World Environment Health Day: ವಿಶ್ವ ಪರಿಸರ ಆರೋಗ್ಯ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 25, 2023 | 6:05 PM

ನಗರೀಕರಣ, ಕೈಗಾರಿಕರಣದಂತಹ ಕ್ಷಿಪ್ರ ಗತಿಯಲ್ಲಿ ಸಾಗುತ್ತಿರವ ಪ್ರಗತಿಯಿಂದಾಗಿ ಉಂಟಾಗುತ್ತಿರುವ ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯದಂತಹ ಮಾಲಿನ್ಯಗಳು ಪರಿಸರಕ್ಕೆ ವಿವಿಧ ರೀತಿಯಲ್ಲಿ ಹಾನಿಯುಂಟುಮಾಡುತ್ತಿದೆ. ಕಲುಷಿತ ಗಾಳಿ ಹಾಗೂ ನೀರಿನ ಸೇವನೆಯಿಂದಾಗಿ ಮನುಷ್ಯರಾದ ನಾವು ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಪರಿಸರ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಭೂಮಿಯ ಮೇಲಿನ ಎಲ್ಲಾ ಜೀವಿಗಳು ಆರೋಗ್ಯಕ ಜೀವನ ನಡೆಸಬೇಕೆನ್ನುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್ 26 ರಂದು ವಿಶ್ವ ಪರಿಸರ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.

World Environment Health Day: ವಿಶ್ವ ಪರಿಸರ ಆರೋಗ್ಯ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on
ನಮ್ಮ ಸುತ್ತಮುತ್ತಲಿನ ಸ್ವಚ್ಛ ಪರಿಸರ, ನಾವು ವಾಸಿಸುವ ಸ್ಥಳ, ನಾವು ತಿನ್ನುವ ಆರೋಗ್ಯಕರ  ಆಹಾರ, ನಾವು ಉಸಿರಾಡುವ ಸ್ವಚ್ಛ ಗಾಳಿ ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಆದರೆ ಜಲಮಾಲಿನ್ಯ, ವಾಯುಮಾಲಿನ್ಯದಂತಹ ಪರಿಸರ ಮಾಲಿನ್ಯವು ನೇರವಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಮೇಲಾಗುತ್ತಿರುವ ನಿರಂತರ ದೌರ್ಜನ್ಯದಿಂದಾಗಿ, ಇಂದು ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಮಾಲಿನ್ಯದ ಕಾರಣದಿಂದಾಗಿ ಜನರಿಗೆ  ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಭಾದಿಸುತ್ತಿವೆ.  ಉಸಿರಾಟದ ತೊಂದರೆ,  ಚರ್ಮ ಸಂಬಂಧಿ ಕಾಯಿಲೆಗಳು ಸೇರಿದಂತೆ ಜನರನ್ನು ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಇದರ ಹೊರತಾಗಿ ಹಸಿರು ಮನೆ ಪರಿಣಾಮ, ಹವಮಾನ ಬದಲಾವಣೆ, ನಗರೀಕರಣ ಇತ್ಯಾದಿಗಳು ನಮ್ಮ ಆಹಾರ, ನೀರು ಮತ್ತು ಗಾಳಿಯ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಜನರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಾಲಿನ್ಯವನ್ನು ತಡೆಗಟ್ಟಿ ಪರಿಸರ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಭೂಮಿಯ ಮೇಲಿನ ಎಲ್ಲಾ ಜೀವಿಗಳು   ಆರೋಗ್ಯಕ ಜೀವನ ನಡೆಸಬೇಕೆನ್ನುವ ಉದ್ದೇಶದಿಂದ ಪರಿಸರ ಸುಧಾರಣೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್   26 ರಂದು ವಿಶ್ವ ಪರಿಸರ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಪರಿಸರ ಆರೋಗ್ಯ ದಿನದ ಇತಿಹಾಸ:

ವಿಶ್ವ ಪರಿಸರ ಆರೋಗ್ಯ ದಿನವನ್ನು 2011ರಲ್ಲಿ  ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಎನ್ವಿರಾನ್ಮೆಂಟಲ್  ಹೆಲ್ತ್  (IFEH) ಕೌನ್ಸಿಲ್  ಪ್ರಾರಂಭಿಸಿತು.  ಈ ಒಕ್ಕೂಟವು ಪರಿಸರ ಆರೋಗ್ಯ ಸಂಬಂಧಿಸಿದ ವಿಷಯಗಳ ಮೇಲೆ ಕೆಲಸ ಮಾಡುವ  ಒಂದು ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, ಪರಿಸರದ ಆರೋಗ್ಯವನ್ನು ರಕ್ಷಿಸಲು ಪ್ರಪಂಚದ ಎಲ್ಲಾ ಜನರು ತೆಗೆದುಕೊಳ್ಳಬೇಕಾದ ಕ್ರಮಗಳು  ಮತ್ತು ಅನುಷ್ಠಾನಕ್ಕೆ ಇದು  ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ.  ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕೆನ್ನುವುದು  ವಿಶ್ವ ಪರಿಸರ ಆರೋಗ್ಯ ದಿನವನ್ನು ಆಚರಿಸುವ ಹಿಂದಿನ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ:  ನದಿಗಳ ದಿನವನ್ನು ಏಕೆ ಆಚರಿಸಲಾಗುತ್ತದೆ? ಅದರ ಇತಿಹಾಸ ಇಲ್ಲಿದೆ 

ವಿಶ್ವ ಪರಿಸರ ಆರೋಗ್ಯ ದಿನದ ಮಹತ್ವ:

ಮಾನವರ ಆರೋಗ್ಯವು ಪರಿಸರ ಆರೋಗ್ಯದ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಆದ್ದರಿಂದ ಜಾಗತಿಕ ತಾಪಮಾನ, ಹವಮಾನ ಬದಲಾವಣೆ, ತ್ವರಿತ ನಗರೀಕರಣ ಮುಂತಾದ ಗಂಭೀರ ಸಮಸ್ಯೆಗಳನ್ನು ಜಗತ್ತು ಎದುರಿಸುತ್ತಿರುವ ಸಮಯಯದಲ್ಲಿ ಪರಿಸರದ ಶುಚಿತ್ವನ್ನು  ಮತ್ತು ಪರಿಸರದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನಗಳ ಬಗ್ಗೆ ಸಾರ್ವಜನಿಕ ಶಿಕ್ಷಣವನ್ನು ನೀಡುವುದು  ಅತ್ಯಗತ್ಯವಾಗಿದೆ.  ಈ ನಿಟ್ಟಿನಲ್ಲಿ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಪರಿಸರ ಮಾಲಿನ್ಯಗಳನ್ನು  ತಡೆಯಲು ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಪರಿಸರ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಸಂಸ್ಥೆಯ ಅಂಕಿಅಂಶಗಳು ಪ್ರತಿ ವರ್ಷ ಜಾಗತಿಕ ರೋಗಗಳ ಕಾಲು ಭಾಗವು ನೇರವಾಗಿ ಪರಿಸರ  ಮಾಲಿನ್ಯದ ಕಾರಣದಿಂದ ಉಂಟಾಗುತ್ತದೆ ಎಂದು ಹೇಳುತ್ತದೆ. ಹಾಗಾಗಿ ಪರಿಸರದ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಜಗತ್ತಿನ ಎಲ್ಲರೂ ಆರೋಗ್ಯಕರ ಮತ್ತು ಸುಸ್ಥಿರ ಜೀವನವನ್ನು ನಡೆಸುವಂತೆ ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದವರೆಗೆ ಅನೇಕ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಜಾಗೃತಿ ಕಾರ್ಯಗಳನ್ನು ಆಯೋಜಿಸುತ್ತವೆ. ಮತ್ತು ಜನರಿಗೆ ಪರಿಸರ ರಕ್ಷಣೆ ಮತ್ತು ಸ್ವಚ್ಛತೆಯ ಬಗ್ಗೆ ಶಿಕ್ಷಣವನ್ನು ನೀಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ