ಚಾಕೋಲೇಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೂ ಚಾಕೊಲೇಟ್ ಇಷ್ಟ ಪಟ್ಟು ಸೇವಿಸುತ್ತಾರೆ. ಯಾವುದೇ ಸಂದರ್ಭವಿರಲಿ, ತಮ್ಮ ಆತ್ಮೀಯರಿಗೆ ಚಾಕೊಲೇಟ್ ಅನ್ನು ಗಿಫ್ಟ್ ಆಗಿ ನೀಡುವುದಿದೆ. ಹೀಗಾಗಿಯೇ ಈ ಚಾಕೊಲೇಟ್ ಎನ್ನುವುದು ಉಡುಗೊರೆಯ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಫೆಬ್ರವರಿ 9 ರಂದು ಚಾಕೋಲೇಟ್ ಡೇಯಂದುಯಂದು ಪ್ರೀತಿಸುವ ವ್ಯಕ್ತಿಯ ಮನಸ್ಸು ಹಾಗೂ ಬಾಯಿ ಸಿಹಿ ಮಾಡಲು ಈ ರೀತಿಯ ಚಾಕೊಲೇಟ್ ಉಡುಗೊರೆಯನ್ನು ನೀಡಿದರೆ ಬೆಸ್ಟ್.
* ಚಾಕಲೇಟ್ ಬಾಸ್ಕೆಟ್ ನೀಡಿ : ಮಾರುಕಟ್ಟೆಯಲ್ಲಿ ವಿವಿಧ ಚಾಕೊಲೇಟ್ ಗಳು ಲಭ್ಯವಿದ್ದು, ಹಾರ್ಟ್ ಶೇಪ್ ಚಾಕೊಲೇಟ್ ನೀಡಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಒಂದು ವೇಳೆ ಚಾಕೊಲೇಟ್ ಗಿಫ್ಟ್ ನೀಡುವುದಿದ್ದರೆ, ಬಾಕ್ಸ್ ಬಾಸ್ಕೆಟ್ ಅನ್ನು ಸರ್ಪ್ರೈಸ್ ರೀತಿಯಲ್ಲಿ ನೀಡುವ ಮೂಲಕ ಆಚರಿಸಿಕೊಳ್ಳಬಹುದು.
* ಚಾಕೊಲೇಟ್ ನಿಂದ ಕೂಡಿದ ಬೊಕ್ಕೆ ನೀಡಿ: ಹೆಣ್ಣು ಮಕ್ಕಳಿಗೆ ಚಾಕೊಲೇಟ್ ಎಂದರೆ ಪಂಚಪ್ರಾಣ. ಚಾಕೊಲೇಟ್ ಡೇಯಂದು ಪ್ರೇಯಸಿಗೆ ಚಾಕೊಲೇಟ್ ನಿಂದ ಕೂಡಿದ ಬೊಕ್ಕೆಯನ್ನು ನೀಡಿದರೆ ಖುಷಿಯಾಗುತ್ತದೆ.
* ಚಾಕೊಲೇಟ್ ಥೀಮ್‌ನ ಡಿನ್ನರ್ ಅರೇಂಜ್ಡ್ ಮಾಡಿ : ಚಾಕೊಲೇಟ್ ಡೇ ದಿನದಂದು ಚಾಕೊಲೇಟ್ ಥೀಮ್‌ನ ಡಿನ್ನರ್ ಆಯೋಜಿಸಬಹುದು. ಈ ಡಿನ್ನರ್ ನಲ್ಲಿ ಎಲ್ಲೆಲ್ಲೂ ಚಾಕೊಲೇಟ್ ಗಳಿಂದ ಅಲಂಕಾರ ಮಾಡಿದರೆ ಬೆಸ್ಟ್.
* ನಿಮ್ಮ ಕೈಯಾರೆ ಚಾಕೊಲೇಟ್ ತಯಾರಿಸಿ ನೀಡಿ: ಮಾರುಕಟ್ಟೆಯಲ್ಲಿ ಸಿಗುವ ಚಾಕೊಲೇಟ್ ಗಿಂತ ನಿಮ್ಮ ಕೈಯಾರೆ ವಿವಿಧ ವಿನ್ಯಾಸದ ಚಾಕೊಲೇಟ್ ಮಾಡಿ ನೀಡಿದರೆ ಪ್ರೇಮಿಗೆ ಖುಷಿಯಾಗುತ್ತದೆ. ನೀವೆಷ್ಟು ಆಕೆಯನ್ನು ಪ್ರೀತಿಸುತ್ತೀರಾ ಎನ್ನುವುದು ಅರ್ಥಮಾಡಿಸಿಕೊಟ್ಟಂತೆ ಆಗುತ್ತದೆ.
ಇದನ್ನೂ ಓದಿ: ನಿಮ್ಮ ಸಂಗಾತಿಗೆ ಈ ರೀತಿ ಚಾಕೋಲೇಟ್ ಕೊಟ್ಟು ಸರ್ಪ್ರೈಸ್ ನೀಡಿ
* ಚಾಕೊಲೇಟ್ ಥೀಮ್‌ನ ಗಿಫ್ಟ್‌ಗಳು: ಹೆಣ್ಣು ಮಕ್ಕಳಿಗೆ ಬ್ಯೂಟಿ ಪ್ರಾಡಕ್ಟ್ ಗಳೆಂದರೆ ತುಂಬಾನೇ ಇಷ್ಟ. ಅದರಲ್ಲಿಯು ಈ ಚಾಕೊಲೇಟ್ ಡೇ ಯಂದು ಚಾಕೊಲೇಟ್ ಫ್ಲೆವರ್ಡ್ ಬ್ಯೂಟಿ ಪ್ರಾಡಕ್ಟ್‌ಗಳನ್ನು ಉಡುಗೊರೆಯಾಗಿ ನೀಡಿದರೆ ಪ್ರೇಯಸಿಗೆ ಇಷ್ಟವಾಗುವುದರಲ್ಲಿ ಯಾವುದೇ ಡೌಟ್ ಇಲ್ಲ.
* ಚಾಕೊಲೇಟ್ ಜೊತೆ ಗುಲಾಬಿ ಹೂವು ನೀಡಿ : ವಿವಿಧ ಬಗೆಯ ಚಾಕೊಲೇಟ್ ಜೊತೆಗೆ ಗುಲಾಬಿ ಹೂವಿನ ಗುಚ್ಛ ನೀಡುವುದರಿಂದ ಪ್ರೇಯಸಿಯು ಖುಷಿಪಡುತ್ತಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ