Situationship: ನಿನಗೆ ಬೇರೆ ಹೆಸರು ಬೇಕೆ, ಪ್ರೀತಿ ಎಂದರೆ ಅಷ್ಟೇ ಸಾಕೆ?

ಪ್ರೀತಿ, ಸಂಬಂಧ, ಮದುವೆ ಇವೆಲ್ಲವೂ ನೀವು ದಿನನಿತ್ಯ ಕೇಳುವಂತಹ ಶಬ್ದಗಳು ಆದರೆ ಸಿಚುಯೇಷನ್​ಶಿಪ್ ಎಂಬುದನ್ನು ಕೇಳಿದ್ದೀರಾ?ಡೇಟಿಂಗ್ ಹೋಗುತ್ತಾರೆ, ಸಿನಿಮಾಕ್ಕೆ ಹೋಗುತ್ತಾರೆ, ಗಂಟೆಗಟ್ಟಲೆ ಮಾತನಾಡುತ್ತಾರೆ ಆದರೆ ಇಬ್ಬರಿಗೆ ಏನು ಸಂಬಂಧವೆಂದರೆ ಕ್ಲ್ಯಾರಿಟಿಯೇ ಇರುವುದಿಲ್ಲ. ಸ್ನೇಹವೂ ಅಲ್ಲ ಪ್ರೀತಿಯೂ ಅಲ್ಲ ಎಂಬ ಹಾರಿಕೆ ಉತ್ತರ. 

Situationship: ನಿನಗೆ ಬೇರೆ ಹೆಸರು ಬೇಕೆ, ಪ್ರೀತಿ ಎಂದರೆ ಅಷ್ಟೇ ಸಾಕೆ?
ಸಿಚುವೇಷನ್​ಶಿಪ್
Follow us
TV9 Web
| Updated By: ನಯನಾ ರಾಜೀವ್

Updated on: Jan 04, 2023 | 7:00 PM

ಪ್ರೀತಿ, ಸಂಬಂಧ, ಮದುವೆ ಇವೆಲ್ಲವೂ ನೀವು ದಿನನಿತ್ಯ ಕೇಳುವಂತಹ ಶಬ್ದಗಳು ಆದರೆ ಸಿಚುವೇಷನ್​ಶಿಪ್ ಎಂಬುದನ್ನು ಕೇಳಿದ್ದೀರಾ?ಡೇಟಿಂಗ್ ಹೋಗುತ್ತಾರೆ, ಸಿನಿಮಾಕ್ಕೆ ಹೋಗುತ್ತಾರೆ, ಗಂಟೆಗಟ್ಟಲೆ ಮಾತನಾಡುತ್ತಾರೆ ಆದರೆ ಇಬ್ಬರಿಗೆ ಏನು ಸಂಬಂಧವೆಂದರೆ ಕ್ಲ್ಯಾರಿಟಿಯೇ ಇರುವುದಿಲ್ಲ. ಸ್ನೇಹವೂ ಅಲ್ಲ ಪ್ರೀತಿಯೂ ಅಲ್ಲ ಎಂಬ ಹಾರಿಕೆ ಉತ್ತರ.  ರಿಲೇಷನ್​ಶಿಪ್​ನಲ್ಲಿ ಇಲ್ಲದಿರುವುದು ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಆಗುತ್ತಿದೆ. ಡೇಟಿಂಗ್ ಮಾಡಿದ ನಂತರವೂ ನಿಮ್ಮ ಸಂಬಂಧಕ್ಕೆ ಯಾವುದೇ ಹೆಸರನ್ನು ನೀಡಲು ಸಾಧ್ಯವಾಗದಿದ್ದರೆ ಅದನ್ನು ಸಿಚುವೇಷನ್​ಶಿಪ್ ಎಂದು ಕರೆಯಲಾಗುತ್ತದೆ. ನಾವ್ಯಾರು ರಿಲೇಷನ್​ಶಿಪ್ ಎಕ್ಸ್​ಪರ್ಟ್ಸ್​ಗಳಲ್ಲ ಆದರೆ ಕಾಲ ಬದಲಾದಂತೆ ಸಂಬಂಧಗಳ ರೀತಿ ಬದಲಾಗಬಹುದೇ ವಿನಃ ಸಂಬಂಧ ಬದಲಾಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಸ್ನೇಹಕ್ಕಿಂತ ಹೆಚ್ಚು, ಸಂಬಂಧಕ್ಕಿಂತ ಕಡಿಮೆ ನೀವು ಸ್ನೇಹದಿಂದ ಹಿಂದೆ ಸರಿದಿದ್ದರೂ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಹೆಸರಿಸಲು ಸಾಧ್ಯವಾಗದಿದ್ದರೆ, ನೀವು ಸಿಚುಯೇಷನ್​ಶಿಪ್​ನಲ್ಲಿ ಇದ್ದೀರಿ ಎಂದರ್ಥ. ಇಂದು ಪ್ರೀತಿಯನ್ನು ಹೇಳಿಕೊಳ್ಳುವಾಗ ಲವ್ ಲೆಟರ್ ಬದಲು ಲವ್ ಮೆಸೇಜ್ ಕಳುಹಿಸಿರಬಹುದು, ನೇರವಾಗಿ ಪ್ರೀತಿ ಹೇಳಿಕೊಳ್ಳುವ ಬದಲು ಕರೆ ಮಾಡಿ ಪ್ರೀತಿ ಹೇಳಿಕೊಂಡಿರಬಹುದು. ಆದರೆ ಪ್ರೀತಿ ಎನ್ನುವುದರ ಅರ್ಥ ಎಂದೂ ಬದಲಾಗುವುದಿಲ್ಲ, ಹೇಳಿಕೊಳ್ಳುವ ರೀತಿ ಬದಲಾಗಬಹುದಷ್ಟೇ. ಪ್ರೀತಿಯಲ್ಲಿ ಗೆದ್ದವರೂ ಇದ್ದಾರೆ ಬಿದ್ದವರೂ ಇದ್ದಾರೆ, ಹಾಗೆಂದ ಮಾತ್ರಕ್ಕೆ ಪ್ರೀತಿಯ ವ್ಯಾಖ್ಯಾನವೇನೂ ಬದಲಾಗುವುದಿಲ್ಲವಲ್ಲ.

ನೀವು ಒಬ್ಬರನ್ನು ಭೇಟಿಯಾಗಬಹುದು ಕಾಲ ಕ್ರಮೇಣ ನಿಮ್ಮ ಮಧ್ಯೆ ಪ್ರೀತಿ ಚಿಗುರಬಹುದು, ನಿಮ್ಮ ಜೀವನದ ಸಿಹಿ, ಕಹಿ ನೆನಪುಗಳನ್ನು ಅವರ ಬಳಿ ಹಂಚಿಕೊಳ್ಳಲು ಪ್ರಾರಂಭಿಸುತ್ತೀರಿ.

ನಾವು ಏನು? ನೀವು ಈ ಸಂಬಂಧವನ್ನು ಮಾಡರ್ನ್ ರಿಲೇಷನ್​ಶಿಪ್ ಎಂದು ಕರೆಯುತ್ತೀರೋ ಅಥವಾ ಇನ್ನೇನು ಕರೆಯುತ್ತೀರೋ ಅದು ನಿಮಗೆ ಬಿಟ್ಟಿದ್ದು. ಆದರೆ ನೀವು ನಿಮ್ಮ ಸಂಗಾತಿಗೆ ಇಷ್ಟವಾಗುವಂತೆ ನಡೆದುಕೊಳ್ಳಿ, ಕಂಫರ್ಟ್​ ಝೋನ್ ಕ್ರಿಯೇಟ್ ಮಾಡಿ. ನೀವು ಯಾರೋ ಒಂದು ವ್ಯಕ್ತಿಯನ್ನು ಭೇಟಿ ಮಾಡಿದಾಗ, ತುಂಬಾ ದಿನಗಳ ವರೆಗೆ ಅವರ ಜತೆ ಮಾತನಾಡಿದ ಬಳಿಕ ಆ ವ್ಯಕ್ತಿಯ ಬಗ್ಗೆ ಒಂದು ಭಾವನೆ ಹುಟ್ಟಿಕೊಳ್ಳುತ್ತದೆ. ಆದರೆ ಆ ಭಾವನೆ ಏನೆಂದು ನೀವು ತಿಳಿಯದ ಪರಿಸ್ಥಿತಿಯೇ ಸಿಚುಯೇಷನ್​ಶಿಪ್.

ನಿತ್ಯವೂ ಅವರಿಗೆ ಕರೆ ಮಾಡುವುದು, ನಿಮ್ಮ ಕಷ್ಟ, ಸುಖಗಳು ನಿಮ್ಮ ಜೀವನಕ್ಕೆರ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಹಂಚಿಕೊಳ್ಳುವುದು ಮುಂದುವರೆಯುತ್ತದೆ. ಕೆಲವು ತಿಂಗಳುಗಳ ಬಳಿಕ ನಾವು ಯಾರು ಎಂಬ ಪ್ರಶ್ನೆ ಕಾಡಲು ಶುರುವಾಗುತ್ತದೆ.

ನಮ್ಮ ಸಂಬಂಧ ಎತ್ತ ಕಡೆ ಹೋಗುತ್ತಿದೆ? ನಾವು ಎತ್ತ ಕಡೆ ಹೋಗುತ್ತಿದ್ದೇವೆ ಎಂದು ನಿಮ್ಮನ್ನು ನೀವು ಪ್ರಶ್ನೆ ಕೇಳಿಕೊಂಡರೆ ತೃಪ್ತಿದಾಯಕ ಉತ್ತರ ಸಿಗುವುದಿಲ್ಲ. ಒಂದೆಡೆ ಮನೆಯಲ್ಲಿ ಯಾವಾಗ ಮದುವೆಯಾಗುತ್ತೀಯಾ ಎಂದು ಕೇಳುತ್ತಾರೆ ಅದಕ್ಕೆ ನೀವು ಯಾರಾದರೂ ಹುಡುಗಿ ಇದ್ದರೆ ಹೇಳಿ ಎನ್ನುವ ಹಾರಿಕೆ ಉತ್ತರ ಕೊಟ್ಟು ಬಂದಿರುತ್ತೀರಿ. ಅದು ಬಾಯಿ ಮಾತಿಗೆ ಹೇಳಿರಬಹುದು, ಆದರೆ ಅದು ಅಷ್ಟು ಸುಲಭವಾದ ಮಾತಲ್ಲ. ಅವರು ಕೊಟ್ಟಿರುವ ಮೊದಲು ಹೂವು, ಚಾಕಲೇಟ್ ಕವರ್ ಇಂದ ಹಿಡಿದು ಅವರ ನೆನಪುಗಳು ನಿಮ್ಮ ಜತೆಯಲ್ಲೇ ಇರುತ್ತವೆ.

ಹಾಗಾದರೆ ಎಲ್ಲರಿಗೂ ನಮ್ಮ ಪ್ರೀತಿ ತಿಳಿಯುವಂತೆ ಮಾಡುವುದೇ? ನೀವು ನಿಮ್ಮ ಪ್ರೀತಿ ಹಾಗೂ ಪ್ರಿಯಕರ/ಪ್ರಿಯತಮೆಯನ್ನು ನಿಜವಾಗಿಯೂ ಇಷ್ಟಪಡುತ್ತೀರಿ ಎಂದಾದರೆ ನಮ್ಮ ಪ್ರೀತಿಯನ್ನು ಸಮಾಜಕ್ಕೆ ತಿಳಿಯುವಂತೆ ಮಾಡೋಣ ಎಂದುಕೊಳ್ಳುತ್ತಾರೆ. ಕೆಫೆ, ಹೋಟೆಲ್ ಎಲ್ಲಿಗೇ ಹೋದರೂ ನಿಮ್ಮ ಪರಿಚಯಸ್ಥರಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವೇ? ಸಿನಿಮಾ ಅಥವಾ ಮಾಲ್​ಗಳಿಗೆ ಹೋದರೆ ಅಷ್ಟು ಸರಿ ಅನಿಸುವುದಿಲ್ಲ ಎಂಬುದು ಅವರ ಭಾವನೆ.

ಸಂಬಂಧಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳದೇ ಇರುವುದು ವರ್ಷಗಳ ಕಾಲ ಪರಸ್ಪರ ಮಾತನಾಡುತ್ತಾರೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ, ಡೇಟಿಂಗ್ ಮಾಡುತ್ತಾರೆ ಆದರೆ ಸಂಬಂಧವನ್ನು ಔಪಚಾರಿಕವಾಗಿ ಒಪ್ಪಿಕೊಳ್ಳಲು ಹೆದರುತ್ತಾರೆ.

ಹೆಸರಿಲ್ಲದ ಸಂಬಂಧ ಮುಂದುವರೆಸುವುದು ಹೇಗೆ? ನಮ್ಮ ಸ್ನೇಹ ವಿಶೇಷವಾಗಿದೆ ಎಂದು ಹೇಳುವ ಮೂಲಕ ಸ್ನೇಹಿತನೊಂದಿಗೆ ಸಂಗಾತಿಯ ಲಾಭ ಪಡೆಯುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ