International Women’s Day: ಮನೆಯ ಒಡತಿಗೆ ನಿಮ್ಮ ಕೈಯಾರೆ ಚಾಕೊಲೇಟ್ ಫಿರ್ನಿ ಮಾಡಿ, ಇಲ್ಲಿದೆ ಮಾಡುವ ವಿಧಾನ

ಪ್ರತಿ ವರ್ಷ ಮಾರ್ಚ್ 8 ಅನ್ನು ಪ್ರಪಂಚದಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನವಾಗಿ ಆಚರಿಸಲಾಗುತ್ತದೆ. ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸುವ ದಿನವಾಗಿದೆ. ಈ ದಿನವು ಮಹಿಳೆಯರಿಗಾಗಿಯೇ ಮೀಸಲಾಗಿರುವ ದಿನವಾದ ಕಾರಣ ನಿಮ್ಮ ಮನೆಯ ಮಹಿಳೆಯರಿಗೆ ನಿಮ್ಮ ಕೈಯಾರೆ ಸ್ವೀಟ್ ಮಾಡಿ ತಿನಿಸಿದರೆ ಸಹಜವಾಗಿಯೇ ಖುಷಿಯಾಗುತ್ತಾರೆ. ಈ ಕೆಲವೇ ಕೆಲವು ಐಟಂ ಇದ್ದರೆ ಸಾಕು, ಮನೆ ಒಡತಿಗೆ ಚಾಕೊಲೇಟ್ ಫಿರ್ನಿ ಮಾಡಿಕೊಟ್ಟರೆ ದಿಲ್ ಖುಷ್ ಆಗುತ್ತಾಳೆ.

International Womens Day: ಮನೆಯ ಒಡತಿಗೆ ನಿಮ್ಮ ಕೈಯಾರೆ ಚಾಕೊಲೇಟ್ ಫಿರ್ನಿ ಮಾಡಿ, ಇಲ್ಲಿದೆ ಮಾಡುವ ವಿಧಾನ
Edited By:

Updated on: Mar 08, 2024 | 11:48 AM

ಪ್ರತಿಯೊಬ್ಬ ಪುರುಷರ ಜೀವನದಲ್ಲಿಯು ಮಹಿಳೆಯರ ಪಾತ್ರವು ಅಗಾಧವಾಗಿದೆ. ನಿಮ್ಮ ಕಷ್ಟ ಸುಖಗಳಿಗೆ ಜೊತೆಯಾಗುವ ಜೀವನದಲ್ಲಿರುವ ಬರುವ ಎಲ್ಲಾ ಮಹಿಳೆಯರಿಗೆ ಧನ್ಯವಾದವನ್ನು ಹೇಳಲು ಇದು ಉತ್ತಮ ಸಮಯವಾಗಿದೆ. ಈ ದಿನ ನಿಮ್ಮ ಅಮ್ಮ, ಮಡದಿ ಹಾಗೂ ಮುದ್ದಿನ ಮಗಳಿಗೆ ವಿಶ್ವ ಮಹಿಳಾ ದಿನಾಚರಣೆಗೆ ನಿಮ್ಮ ಕೈಯಾರೆ ಸಿಹಿ ತಿಂಡಿ ಮಾಡಿ ಅವರನ್ನು ಖುಷಿ ಪಡಿಸಬಹುದು. ಹೆಚ್ಚಿನ ಮಹಿಳೆಯರು ತಮ್ಮ ಹೆಚ್ಚು ಸಮಯವನ್ನು ಅಡುಗೆ ಮನೆಯಲ್ಲೆ ಕಳೆಯುತ್ತಾರೆ. ಈ ದಿನ ನೀವು ಅಡುಗೆ ಮನೆಗೆ ತೆರಳಿ ಸಿಹಿ ತಿಂಡಿ ಮಾಡಿ ಅವರ ಬಾಯಿ ಸಿಹಿಯಾಗಿಸಬಹುದು.

ಚಾಕೊಲೇಟ್ ಫಿರ್ನಿ ಬೇಕಾಗುವ ಸಾಮಗ್ರಿಗಳು :

* ಬಾಸುಮತಿ ಅಕ್ಕಿ

* ಹಾಲು

* ಕೇಸರಿ

* ಗೋಡಂಬಿ

* ಬಾದಾಮಿ

* ದ್ರಾಕ್ಷಿ

* ತುಪ್ಪ

* ಏಲಕ್ಕಿ ಪುಡಿ

* ಚಾಕೊಲೇಟ್ ಸಿರಪ್

ಇದನ್ನೂ ಓದಿ: ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ತಾಯಿ ಹೆಣ್ಣು, ಈ ಬಾರಿಯ ಮಹಿಳಾ ದಿನಾಚರಣೆಯ ಥೀಮ್ ಏನು ಗೊತ್ತಾ?

ಮಾಡುವ ವಿಧಾನ:

* ಸ್ವಲ್ಪ ಪ್ರಮಾಣದಲ್ಲಿ ಬಾಸುಮತಿ ಅಕ್ಕಿಯನ್ನು ತೊಳೆದು ಒಂದೂವರೆ ಗಂಟೆ ನೆನೆಸಿಡಿ.

* ನೆನಸಿಟ್ಟ ಅಕ್ಕಿಯನ್ನು ನೀರು ಹಾಕದೆ ತರಿ ತರಿಯಾಗಿ ರುಬ್ಬಿಕೊಳ್ಳಿ.

* ದಪ್ಪ ಹಾಲಿಗೆ ಚಿಟಿಕೆಯಷ್ಟು ಕೇಸರಿ ಹಾಕಿ ಸ್ವಲ್ಪ ಸಮಯದವರೆಗೂ ಇರಿ.

* ಬಾಣಲೆಯಲ್ಲಿ ಕೇಸರಿ ಹಾಕಿಟ್ಟ ಅರ್ಧ ಲೀಟರ್ ಗಟ್ಟಿ ಹಾಲು ಕುದಿಯಲು ಇಡಿ, ಇದಕ್ಕೆ ರುಬ್ಬಿದ ಅಕ್ಕಿಯನ್ನು ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ.

* ಅಕ್ಕಿ ಬೆಂದ ಬಳಿಕ ನಾಲ್ಕು ಚಮಚ ಚಾಕೊಲೇಟ್ ಸಿರಪ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ.

* ತಣ್ಣಗಾದ ಬಳಿಕ ಚಿಟಿಕೆಯಷ್ಟು ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿ, ದ್ರಾಕ್ಷಿ ಹಾಕಿ ಬೆರೆಸಿ ತಣ್ಣಗಾದ ಮೇಲೆ ಫ್ರಿಡ್ಜ್ ನಲ್ಲಿಡಿ. ಒಂದು ಗಂಟೆಗಳ ಕಾಲ ಬಿಟ್ಟು ಸವಿದರೆ ರುಚಿ ರುಚಿಯಾದ ಚಾಕೊಲೇಟ್ ಫಿರ್ನಿ ಸವಿಯಲು ಸಿದ್ಧ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:47 am, Fri, 8 March 24