ನಿಮ್ಮ ಗರ್ಲ್​​​​ ಫ್ರೆಂಡ್ ಮಾತು ಮಾತಿಗೂ ಕಣ್ಣೀರು ಹಾಕ್ತಾರ? ಹಾಗಾದ್ರೆ ಇಂತವರ ಬಗ್ಗೆ ತಜ್ಞರು ಹೇಳಿದ ರಹಸ್ಯ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: May 25, 2024 | 1:07 PM

ಮಾನವನು ಭಾವನಾ ಜೀವಿ. ಹೀಗಾಗಿ ತಮ್ಮ ನೋವು ನಲಿವನ್ನು ನಗು ಹಾಗೂ ಅಳುವಿನ ಮೂಲಕ ವ್ಯಕ್ತಪಡಿಸುತ್ತಾರೆ. ಇನ್ಯಾರಾದರೋ ಮಾತು ಮಾತಿಗೂ ಅಳುತ್ತಿದ್ದರೆ ಲೇವಡಿ ಮಾಡುವವರೇ ಹೆಚ್ಚು. ಆದರೆ ನಗುವಿನಷ್ಟೇ ಅಳು ಕೂಡ ಸಹಜ ಪ್ರಕ್ರಿಯೆಯಾಗಿದೆ. ಹೆಣ್ಣು ಅಳುಬುರುಕಿಯಾಗಿದ್ದರೆ ಯಾರು ಕೂಡ ಆಕೆಯೊಂದಿಗೆ ಸೇರುವುದಿಲ್ಲ. ಆದರೆ ಮಾತು ಮಾತಿಗೂ ಅಳುವ ಹುಡುಗಿಯರಲ್ಲಿಯೂ ಕೆಲವು ರಹಸ್ಯಗಳಿವೆಯಂತೆ. ಆ ಬಗ್ಗೆ ಯಾರು ಕೂಡ ಯೋಚನೆ ಮಾಡುವುದೇ ಇಲ್ಲ.

ನಿಮ್ಮ ಗರ್ಲ್​​​​ ಫ್ರೆಂಡ್ ಮಾತು ಮಾತಿಗೂ ಕಣ್ಣೀರು ಹಾಕ್ತಾರ? ಹಾಗಾದ್ರೆ ಇಂತವರ ಬಗ್ಗೆ ತಜ್ಞರು ಹೇಳಿದ ರಹಸ್ಯ ಇಲ್ಲಿದೆ
Follow us on

ಅಳು ಎಂದರೆ ಮೊದಲು ನೆನಪಾಗುವುದೇ ಹೆಣ್ಣು. ನಾವೆಲ್ಲರೂ ಹೆಣ್ಣನ್ನು ದುರ್ಬಲತೆಯ ಸಂಕೇತ ಎಂದು ಬಿಂಬಿಸಿಯಾಗಿದೆ. ಹೀಗಾಗಿ ಹೆಣ್ಣು ಕಣ್ಣೀರು ಹಾಕುತ್ತ ಕುಳಿತರೆ ಅವರಿಂದ ಏನು ಆಗಲ್ಲ ಅವಳು ದುರ್ಬಲಳು ಎಂದು ಭಾವಿಸುತ್ತೇವೆ. ಆದರೆ ಈ ಅಳು ಭಾವನೆಯನ್ನು ಹೊರ ಹಾಕುವ ವಿಧಾನ. ಹೆಣ್ಣಿಗೆ ಗಂಡಿನಂತೆ ನೋವು ದುಃಖವನ್ನು ತಡೆದುಕೊಳ್ಳಲು ಶಕ್ತಿಯಿಲ್ಲ. ಆದರೆ ಕೆಲವು ಹೆಣ್ಣು ಮಕ್ಕಳು ಸಣ್ಣ ಪುಟ್ಟ ವಿಚಾರಗಳಿಗೂ ಕಣ್ಣೀರು ಹಾಕುತ್ತಾರೆ. ಆದರೆ ಅಂತಹವರಿಗೆ ಅಳುಮುಂಜಿ ಪಟ್ಟವನ್ನು ನಾವೇ ಕೊಟ್ಟು ಬಿಡುತ್ತೇವೆ.

ಅತಿಯಾಗಿ ಹುಡುಗಿಯರು ಅಳಲು ಕಾರಣ ದೇಹದಲ್ಲಾಗುವ ಹಾರ್ಮೋನ್‌ಗಳ ಬದಲಾವಣೆಯೇಯಂತೆ, ಅಳುವುದು ಹಾರ್ಮೋನ್‌ಗಳಿಗೆ ಸಂಬಂಧಿಸಿದೆ. ಋುತುಚಕ್ರದ ಬದಲಾವಣೆ, ಗರ್ಭಿಣಿ ಅಥವಾ ಪ್ರಸವ ನಂತರದ ದಿನಗಳಲ್ಲಿ ಭಾವನೆಗಳು ತೀವ್ರವಾಗಿರುತ್ತದೆ. ಈ ವೇಳೆಯಲ್ಲಿ ಸಣ್ಣ ಸಣ್ಣ ನೋವನ್ನು ತಡೆಯಲಾಗದೇ ನೋವನ್ನು ಹೊರಹಾಕುತ್ತಾರೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಹಸೆಮಣೆ ಏರುವ ವಧು ವರರೇ ಇಲ್ಲಿ ಒಮ್ಮೆ ಗಮನಿಸಿ, ಈ ಗುಣ ನಿಮ್ಮಲ್ಲಿ ಖಂಡಿತ ಇರಬೇಕು

ಅಷ್ಟೇ ಅಲ್ಲದೇ ಯಾರು ಯಾರು ಸಣ್ಣ ಸಣ್ಣ ವಿಷಯಗಳಿಗೂ ಅಳುತ್ತಾರೋ ಆ ಹೆಣ್ಣು ಮಕ್ಕಳು ಮುಗ್ಧ ಹಾಗೂ ಮೃದು ಹೃದಯವನ್ನು ಹೊಂದಿರುತ್ತಾರೆ. ಅಳುವ ಹುಡುಗಿಯರೂ ಭೂಮಿಯ ಮೇಲಿನ ಮುಗ್ಧ ಜೀವಿಗಳು, ಅವರನ್ನು ಎಂದಿಗೂ ನೋಯಿಸಬಾರದು.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ