ಪುರುಷರು ಪ್ಯಾಂಟ್​​​ನ ಯಾವ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡರೆ ಉತ್ತಮ?

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 27, 2023 | 2:36 PM

ಪುರುಷರು ತಮ್ಮ ಫೋನ್​​​ಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಅನಿವಾರ್ಯವಾಗಿ ಫೋನ್​​​ಗಳನ್ನು ಜೇಬಿನಲ್ಲಿಡಬೇಕಾಗುತ್ತದೆ. ಹೀಗಿರುವ ಸಂದರ್ಭದಲ್ಲಿ ಈ ಅಭ್ಯಾಸದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಯಾವ ಜೇಬಿನಲ್ಲಿ ಮೊಬೈಲ್ ಇಟ್ಟರೆ ಉತ್ತಮ ಎಂಬ ಮಾಹಿತಿ ಇಲ್ಲಿದೆ.

ಪುರುಷರು ಪ್ಯಾಂಟ್​​​ನ ಯಾವ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡರೆ ಉತ್ತಮ?
ಸಾಂದರ್ಭಿಕ ಚಿತ್ರ
Follow us on

ಸ್ಮಾರ್ಟ್ ಫೋನ್ ದೈನಂದಿನ ಜೀವನದ ಒಂದು ಭಾಗವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಅದನ್ನು ನಮ್ಮಿಂದ ಪ್ರತ್ಯೇಕವಾಗಿಡಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ಸಂಪರ್ಕ ಸಾಧಿಸಲು ಮನರಂಜನೆಯ ಉದ್ದೇಶದಿಂದ ಜನರು ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳ ಬಳಕೆ ಮಾಡುತ್ತಾರೆ. ಇದರಿಂದ ಆರೋಗ್ಯಕ್ಕೆ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿದಿದ್ದರೂ ಹೆಚ್ಚಿನವರು ಮೊಬೈಲ್ ಬಿಟ್ಟು ಇರುವುದಿಲ್ಲ. ಅನೇಕರು ದಿನದ 24 ಗಂಟೆಯೂ ಮೊಬೈಲ್​​​ಗಳನ್ನು ತಮ್ಮ ಬಳಿಯೇ ಇಟ್ಟಕೊಂಡು ಓಡಾಡುತ್ತಾರೆ. ಮಹಿಳೆಯರು ಫೋನ್​​​ಗಳನ್ನು ಪರ್ಸ್ ಅಥವಾ ಬ್ಯಾಗ್​​​ನಲ್ಲಿ ಇಟ್ಟುಕೊಂಡು ಓಡಾಡಿದರೆ ಪುರುಷರು ಪ್ಯಾಂಟ್ ಜೇಬಿನಲ್ಲಿ ಫೋನ್​​ಗಳನ್ನು ಇಟ್ಟುಕೊಳ್ಳುತ್ತಾರೆ. ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುವುದರಿಂದ ಅದರಿಂದ ಸೂಸುವ ವಿಕಿರಣಗಳಿಂದಾಗಿ ಆರೋಗ್ಯಕ್ಕೆ ಹಲವು ರೀತಿಯ ಹಾನಿಯಿದೆ ಎಂದು ತಿಳಿದಿದ್ದರೂ ಅನೇಕ ಪುರುಷರು ಅನಿವಾರ್ಯವಾಗಿ ಮೊಬೈಲ್ ಫೋನ್ ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತಾರೆ. ಹೀಗಿರುವಾಗ ಈ ಅಭ್ಯಾಸದ ದುಷ್ಪರಿಣಾಮವನ್ನು ತಪ್ಪಿಸಲು ಸಾಧ್ಯವಿಲ್ಲದಿದ್ದರೂ, ಅಪಾಯವನ್ನು ಆದಷ್ಟು ಕಡಿಮೆ ಮಾಡಲು ಪುರುಷರು ಪ್ಯಾಂಟ್​​​ನ ಯಾವ ಜೇಬಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡರೆ ಉತ್ತಮ ಎಂಬುದನ್ನು ನೋಡೋಣ.

ಜೇಬಿನಲ್ಲಿ ಫೋನ್ ಇಡುವುದು ಆರೋಗ್ಯಕ್ಕೆ ಹಾನಿಕಾರಕ:

ನಿಮ್ಮ ಜೇಬಿನಲ್ಲಿ ವೈರ್ ಲೆಸ್ ನೆಟ್ವರ್ಕ್​​ಗೆ ಸಂಪರ್ಕ ಹೊಂದಿದ ಫೋನ್​​ನ್ನು ಇರಿಸಿದಾದ ದೇಹವು 2 ರಿಂದ 7 ಪಟ್ಟು ವಿಕಿರಣಗಳನ್ನು ಹೊರಬೇಕಾಗುತ್ತದೆ. ಈ ವಿಕಿರಣಗಳು ಮಾನವನ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಅಂಶವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಫೋನ್ ವಿಕಿರಣಗಳು ಕೂಡಾ ಕ್ಯಾನ್ಸರ್ ಗೆ ಕಾರಣವೆಂದು ಪರಿಗಣಿಸಲಾಗಿದೆ. ಈ ವಿಕಿರಣಗಳು ನಿಮ್ಮ ಡಿ.ಎನ್.ಎ ರಚನೆಯನ್ನು ಸಹ ಬದಲಾಯಿಸಬಹುದು. ಈ ಕಾರಣದಿಂದ ಆರೋಗ್ಯಕ್ಕೆ ಹಲವು ಅಪಾಯಗಳು ಉಂಟಾಗಬಹುದು. ಮತ್ತೊಂದೆಡೆ ಶರ್ಟ್ ಜೇಬಿನಲ್ಲಿ ಸ್ಮಾರ್ಟ್ ಫೋನ್ ಇಟ್ಟರೆ ಅದು ಹೃದಯ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ ಫೋನ್ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಅದರಿಂದ ಸೂಸುವ ವಿಕಿರಣವು ನಮ್ಮ ಮೂಳೆ ವಿಶೇಷವಾಗಿ ಸೊಂಟದ ಮೂಳೆಯನ್ನು ದುರ್ಬಲಗೊಳಿಸಬಹುದು.

ಇದನ್ನೂ ಓದಿ: ದೀರ್ಘಾಯುಷ್ಯಕ್ಕಾಗಿ ಈ 8 ಸರಳ ಆರೋಗ್ಯಕರ ಅಭ್ಯಾಸಗಳು ಬೇಕು: ಅಧ್ಯಯನ

ಪುರುಷರು ಮೊಬೈಲ್ ಫೋನನ್ನು ಪ್ಯಾಂಟ್​​​ನ ಯಾವ ಜೇಬಿನಲ್ಲಿ ಇಟ್ಟುಕೊಂಡರೆ ಉತ್ತಮ:

ಪುರುಷರು ಒಂದು ವೇಳೆ ಪ್ಯಾಂಟ್​​ನ ಮುಂಭಾಗದ ಜೇಬಿನಲ್ಲಿ ಮೊಬೈಲ್ ಇರಿಸಿದರೆ ಅದು ವೀರ್ಯದ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮವನ್ನು ಉಂಟುಮಾಡಬಹುದು. ಫೋನ್ ಇರಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಪರ್ಸ್ ಅಥವಾ ಬ್ಯಾಗ್. ಅನೇಕರಿಗೆ ಇದು ಸಾಧ್ಯವಾಗುವುದಿಲ್ಲ. ಹೀಗಿರುವಾಗ ನೀವು ಫೋನ್​​ಗಳನ್ನು ಪ್ಯಾಂಟ್​​ನ ಮುಂದಿನ ಜೇಬಿನಲ್ಲಿ ಇಡುವ ಬದಲು ಅದನ್ನು ಹಿಂದಿನ ಜೇಬಿನಲ್ಲಿ ಇಟ್ಟುಕೊಳ್ಳಿ. ಮತ್ತೊಂದು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ಮೊಬೈಲ್ ಪೋನ್ ಹಿಂಭಾಗವು ಮೇಲ್ಮುಖವಾಗಿರಬೇಕು. ನಿಮ್ಮ ಚರ್ಮಕ್ಕೆ ತಾಕುವಂತಿರಬಾರದು. ಇದರಿಂದ ದೇಹಕ್ಕೆ ಅಷ್ಟಾಗಿ ವಿಕಿರಣವು ಸೋಸುವುದಿಲ್ಲ. ಹೀಗೆ ಹಿಂದಿನ ಜೇಬಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಳ್ಳುವ ಮೂಲಕ ನಿಮ್ಮ ಆರೋಗ್ಯದ ಮೇಲೆ ಉಂಟಾಗುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 2:35 pm, Thu, 27 July 23