀತಿಯ ಕಮೆಂಟ್​ ಮಾಡಿದ್ದಾರೆ. ಈಗಲೂ ಆ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಕಮಲ್​ ಹಾಸನ್​ ಪುತ್ರಿಯಾದ ಶ್ರುತಿ ಹಾಸನ್​ ಅವರು ಮೂಗಿಗೆ ಪ್ಲಾಸ್ಟಿಕ್​ ಸರ್ಜರಿ (Shruti Haasan Plastic Surgery) ಮಾಡಿಸಿಕೊಂಡಿದ್ದಾರೆ ಎಂಬುದನ್ನು ಕೆಲವರು ಪದೇಪದೇ ಹೇಳಲು ಆರಂಭಿಸಿದರು. ಹಾಗಂತ ಆ ವಿಚಾರವನ್ನು ಶ್ರುತಿ ಮುಚ್ಚಿಟ್ಟಿಲ್ಲ. ಬಹಳ ಹಿಂದೆಯೇ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಹಾಗಿದ್ದರೂ ಜನರು ಮಾತನಾಡುವುದನ್ನು ನಿಲ್ಲಿಸಿಲ್ಲ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮತ್ತೆ ಈ ಬಗ್ಗೆ ಪ್ರಸ್ತಾಪ ಆಗಿದೆ.

ಅಷ್ಟಕ್ಕೂ ಶ್ರುತಿ ಹಾಸನ್​ ಅವರು ಮೂಗಿಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದು ಯಾಕೆ? ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ಮೂಗು ಸರಿಪಡಿಸಿಕೊಂಡಿದ್ದು ನಿಜ. ಅದು ತುಂಬ ಸ್ಪಷ್ಟ. ನನಗೆ ಮೂಗಿನ ಸಮಸ್ಯೆ (deviated septum) ಇತ್ತು. ಅದನ್ನೇ ನೆಪವಾಗಿಸಿಕೊಂಡೆ ಅಂತ ಜನ ಹೇಳ್ತಾರೆ. ಮೂಗಿನ ಸಮಸ್ಯೆಯಿಂದ ನನಗೆ ನೋವಾಗುತ್ತಿತ್ತು. ಚೆನ್ನಾಗಿ ಕಾಣಲು ಯಾಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಬಾರದು? ಅದು ನನ್ನ ಆಯ್ಕೆಗೆ ಬಿಟ್ಟಿದ್ದು’ ಎಂದು ಶ್ರುತಿ ಹಾಸನ್​ ಹೇಳಿದ್ದಾರೆ. ಅವರು ಫಿಲ್ಲರ್ಸ್​ ಕೂಡ ಬಳಸಿದ್ದಾರೆ. ನಾಳೆ ಫೇಸ್​ ಲಿಫ್ಟ್​ ಮಾಡಿಸುವುದು ಅಥವಾ ಬಿಡುವುದು ಕೂಡ ತಮ್ಮದೇ ಆಯ್ಕೆ ಎಂದಿದ್ದಾರೆ.

ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ ಕಾರಣಕ್ಕೆ ಅನೇಕ ನಟಿಯರು ಟ್ರೋಲ್​ ಆದ ಉದಾಹರಣೆ ಇದೆ. ಶ್ರುತಿ ಹಾಸನ್​ ಅವರಿಗೂ ಆ ಕಾಟ ತಪ್ಪಿಲ್ಲ. ಆದರೆ ಅದನ್ನೆಲ್ಲ ಮೀರಿ ಅವರು ಬೆಳೆದಿದ್ದಾರೆ. ಅನೇಕ ಸ್ಟಾರ್​ ಕಲಾವಿದರ ಸಿನಿಮಾಗಳಿಗೆ ಅವರು ಹೀರೋಯಿನ್​ ಆಗಿ ಮಿಂಚಿದ್ದಾರೆ. ಈಗ ಬಹುನಿರೀಕ್ಷಿತ ‘ಸಲಾರ್​’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಪ್ರಭಾಸ್​ಗೆ ಜೋಡಿ ಆಗುವ ಅವಕಾಶ ಅವರಿಗೆ ಸಿಕ್ಕಿದೆ. ಪ್ರಶಾಂತ್​ ನೀಲ್​ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಅವರಿಗೆ ಖುಷಿ ಇದೆ.

ಇದನ್ನೂ ಓದಿ
Image
Disha Patani: ನಟಿ ದಿಶಾ ಪಟಾನಿಗೆ ಬಾಡಿ ಶೇಮಿಂಗ್​; 2 ಕಾರಣ ನೀಡಿ ಬಹಿರಂಗವಾಗಿ ಅವಮಾನ ಮಾಡಿದ ನೆಟ್ಟಿಗರು
Image
Radhika Apte: ‘ಸ್ತನದ ಗಾತ್ರ ಹೆಚ್ಚಿಸಿಕೊಳ್ಳುವಂತೆ ಹೇಳಿದ್ದರು’: ಹಿಂದಿ ಚಿತ್ರರಂಗದ ಕರಾಳ ಸತ್ಯ ತೆರೆದಿಟ್ಟ ರಾಧಿಕಾ ಆಪ್ಟೆ
Image
Chetana Raj Death: ಫ್ಯಾಟ್​ ಸರ್ಜರಿಗೆ ಚೇತನಾ ರಾಜ್​ ಕಟ್ಟಿದ್ದ ಹಣ ಎಷ್ಟು? ಸತ್ತ ಮೇಲೂ ಹೆಚ್ಚಿತು ಆಸ್ಪತ್ರೆ ಬಿಲ್​
Image
‘ನಿಮ್ಮ ತುಟಿಗಳ ಸೈಜ್​ ಏನು’? ಶ್ರುತಿ ಹಾಸನ್​ಗೆ ಪ್ರಶ್ನೆ ಕೇಳಿದ ಭೂಪ; ನಟಿಯಿಂದ ಬಂತು ಪ್ರತಿಕ್ರಿಯೆ

ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಚಿತ್ರರಂಗದಲ್ಲಿ ಶ್ರುತಿ ಹಾಸನ್​ ಅವರಿಗೆ ಭರ್ಜರಿ ಬೇಡಿಕೆ ಇದೆ. ನಂದಮೂರಿ ಬಾಲಕೃಷ್ಣ ನಟನೆಯ 107ನೇ ಚಿತ್ರರಂಗಕ್ಕೆ ಅವರೇ ನಾಯಕಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:44 pm, Thu, 13 October 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್