ವರ್ಷ ಪೂರ್ತಿ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸುವುದರ ಜೊತೆಗೆ ನಿಮ್ಮ ಚರ್ಮದ ಆರೋಗ್ಯದ ದೃಷ್ಟಿಯಿಂದ ಬಿಳಿ ಬಟ್ಟೆ ಧರಿಸುವುದನ್ನು ರೂಢಿಸಿಕೊಳ್ಳಿ. ಹೊಸ ವರ್ಷದಿಂದ ನಿಮ್ಮ ವಾರ್ಡ್‌ರೋಬ್‌ನಲ್ಲಿ ಬಿಳಿ ಬಣ್ಣದ ಬಟ್ಟೆಗಳು ಜೋಡಿಸಿ. ವಿವಿಧ ಶೈಲಿಯ ಬಿಳಿ ಬಣ್ಣದ ಬಟ್ಟೆಗಳ ಕುರಿತು ಮಾಹಿತಿ ಇಲ್ಲಿವೆ. ಇದು ಬೇಸಿಗೆ ಕಾಲದಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.
ಬಿಳಿ ಬಣ್ಣದಿಂದ ನಿಮ್ಮ ಲುಕ್ ಆಕರ್ಷಕವಾಗಿ ಕಾಣುವುದರ ಜೊತೆಗೆ ನಿಮ್ಮ ಚರ್ಮದ ಟೋನ್ ಮೇಲೆ ಹೊಗಳುವಂತೆ ಕಾಣುತ್ತದೆ.
ಮಹಿಳೆಯರು ಹೊಂದಿರಬೇಕಾದ ಐದು ಬಿಳಿ ಬಟ್ಟೆಗಳು ಇಲ್ಲಿವೆ.
1.ಬಿಳಿ ಮ್ಯಾಕ್ಸಿ ಉಡುಗೆ:
ಬಿಳಿಯ ಮ್ಯಾಕ್ಸಿ ಡ್ರೆಸ್ ನಿಮ್ಮ ವಾರ್ಡ್‌ರೋಬ್‌ನಲ್ಲಿ ಜೋಡಿಸಬೇಕಾದ ಪ್ರಮುಖ ಬಟ್ಟೆಗಳಲ್ಲಿ ಒಂದಾಗಿದೆ. ಇದು ತುಂಬಾ ಹಗುರವಾಗಿದ್ದು, ಚರ್ಮದ ಮೇಲೆ ಆರಾಮದಾಯಕವಾಗಿರುತ್ತವೆ. ನಿಮ್ಮ ಬಿಳಿ ಮ್ಯಾಕ್ಸಿ ಉಡುಗೆಯನ್ನು ಗೋಲ್ಡನ್ ಸ್ಯಾಂಡಲ್‌ಗಳು ಮತ್ತು ಚಿರತೆ ಚರ್ಮದ ರೀತಿಯ ಹ್ಯಾಂಡ್ ಬ್ಯಾಗ್ ಜೊತೆಗೆ ಸಖತ್ತ್ ಸ್ಟೈಲೀಶ್ ಲುಕ್ ನೀಡುತ್ತದೆ.
2.ಶಾಸ್ತ್ರೀಯ ಶೈಲಿಯ ಕ್ಲಾಸಿಕ್ ಬಿಳಿ ಶರ್ಟ್:
ಬಿಳಿ ಬಣ್ಣದ ಶರ್ಟ್ ಇಲ್ಲದೆ ಇರುವ ನಿಮ್ಮ ವಾರ್ಡ್ರೋಬ್ ಅಪೂರ್ಣ ಎಂದು ಹೇಳಬಹುದು. ಇದು ನಿಮಗೆ ಕ್ಲಾಸಿ ಲುಕ್ ನೀಡುವಲ್ಲಿ ತುಂಬಾ ಸಹಕಾರಿಯಾಗಿದೆ. ಸ್ಟೈಲಿಶ್ ಲುಕ್‌ಗಾಗಿ ಲೆದರ್ ಸ್ಕರ್ಟ್ ಮತ್ತು ನೀಲಿ ಜೀನ್ಸ್ ಜೊತೆಗೆ ಇದು ಒಂದು ಒಳ್ಳೆಯ ಜೋಡಿಯಾಗಿದೆ. ನೀವು ಇದನ್ನು ಔಪಚಾರಿಕ ಕೂಟಗಳಿಗೆ ಮಾತ್ರವಲ್ಲದೆ ನಿಮ್ಮ ಕುಟುಂಬದ ಜೊತೆಗಿನ ಪ್ರವಾಸಗಳಲ್ಲಿಯೂ ಧರಿಸಬಹುದು.
3.ಟ್ರೆಂಡಿ ಬಿಳಿ ಜೀನ್ಸ್:
ನೀವು ಬಿಳಿ ಜೀನ್ಸ್ ಹಳೆಯ ಫ್ಯಾಶನ್ ಎಂದು ನೀವು ಭಾವಿಸಿದರೆ, ಅದು ತಪ್ಪು. ಇದು ಇವಾಗ ಸಿನಿಮಾ ನಟಿಯರಿಂದ ಸಖತ್ತ್ ಫೇಮಸ್ ಆಗ್ತಾ ಇದೆ. ಕಪ್ಪು ಬಣ್ಣ ಶೂಗಳಿಗೆ ಈ ಬಿಳಿ ಜೀನ್ಸ್ ಹೇಳಿ ಮಾಡಿಸಿದ ಜೋಡಿ. ನಿಮ್ಮಲ್ಲಿರುವ ಕಪ್ಪು ಹಾಗೂ ಗಾಢ ಬಣ್ಣದ ಬಟ್ಟೆಗಳೊಂದಿಗೆ ಇದನ್ನು ಧರಿಸಿ.
4.ಬೆರಗುಗೊಳಿಸುವ ಬಿಳಿ ಸೀರೆ:
ಈ ಮದುವೆಯ ಋತುವಿನಲ್ಲಿ ನಿಮಗೆ ಆಕರ್ಷಕ ಲುಕ್ ನೀಡುತ್ತದೆ. ಬಿಳಿಯ ಬಣ್ಣದ ಜೊತೆಗೆ ಬಂಗಾರದ ಬಣ್ಣಗಳ ಮಿನುಗು ಡಿಸೈನ್, ಸಾವಿರಾರು ಜನಗಳ ಮಧ್ಯೆ ಎದ್ದು ಕಾಣುವಂತೆ ಮಾಡುತ್ತದೆ. ಪಚ್ಚೆ ಅಥವಾ ವೈಡೂರ್ಯದ ನೀಲಿ ಬಣ್ಣದ ಆಭರಣದೊಂದಿಗೆ ಬಿಳಿ ಸೀರೆಯನ್ನು ಧರಿಸುವುದು ಉತ್ತಮವಾಗಿದೆ.
5.ಬಿಳಿ ಸ್ಕರ್ಟ್:
ನೀವು ಹೆಚ್ಚು ಸಂಪ್ರದಾಯಿಕ ಲುಕ್ ಅನ್ನು ಬಯಸಿದರೆ, ಬಿಳಿ ಬಣ್ಣದ ಉದ್ದದ ಸ್ಕರ್ಟ್ ಹಾಗೂ ಆಫ್ ಶೋಲ್ಡರ್ ಟಾಪ್ ಜೊತೆಗೂ ಧರಿಸಬಹುದಾಗಿದೆ. ಇದಲ್ಲದೇ ಮಿನಿ ಸ್ಕರ್ಟ್‌ಗಳ ರೀತಿಯಲ್ಲೂ ಧರಿಸಬಹುದು. ಕೇರಳದ ಶೈಲಿಯ ಸಂಪ್ರದಾಯಿಕ ಬಟ್ಟೆಗಳಲ್ಲಿ ಉದ್ದವಾದ ಬಿಳಿ ಸ್ಕರ್ಟ್ ಅತ್ಯಂತ ಜನಪ್ರಿಯವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: