Relationship Tips: ಹಸೆಮಣೆ ಏರುವ ವಧು ವರರೇ ಇಲ್ಲಿ ಒಮ್ಮೆ ಗಮನಿಸಿ, ಈ ಗುಣ ನಿಮ್ಮಲ್ಲಿ ಖಂಡಿತ ಇರಬೇಕು

ಮದುವೆ ಅನ್ನೋದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಘಟ್ಟ ನೂರಾರು ಕನಸುಗಳನ್ನು ಹೊತ್ತುಕೊಂಡು ಹೊಸ ಜೀವನಕ್ಕೆ ಕಾಲಿಡುವ ಗಂಡು ಹೆಣ್ಣು ಜೀವನ ಪರ್ಯಂತ ಕಷ್ಟ ಸುಖಕ್ಕೆ ಜೊತೆಯಾಗಬೇಕು. ಆದರೆ ಹೊಸ ಜೀವನಕ್ಕೆನಕ್ಕೆ ಕಾಲಿಡುವ ಗಂಡು ಹೆಣ್ಣಿನಲ್ಲಿ ಈ ಕೆಲವು ಗುಣಗಳಿದ್ದರೆ ಸುಖಿ ದಾಂಪತ್ಯ ನಿಮ್ಮದಾಗುತ್ತದೆ.

Relationship Tips: ಹಸೆಮಣೆ ಏರುವ ವಧು ವರರೇ ಇಲ್ಲಿ ಒಮ್ಮೆ ಗಮನಿಸಿ, ಈ ಗುಣ ನಿಮ್ಮಲ್ಲಿ ಖಂಡಿತ ಇರಬೇಕು
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: May 24, 2024 | 5:12 PM

ಮದುವೆಯೇ ಎಂದರೆ ಸಂಭ್ರಮ. ಹೆಣ್ಣು ಗಂಡಿನ ಜೀವನದ ತಿರುವಿನ ಘಟ್ಟ. ಎಲ್ಲರೂ ಕೂಡ ತಮ್ಮ ಮದುವೆಯ ಬಗ್ಗೆ ನೂರಾರು ಕನಸುಗಳನ್ನು ಕಂಡಿರುತ್ತಾರೆ. ಈಗಿನ ಕಾಲದಲ್ಲಿ ಮದುವೆಗೆ ಮುಂಚೆಯೇ ಗಂಡು ಹೆಣ್ಣು ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ. ಹೀಗಾಗಿ ಒಬ್ಬರ ಇಷ್ಟ ಕಷ್ಟಗಳು ಇನ್ನೊಬ್ಬರಿಗೆ ಗೊತ್ತಿರುವ ಹೊಂದಿಕೆಯೆನ್ನುವುದು ಕಷ್ಟವಾಗುವುದಿಲ್ಲ. ಆದರೆ ಈ ಕೆಲವು ಗುಣಗಳು ಗಂಡು ಹೆಣ್ಣು ಇಬ್ಬರಲ್ಲಿ ಇದ್ದರೆ ಮಾತ್ರ ಸಂಸಾರವೆನ್ನುವುದು ಆನಂದ ಸಾಗರವಾಗುತ್ತದೆ.

* ಹೊಂದಾಣಿಕೆಯ ಗುಣ : ವಿಭಿನ್ನ ಮನಸ್ಥಿತಿ,

ಅಭಿರುಚಿಗಳನ್ನೊಳಗೊಂಡ ವ್ಯಕ್ತಿಗಳು ಜೊತೆಗೆ ಬದುಕುವುದು ಕಷ್ಟವೇ. ಇಬ್ಬರನ್ನು ಒಬ್ಬರ ಗುಣ ಅವಗುಣವನ್ನು ಒಪ್ಪಿಕೊಂಡು ಹೋಗಬೇಕು. ಹೊಂದಿಕೊಂಡು ಹೋಗುವ ಗುಣವು ಮದುವೆಯಾಗುವ ಗಂಡು ಹಾಗೂ ಹೆಣ್ಣಿನಲ್ಲಿರಬೇಕು.

* ಅನಗತ್ಯ ಖರ್ಚು ಮಾಡದಿರುವುದು : ಗಂಡು ಮಕ್ಕಳು ಸಿಕ್ಕ

ಸಿಕ್ಕದ್ದಕ್ಕೆಲ್ಲಾ ಖರ್ಚು ಮಾಡುತ್ತಾರೆ. ಆದರೆ ಮದುವೆಯಾಗುವ ಹೆಣ್ಣು ಅನಗತ್ಯ ಖರ್ಚು ಮಾಡದೇ ಉಳಿತಾಯ ಮಾಡುವ ಗುಣವನ್ನು ಹೊಂದಿದ್ದರೆ ಮುಂದಿನ ಭವಿಷ್ಯವು ಉಜ್ವಲವಾಗುತ್ತದೆ. ಇಬ್ಬರೂ ಕೂಡ ದುಂದುವೆಚ್ಚ ಮಾಡುವವರೇ ಆಗಿ ಬಿಟ್ಟರೆ ಭವಿಷ್ಯದ ಬಗ್ಗೆ ಯೋಚಿಸುವುದೇ ಇಲ್ಲ.

* ಒಬ್ಬರನ್ನೊಬ್ಬರು ನಂಬುವುದು : ನಂಬಿಕೆ ಎನ್ನುವುದು ಸಂಬಂಧದ

ಭದ್ರ ಬುನಾದಿಗೆ ಕಾರಣವಾಗುತ್ತದೆ. ಗಂಡು ಹೆಣ್ಣು ಹೊಸ ಜೀವನಕ್ಕೆ ಕಾಲಿಡುವ ಮುನ್ನ ಒಬ್ಬರು ಇನ್ನೊಬ್ಬರ ಮೇಲೆ ಸಂಪೂರ್ಣವಾಗಿ ನಂಬಿಕೆಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ಅದಲ್ಲದೇ ಇಟ್ಟ ನಂಬಿಕೆಗೆ ಇಬ್ಬರೂ ಬದ್ಧರಾಗಿರಬೇಕು.

* ಪರಸ್ಪರ ಗೌರವಿಸುವುದು : ಸಂಬಂಧದಲ್ಲಿ ಪ್ರೀತಿ ಎಷ್ಟು

ಮುಖ್ಯವೋ , ಅದೇ ರೀತಿ ಪರಸ್ಪರ ಗೌರವಿಸುವುದು ಅಷ್ಟೇ. ಮದುವೆ ಮಾಡಿಕೊಳ್ಳುವ ಗಂಡು ಹೆಣ್ಣಿನಲ್ಲಿ ಈ ಗುಣವೀರಲೇಬೇಕು. ಒಬ್ಬರಿಗೊಬ್ಬರು ನೀಡುವ ಗೌರವವು ಸಂಬಂಧದ ಗಟ್ಟಿತನಕ್ಕೆ ಕಾರಣವಾಗುತ್ತದೆ. ಅದಲ್ಲದೇ, ಸಂಗಾತಿಯ ಕೆಲಸ, ಕುಟುಂಬ ಮತ್ತು ಭಾವನೆಗಳನ್ನು ನೀವು ಗೌರವಿಸಬೇಕು.

ಇದನ್ನೂ ಓದಿ: ತುಳುನಾಡಿನಲ್ಲಿ ಇಂದಿನಿಂದ ಪತ್ತನಾಜೆ ಆರಂಭ : ಧಾರ್ಮಿಕ ಕಾರ್ಯಕ್ಕೆ ಬ್ರೇಕ್, ಕೃಷಿಯತ್ತ ಚಿತ್ತ, ಏನಿದರ ವಿಶೇಷತೆ

* ಮುಕ್ತವಾಗಿ ಮಾತನಾಡುವ ಗುಣ :

ಈಗಿನ ಜನೇರೇಷನ್ ಸಂಪೂರ್ಣ ಬದಲಾಗಿದೆ. ಮುಂದಿನ ಭವಿಷ್ಯದ ಬಗ್ಗೆ ಮಾತನಾಡುವುದ ಗುಣವು ಸಂಬಂಧವನ್ನು ಗಟ್ಟಿಗೊಳಿಸಲು ಕಾರಣವಾಗುತ್ತದೆ. ಈ ಮಾತುಕತೆಯಿಂದ ಇಬ್ಬರ ಜೀವನದ ಆಸೆ, ಆಕಾಂಕ್ಷೆ ಹಾಗೂ ಗುರಿಯ ಕುರಿತಾಗಿ ತಿಳಿಯುತ್ತದೆ.

* ತಪ್ಪನ್ನು ತಿದ್ದಿಕೊಳ್ಳುವ ಸ್ವಭಾವ:

ಹೊಸ ಜೀವನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಇಬ್ಬರ ವ್ಯಕ್ತಿತ್ವಗಳು ಭಿನ್ನವಾಗಿರಬಹುದು. ಒಬ್ಬರ ಮಾತು ಇನ್ನೊಬ್ಬರಿಗೆ ನೋವು ಉಂಟು ಮಾಡುತ್ತದೆ. ಅದಲ್ಲದೇ ಗೊತ್ತಿಲ್ಲದೇನೇ ತಪ್ಪುಗಳಾಗುವ ಸಾಧ್ಯತೆಯೇ ಅಧಿಕ. ಹೀಗಾಗಿ ತಮ್ಮ ತಪ್ಪನ್ನು ತಿದ್ದಿಕೊಂಡು ಜೊತೆಯಾಗಿ ಮುನ್ನೆಡುವ ಗುಣವು ದಾಂಪತ್ಯ ಜೀವನಕ್ಕೆ ಅಗತ್ಯವಾಗಿ ಬೇಕಾಗುತ್ತದೆ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ