Chewing Gum: ತಿನ್ನುವಾಗ ಆಕಸ್ಮಿಕವಾಗಿ ಚ್ಯೂಯಿಂಗ್ ಗಮ್ ನಿಮ್ಮ ಹೊಟ್ಟೆಯೊಳಗೆ ಹೋದರೆ ಏನಾಗುತ್ತೆ? ಮಾಹಿತಿ ಇಲ್ಲಿದೆ

ಕೇವಲ ಮಕ್ಕಳಷ್ಟೇ ಅಲ್ಲ ದೊಡ್ಡವರಿಗೂ ಚ್ಯೂಯಿಂಗ್ ಗಮ್ ಎಂದರೆ ತುಂಬಾ ಇಷ್ಟ. ಕೆಲವರು ಕಾಫಿ, ಟೀ ಕುಡಿದಷ್ಟೇ ಚ್ಯೂಯಿಂಗ್​ ಗಮ್​ ಅನ್ನು ಅಗಿಯುತ್ತಾರೆ. ಚ್ಯೂಯಿಂಗ್ ಗಮ್ ನುಂಗಿದರೆ ಏನೆಲ್ಲಾ ಆಗಬಹುದು? ಅದಕ್ಕೆ ಉತ್ತರ ಇಲ್ಲಿದೆ.

Chewing Gum: ತಿನ್ನುವಾಗ ಆಕಸ್ಮಿಕವಾಗಿ ಚ್ಯೂಯಿಂಗ್ ಗಮ್ ನಿಮ್ಮ ಹೊಟ್ಟೆಯೊಳಗೆ ಹೋದರೆ ಏನಾಗುತ್ತೆ? ಮಾಹಿತಿ ಇಲ್ಲಿದೆ
ಚ್ಯೂಯಿಂಗ್ ಗಮ್
Follow us
ನಯನಾ ರಾಜೀವ್
|

Updated on: Feb 21, 2023 | 8:00 AM

ಕೇವಲ ಮಕ್ಕಳಷ್ಟೇ ಅಲ್ಲ ದೊಡ್ಡವರಿಗೂ ಚ್ಯೂಯಿಂಗ್ ಗಮ್ ಎಂದರೆ ತುಂಬಾ ಇಷ್ಟ. ಕೆಲವರು ಕಾಫಿ, ಟೀ ಕುಡಿದಷ್ಟೇ ಚ್ಯೂಯಿಂಗ್​ ಗಮ್​ ಅನ್ನು ಅಗಿಯುತ್ತಾರೆ. ಚ್ಯೂಯಿಂಗ್ ಗಮ್ ನುಂಗಿದರೆ ಏನೆಲ್ಲಾ ಆಗಬಹುದು? ಅದಕ್ಕೆ ಉತ್ತರ ಇಲ್ಲಿದೆ. ಚೂಯಿಂಗ್ ಗಮ್ ನುಂಗಿದ ನಂತರ ಯಾವುದೇ ಆರೋಗ್ಯದ ಪರಿಣಾಮಗಳು ಕಂಡುಬರುವುದಿಲ್ಲ. ಚೂಯಿಂಗ್ ಗಮ್ ಅನ್ನು ಮತ್ತೆ ಮತ್ತೆ ನುಂಗಿದರೆ, ಅದು ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ, ನೀವು ಚ್ಯೂಯಿಂಗ್​ಗಮ್ ಅನ್ನು ನಿಯಮಿತವಾಗಿ ನುಂಗಿದರೆ ನೀವು ಕರುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು.

ಚ್ಯೂಯಿಂಗ್ ಗಮ್ ಜಗಿಯಬೇಕು, ಅದನ್ನು ನುಂಗಬಾರದು, ಚ್ಯೂಯಿಂಗ್ ಗಮ್ ನುಂಗಿದರೆ ಅದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಚ್ಯೂಯಿಂಗ್ ಗಮ್ ಹೊಟ್ಟೆಗೆ ಹೋದರೆ ಅದು ಯಾವುದೇ ಕಾರಣಕ್ಕೆ ಜೀರ್ಣವಾಗುವುದಿಲ್ಲ. ಚ್ಯೂಯಿಂಗ್ ಗಮಲ್ಲಿ ಅಂಟಿನ ವಸ್ತು ಅಧಿಕವಾಗಿರುವುದರಿಂದ ಜೀರ್ಣರಸಗಳಿಂದ ಚ್ಯೂಯಿಂಗ್ ಗಮ್ ಜೀರ್ಣವಾಗುವುದಿಲ್ಲ ಅದು ಅದೇ ಅವಸ್ಥೆಯಲ್ಲಿ ಸುಮಾರು 40 ಗಂಟೆ ಹೊಟ್ಟೆಯಲ್ಲಿ ಉಳಿಯುತ್ತದೆ. ಬಳಿಕವೇ ಅದು ಮಲದ ರೂಪದಲ್ಲಿ ಹೊಟ್ಟೆಯಿಂದ ಹೊರಗೆ ಬರುತ್ತದೆ.

ಮತ್ತಷ್ಟು ಓದಿ: Chewing Gum: ಕೆಟ್ಟ ಉಸಿರಿನಿಂದ, ಒತ್ತಡ ನಿವಾರಣೆವರೆಗೆ: ಚ್ಯೂಯಿಂಗ್​ ಗಮ್​ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ?

ಅಪರೂಪಕ್ಕೊಮ್ಮೆ ಮಗು ಚ್ಯೂಯಿಂಗ್ ಗಮ್ ನುಂಗಿದರೆ ದೊಡ್ಡ ಸಮಸ್ಯೆ ಏನೂ ಉಂಟಾಗುವುದಿಲ್ಲ. ಆದರೆ, ಮಗು ಪದೇ ಪದೇ ಚ್ಯೂಯಿಂಗ್ ಗಮ್ ನುಂಗಿದರೆ ಅದು ಮಗುವಿನ ಆರೋಗ್ಯಕ್ಕೆ ಕೆಟ್ಟದಾಗಿ ಪರಿಣಮಿಸುತ್ತದೆ. ನಿಮ್ಮ ಮಗುವಿಗೆ ಮಲಬದ್ದತೆ ಏನಾದರೂ ಇದ್ದರೆ ಈ ಬಬಲ್ ಗಮ್ ಅನಾಹುತಕಾರಿ ಆಗಬಲ್ಲದು. ಇದು ಕರುಳಿನಲ್ಲಿ ಸೇರಿಕೊಂಡು ಕರುಳಿನ ಬ್ಲಾಕೇಜ್ ಸೃಷ್ಟಿಸಬಹುದು.

ಚ್ಯೂಯಿಂಗ್ ಗಮ್ ಜೀರ್ಣವಾಗುವುದಿಲ್ಲ ಚ್ಯೂಯಿಂಗ್ ಗಮ್ ನುಂಗಿದರೆ ಅದು ಏಳು ವರ್ಷಗಳ ಕಾಲ ಹೊಟ್ಟೆಯಲ್ಲಿ ಉಳಿಯುತ್ತದೆ ಎಂಬ ಈ ಕಥೆಯನ್ನು ನಾವೆಲ್ಲರೂ ಎಂದೋ ಕೇಳಿರಲೇಬೇಕು, ವೈಜ್ಞಾನಿಕವಾಗಿ ಪುರಾವೆಗಳಿಲ್ಲ. 1998ರ ಪಿಡಿಯಾಟ್ರಿಕ್ಸ್ ಜರ್ನಲಲ್ಲಿ ಪ್ರಕಾಶಿತವಾಗಿರುವ ವರದಿ ಪ್ರಕಾರ, ಒಂದು ವೇಳೆ ಮಕ್ಕಳು ಬಬಲ್ ಗಮ್ ನುಂಗಿದರೆ ಮಕ್ಕಳಲ್ಲಿ ತೀವ್ರ ತರಹದ ಹೊಟ್ಟೆ ನೋವು ಕಾಣಿಸುತ್ತದೆ. ವಾಂತಿ ಉಂಟಾಗುತ್ತದೆ. ಮಲ ಬದ್ದತೆಯಾಗುತ್ತದೆ.

ಕರುಳಿನಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ ನಮ್ಮ ದೇಹವು ಅವುಗಳನ್ನು ಕರಗಿಸಲು ಬೇಕಾದ ಜೀರ್ಣಕಾರಿ ಕಿಣ್ವಗಳನ್ನು ಸಹ ಉತ್ಪಾದಿಸುವುದಿಲ್ಲ. ಅದಕ್ಕಾಗಿಯೇ ಅದು ನಮ್ಮ ಹೊಟ್ಟೆಯಲ್ಲಿ ಅನೇಕ ಬಾರಿ ಉಳಿಯುತ್ತದೆ. ಆದಾಗ್ಯೂ, ಉಳಿದ ಆಹಾರ ಪದಾರ್ಥಗಳು ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೂಲಕ ಚಲಿಸುವಾಗ, ಚ್ಯೂಯಿಂಗ್ ಗಮ್ ಸಹ ಚಲಿಸುತ್ತದೆ ಮತ್ತು ಮಲದ ಮೂಲಕ ದೇಹದಿಂದ ಹೊರಬರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು? ವಿಡಿಯೋ ನೋಡಿ
ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು? ವಿಡಿಯೋ ನೋಡಿ
Daily horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್