ಲವ್ ಮ್ಯಾರೇಜ್ ಆಗಲಿ, ಅರೇಂಜ್ಡ್ ಮ್ಯಾರೇಜ್ ಆಗಲಿ ಈಗಿನ ಕಾಲದಲ್ಲಿ ದಾಂಪತ್ಯ ಜೀವನವು ಹೆಚ್ಚು ದಿನ ಉಳಿಯುವುದೇ ಇಲ್ಲ. ಸಂಬಂಧಕ್ಕೆ ಪ್ರೀತಿ ಹಾಗೂ ನಂಬಿಕೆಯೇ ಜೀವಾಳವಾಗಿದ್ದರೂ, ವಿಭಿನ್ನ ವ್ಯಕ್ತಿತ್ವದ ಇಬ್ಬರೂ ವ್ಯಕ್ತಿಗಳು ಜೊತೆಯಾಗಿ ಬದುಕು ಕಷ್ಟದ ಕೆಲಸ. ಆದರೆ ಕೆಲವೊಮ್ಮೆ ಸಂಬಂಧವು ಚೆನ್ನಾಗಿರಬೇಕಾದರೆ ಸುಳ್ಳು ಹೇಳುವುದು ಅನಿವಾರ್ಯವಾಗುತ್ತದೆ. ನೀವು ನಿಮ್ಮ ತಪ್ಪನ್ನು ಮರೆಮಾಚಲು ಸುಳ್ಳು ಹೇಳುವುದು ಒಳ್ಳೆಯದಲ್ಲ. ಆದರೆ ನಿಮ್ಮ ಸಂಗಾತಿಯನ್ನು ಖುಷಿ ಪಡಿಸಲು, ಹಾಗೂ ನೀವು ಹೇಳುವ ಒಂದೇ ಒಂದು ಸುಳ್ಳು ಸಂಬಂಧವನ್ನು ದೀರ್ಘಕಾಲದವರೆಗೆ ಉಳಿಸುತ್ತದೆ ಎನ್ನುವುದಾದರೆ ಅದರಲ್ಲಿ ಏನು ತಪ್ಪಿಲ್ಲವಂತೆ.
* ನಿಮ್ಮ ಪತಿ ಅಥವಾ ಪತ್ನಿಯಾಗಲಿ ನಿಮಗೆ ಉಡುಗೊರೆ ನೀಡಿದರೆ, ಅದನ್ನು ಪ್ರಶಂಸಿಸುವುದನ್ನು ಕಲಿಯಿರಿ. ಒಂದು ವೇಳೆ ನಿಮ್ಮ ಸಂಗಾತಿಯೂ ನಿಮಗೆ ನೀಡಿದ ಉಡುಗೊರೆ ಸಂಪೂರ್ಣವಾಗಿ ಇಷ್ಟವಾಗದಿದ್ದರೂ ನೀವು ಖುಷಿಯಾಗಿಯೇ ಮೆಚ್ಚಿಕೊಳ್ಳಿ ಹಾಗೂ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ..ಈ ಮೂಲಕ ನಿಮ್ಮ ಜೊತೆಗಾರರ ಭಾವನೆಗಳನ್ನು ಗೌರವಿಸಿ. ಇದು ದಾಂಪತ್ಯ ಜೀವನವನ್ನು ದೀರ್ಘಕಾಲದವರೆಗೆ ಉಳಿಯುವಂತೆ ಮಾಡುತ್ತದೆ.
* ಕೆಲವೊಮ್ಮೆ ಪತ್ನಿಯೂ ಉದ್ಯೋಗದಲ್ಲಿದ್ದರೆ ನಿಮ್ಮ ಪ್ರಶಂಸೆಯೂ ಆಕೆಗೆ ಅತೀ ಮುಖ್ಯವಾಗುತ್ತದೆ. ಮನೆ ಹಾಗೂ ಉದ್ಯೋಗ ಎರಡನ್ನು ನಿಭಾಯಿಸಿಕೊಂಡು ಹೋಗುವ ಪತ್ನಿಯು ನಿಮಗಿಷ್ಟವಾದ ಅಡುಗೆಯನ್ನು ಮಾಡಿ ಬಡಿಸಬಹುದು. ಈ ಸಮಯದಲ್ಲಿ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಆದರೆ ಅಡುಗೆಯನ್ನು ಮೆಚ್ಚಿಕೊಂಡು ನೀವು ಆಕೆಯ ಶ್ರಮವನ್ನು ಪ್ರಶಂಸಿದರೆ ಸಂಬಂಧವು ಮತ್ತಷ್ಟು ಗಟ್ಟಿಯಾಗುತ್ತದೆ. ಅಡುಗೆ ಒಳ್ಳೆಯದಿಲ್ಲದಿದ್ದರೂ ರುಚಿಕರವಾಗಿದೆ ಎಂದು ಸುಳ್ಳು ಹೇಳುವುದರೂ ಪರವಾಗಿಲ್ಲ.
ಇದನ್ನೂ ಓದಿ: ನೀವು ಅನಿಷ್ಟರಲ್ಲ, ನಮ್ಮೊಳಗೆ ನೀವು ಒಬ್ಬರು
* ಸಂಗಾತಿಯೂ ಹೊಸ ಉಡುಗೆಯನ್ನು ಧರಿಸಿಕೊಂಡಾಗ ಅವರು ನಿಮ್ಮ ಬಳಿ ಹೇಗೆ ಕಾಣುತ್ತಿದ್ದೇನೆ ಎಂದು ಕೇಳಬಹುದು. ಆಗ ನೀವು ಮುಖಕ್ಕೆ ಹೊಡೆದಂತೆ ಮಾತನಾಡುವ ಮೂಲಕ ಸ್ವಲ್ಪವು ಚೆನ್ನಾಗಿ ಕಾಣುತ್ತಿಲ್ಲ ಈ ಉಡುಗೆ ನಿನಗೆ ಒಪ್ಪುತ್ತಿಲ್ಲ ಎನ್ನುವುದಲ್ಲ. ಈ ಸಮಯದಲ್ಲಿ ನೀವು ಸುಳ್ಳು ಹೇಳಿಯಾದರೂ ಆಕೆಯನ್ನು ಖುಷಿ ಪಡಿಸಿ. ಉಡುಗೆಯೂ ನಿನಗೆ ಒಪ್ಪುತ್ತದೆ ಎಂದು ಹೇಳಿದ ಕೂಡಲೇ ಆಕೆಗೆ ನಿಜಕ್ಕೂ ಸಂತೋಷವಾಗುತ್ತದೆ.
* ತಪ್ಪು ಮಾಡದವರು ಯಾರಿಲ್ಲ ಹೇಳಿ. ಕೆಲವೊಮ್ಮೆ ಗೊತ್ತಿಲ್ಲದೇ ತಪ್ಪು ಆಗಬಹುದು, ಏನೋ ಮಾಡಲು ಹೋಗಿ ಎಡವಟ್ಟುಗಳಾಗಬಹುದು. ಆದರೆ ಸಣ್ಣಪುಟ್ಟ ತಪ್ಪುಗಳಾದಾಗ ಗಂಡನಿಗೆ ಅಥವಾ ಹೆಂಡತಿಗೆ ಹೇಳಲು ಹೋಗಬೇಡಿ. ನೀವು ಆದಷ್ಟು ಈ ವಿಚಾರಗಳನ್ನು ಮರೆಮಾಚಿ, ಇಲ್ಲವಾದರೆ ಸುಳ್ಳಿ ಹೇಳಿ ಬಿಡಿ. ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಾಗುವುದು ತಪ್ಪುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: