Shivaratri Special Recipe : ಶಿವನ ನೈವೇದ್ಯಕ್ಕೆ ಈ ಸುಲಭ ಸಿಹಿತಿಂಡಿಗಳು ಸಾಕು

ಇಂದು ನಾಡಿನೆಲ್ಲೆಡೆ ಶಿವರಾತ್ರಿ ಹಬ್ಬದ ಸಂಭ್ರಮವು ಮನೆ ಮಾಡಿದೆ. ಈಗಾಗಲೇ ಶಿವ ದೇವಾಲಯಗಳಲ್ಲಿ ಶಿವನಿಗೆ ವಿಶೇಷ ಪೂಜೆ ಹಾಗೂ ಅಭಿಷೇಕಗಳು ಶುರುವಾಗಿದೆ. ಇತ್ತ ಮನೆಯಲ್ಲಿಯು ಶಿವ ಭಕ್ತಾಧಿಗಳು ಜಾಗರಣೆ, ಉಪವಾಸಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಈ ಮಹಾಶಿವರಾತ್ರಿಯ ಹಬ್ಬದಂದು ಮನೆಯಲ್ಲೇ ವಿವಿಧ ರೀತಿಯ ಸಿಹಿ ತಿಂಡಿಗಳನ್ನು ಶಿವನಿಗೆ ನೈವೇದ್ಯ ಇಡುತ್ತಾರೆ. ಮನೆಯಲ್ಲಿ ಈ ಕೆಲವೇ ಕೆಲವು ಸಾಮಗ್ರಿಗಳಿದ್ದರೆ ಸಿಹಿ ಗೆಣಸಿನ ಹೋಳಿಗೆ ಹಾಗೂ ಬಾಳೆಹಣ್ಣಿನ ಬರ್ಫಿ ಮಾಡಿ ಶಿವನಿಗೆ ಅರ್ಪಿಸಬಹುದು.

Shivaratri Special Recipe : ಶಿವನ ನೈವೇದ್ಯಕ್ಕೆ ಈ ಸುಲಭ ಸಿಹಿತಿಂಡಿಗಳು ಸಾಕು
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 08, 2024 | 12:05 PM

ಶಿವರಾತ್ರಿ ಹಬ್ಬವು ಬಂದೆ ಬಿಟ್ಟಿತು, ದೇಶದಾದಂತ್ಯ ಇಂದು ಶಿವರಾತ್ರಿಯ ಸಂಭ್ರಮವು ಜೋರಾಗಿದೆ. ಈ ಮಹಾ ಶಿವರಾತ್ರಿಯ ದಿನದಂದು ಕೆಲವರು ಉಪವಾಸ ಮಾಡಿ ವೃತ ಆಚರಿಸುತ್ತಾರೆ. ಆದರೆ ಉಪವಾಸದ ಸಮಯದಲ್ಲಿ ಕೆಲವರು ಸಿಹಿ ತಿನಿಸುಗಳನ್ನು ದೇವರಿಗೆ ನೈವೇದ್ಯವಾಗಿಟ್ಟು ತಾವು ಕೂಡ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಈ ದಿನದಂದು ಮನೆಯಲ್ಲೇ ಸುಲಭವಾದ ಕೆಲವು ರೆಸಿಪಿಗಳನ್ನು ಮಾಡಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದು.

ಸಿಹಿ ಗೆಣಸಿನ ಹೋಳಿಗೆ ಬೇಕಾಗುವ ಪದಾರ್ಥಗಳು:

* ಗೋಧಿ ಹಿಟ್ಟು

* ಚಿರೋಟಿ ರವೆ

* ಮೈದಾಹಿಟ್ಟು

* ಅರಿಶಿಣ

* ಬೇಯಿಸಿಟ್ಟ ಗೆಣಸು

* ಬೆಲ್ಲ

* ಅಡುಗೆ ಎಣ್ಣೆ

* ತುಪ್ಪ

* ಉಪ್ಪು

ಇದನ್ನೂ ಓದಿ: ಶಿವನನ್ನು ಸುಲಭವಾಗಿ ಮೆಚ್ಚಿಸಲು ಈ ನೈವೇದ್ಯಗಳನ್ನು ಅರ್ಪಿಸಿ

ತಯಾರಿಸುವ ವಿಧಾನ:

* ಮೊದಲಿಗೆ ಗೋಧಿ ಹಿಟ್ಟು, ಚಿರೋಟಿ ರವೆ, ಮೈದಾ, ಚಿಟಿಕೆಯಷ್ಟು ಅರಶಿನ, ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.

* ಕಲಸಿಟ್ಟ ಹಿಟ್ಟಿನ ಮೇಲೆ ಒಂದೆರಡು ಚಮಚ ಅಡುಗೆ ಎಣ್ಣೆ ಹಾಕಿ ಸ್ವಲ್ಪ ಹೊತ್ತು ಹಾಗೆ ಬಿಟ್ಟಿಡಿ.

* ಇನ್ನೊಂದೆಡೆ ಗ್ಯಾಸ್ ಮೇಲೆ ಸಿಹಿ ಗೆಣಸನ್ನು ತೊಳೆದು ಬೇಯಿಸಿಕೊಳ್ಳಿ. ಬೆಂದ ಸಿಹಿ ಗೆಣಸಿನ ಸಿಪ್ಪೆ ತೆಗೆದು ಪುಡಿ ಮಾಡಿ ಬೆಲ್ಲ ಸೇರಿಸಿ ಹೂರಣವನ್ನು ಸಿದ್ಧಮಾಡಿಟ್ಟುಕೊಳ್ಳಿ.

* ಕಲಸಿಟ್ಟ ಹಿಟ್ಟನ್ನು ಉಂಡೆಯಾಕಾರ ಮಾಡಿಕೊಂಡು, ಅದಕ್ಕೆ ಹೂರಣವನ್ನು ತುಂಬಿ ಅದನ್ನು ಕೈಯಲ್ಲೇ ತಟ್ಟಿಕೊಂಡು, ಆ ಬಳಿಕ ದುಂಡಗೆ ಲಟ್ಟಿಸಿಕೊಳ್ಳಿ.

* ಲಟ್ಟಿಸಿದ ಹೋಳಿಗೆಯನ್ನು ಕಾವಲಿನ ಮೇಲೆ ಹಾಕಿ ಕಂದು ಬಣ್ಣ ಬರುವವರೆಗೆ ಕಾಯಿಸಿಕೊಂಡರೆ ಸಿಹಿ ಸಿಹಿಯಾದ ಗೆಣಸಿನ ಹೋಳಿಗೆಯೂ ಸವಿಯಲು ಸಿದ್ಧವಾಗಿರುತ್ತದೆ.

ಬಾಳೆ ಹಣ್ಣಿನ ಬರ್ಫಿಗೆ ಬೇಕಾಗುವ ಸಾಮಗ್ರಿಗಳು:

* ಬಾಳೆಹಣ್ಣು

* ಹಾಲು

* ಸಕ್ಕರೆ

* ತುಪ್ಪ

* ತುರಿದ ತೆಂಗಿನ ಕಾಯಿ

* ಅಕ್ರೋಡ

 ಬಾಳೆ ಹಣ್ಣಿನ ಬರ್ಫಿ ಮಾಡುವ ವಿಧಾನ :

* ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿಕೊಂಡು, ಹಾಲಿನಲ್ಲಿ ಬೆರೆಸಿ ಗಟ್ಟಿಯಾಗುವವರೆಗೆ ಕುದಿಸಿಕೊಳ್ಳಿ.

* ಇದಕ್ಕೆ ತುಪ್ಪ ಹಾಕಿ ಕಂದು ಬಣ್ಣ ಬರುವವರೆಗೂ ಕೈಯಾಡಿಸುತ್ತಾ ಇರಿ.

* ಆ ಬಳಿಕ ಸಕ್ಕರೆ, ತೆಂಗಿನ ಕಾಯಿಯ ತುರಿ ಹಾಗೂ ಅಕ್ರೋಡ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

* ಒಂದು ಬಟ್ಟಲಿಗೆ ತುಪ್ಪ ಸವರಿ ಈ ಮಿಶ್ರಣವನ್ನು ಹಾಕಿ ತಣ್ಣಗಾಗಲು ಬಿಡಿ. ಬೇಕಾದ ಆಕಾರದಲ್ಲಿ ಕತ್ತರಿಸಿದರೆ ರುಚಿ ರುಚಿಯಾದ ಬಾಳೆಹಣ್ಣಿನ ಬರ್ಫಿ ಸವಿಯಲು ಸಿದ್ಧ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್