ತಮಗೊಂದು ಮುದ್ದಾದ ಮಗು ಬೇಕು ಎಂಬುದು ಪ್ರತಿಯೊಬ್ಬ ದಂಪತಿಯ ಕನಸಾಗಿರುತ್ತದೆ. ಮಗುವನ್ನು ಪಡೆಯುವ ನಿರ್ಧಾರದ ಕುರಿತು ಪತಿ,ಪತ್ನಿ ಇಬ್ಬರೂ ಕುಳಿತು ಮಾತನಾಡಬೇಕು. ತಂದೆ ಹಾಗೂ ಮಗುವಿನ ಬಾಂಧವ್ಯದ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ. ಕೇವಲ ಮಗುವನ್ನು ಪಡೆಯುವ ಬಗ್ಗೆ ಮಾತ್ರವಲ್ಲ, ನಿಮ್ಮ ಪತ್ನಿಗೆ ಯಾವ ರೀತಿ ಹೆರಿಗೆ ಮಾಡಿಸಿಕೊಳ್ಳುವುದು ಇಷ್ಟ, ಹೆರಿಗೆಯ ಬಗ್ಗೆ ಯಾವ ರೀತಿ ಭಯ ಆಕೆಯ ಮನಸ್ಸಿನಲ್ಲಿದೆ ಎಂಬುದನ್ನು ತಿಳಿದುಕೊಳ್ಳಿ, ಹಾಗೆಯೇ ಆಕೆಯ ನಂಬಿಕೆಯನ್ನೂ ಗೌರವಿಸುವುದು ಮುಖ್ಯವಾಗುತ್ತದೆ.
ಹಾಗೆಯೇ ಯಾವ ರೀತಿಯ ಹೆರಿಗೆಯಿಂದ ಯಾವ ಪ್ರಯೋಜನವಾಗುತ್ತದೆ, ಯಾವ ರೀತಿಯ ಸಮಸ್ಯೆಗಳು ಕಾಡಬಹುದು ಎಂಬುದನ್ನು ಮೊದಲೇ ನಿರ್ಧರಿಸಿ. ಹಾಗೆಯೇ ಮಗು ಹಾಗೂ ತಾಯಿಯ ನಡುವೆ ಇದ್ದಂತೆಯೇ ಮಗು ಹಾಗೂ ತಂದೆಯ ನಡುವೆಯೂ ಬಾಂಧವ್ಯ ಇರುತ್ತದೆ. ಹೆರಿಗೆಯಾದ ತಕ್ಷಣವೇ ಮಗುವನ್ನು ಎತ್ತಿಕೊಳ್ಳಿ.
ಇದು ಕೇವಲ ಕರ್ತವ್ಯವಲ್ಲ ಜೀವನಪೂರ್ತಿ ಹಸಿರಾಗಿ ಉಳಿಯುವ ನೆನಪುಗಳ ಜತೆಗೆ ನಿಮ್ಮ ಹಾಗೂ ನಿಮ್ಮ ಮಗುವಿನ ಬಾಂಧವ್ಯ ಅಲ್ಲಿಂದಲೇ ಗಟ್ಟಿಯಾಗುತ್ತಾ ಹೋಗುತ್ತದೆ.
ಮಗುವನ್ನು ಮೊದಲು ಎತ್ತಿಕೊಂಡಾಗ ಆಗುವ ಖುಷಿಯೇ ಬೇರೆ, ಆದರೆ ಕೆಲವು ತಂದೆಯಂದಿರಿಗೆ ಭಯ, ಮಗುವನ್ನು ಎತ್ತಿಕೊಳ್ಳುವುದು ಸರಿಯಾಗದಿದ್ದರೆ ಮಗುವಿಗೇನಾದರೂ ತೊಂದರೆಯಾದರೆ ಎಂಬುದು, ಆದರೆ ಆ ಭಯದಲ್ಲಿ ನಿಮಗೆ ಸಿಗುವ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಧೈರ್ಯವಿರಲಿ, ಒಮ್ಮೆ ನಿಮ್ಮ ಕೈಯಲ್ಲಿ ಮಗುವನ್ನು ಎತ್ತಿಕೊಂಡು ನೋಡಿ ಆಗ ನಿಮಗಾಗುವ ಖುಷಿಯೇ ಬೇರೆ.
ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.
ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.
Published On - 11:02 am, Mon, 18 July 22