AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Women’s Day 2024: ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ತಾಯಿ ಹೆಣ್ಣು, ಈ ಬಾರಿಯ ಮಹಿಳಾ ದಿನಾಚರಣೆಯ ಥೀಮ್ ಏನು ಗೊತ್ತಾ?

ಶಿಕ್ಷಣ, ಉದ್ಯೋಗ, ಸಾಂಸ್ಕೃತಿಕ, ಸಿನಿಮಾ ಕ್ಷೇತ್ರ, ರಾಜಕೀಯ ಇನ್ನಿತರ ಅನೇಕ ವಿಷಯಗಳಲ್ಲಿ ಅವಕಾಶವನ್ನು ಪಡೆದುಕೊಂಡಳು. ಹೆಣ್ಣಿಗೆ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಹೆಣ್ಣು ಕಲಿತರೆ ಶಾಲೆಯೊಂದು ತೆರೆದಂತೆ ಅನ್ನುವ ಸ್ಲೋಗನ್ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. ಹೆಣ್ಣು ಭ್ರೂಣ ಹತ್ಯೆಯನ್ನು ಕಡಿತಗೊಳಿಸುವ ಕಾರಣದಿಂದ ಹೆಣ್ಣು ಮಕ್ಕಳಿಗೋಸ್ಕರ ಭಾಗ್ಯ ಜ್ಯೋತಿಯಂತಹ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಯಿತು.

International Women’s Day 2024: ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ತಾಯಿ ಹೆಣ್ಣು, ಈ ಬಾರಿಯ ಮಹಿಳಾ ದಿನಾಚರಣೆಯ ಥೀಮ್ ಏನು ಗೊತ್ತಾ?
TV9 Web
| Edited By: |

Updated on: Mar 08, 2024 | 10:17 AM

Share

ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ ಎಂದು ಶಿವರುದ್ರಪ್ಪನವರು ಹೆಣ್ಣಿನ ಸ್ಥಾನಮಾನವನ್ನು ಸರಳತೆಯಲ್ಲಿ ಹಾಡಿ ಹೊಗಳಿದ್ದಾರೆ. ಸ್ತ್ರೀ ಎನ್ನುವವಳು ಶಕ್ತಿ, ಹೆಣ್ಣು ಸಂಸಾರದ ಕಣ್ಣು ಎಂಬಂತೆ ಸ್ತ್ರೀ ಮಗಳಾಗಿ, ತಂಗಿಯಾಗಿ, ಮಡದಿಯಾಗಿ, ತಾಯಿಯಾಗಿ ಹೀಗೆ ತನ್ನ ಜೀವನದುದ್ದಕ್ಕು ಇತರರಿಗೆ ಮಿಡಿಯುವ ಹೃದಯ, ತ್ಯಾಗಮಯಿ ಅಂದ್ರೆ ಹೆಣ್ಣು. ಅಂತಹ ಹೆಣ್ಣಿಗೆ ಮೊದಲು ದೌರ್ಜನ್ಯ ತೀರವಾಗಿತ್ತು. ಆಕೆ ಶಿಕ್ಷಣ, ಉದ್ಯೋಗ ಇನ್ನಿತರ ಯಾವುದೇ ವಿಷಯದಲ್ಲಿ ಅವಕಾಶ ಪಡಿಯದೆ ಮನೆಯಲ್ಲಿದ್ದು ಗಂಡ, ಮಕ್ಕಳು, ಅತ್ತೆ, ಮಾವ, ತಂದೆ, ತಾಯಿಯರ ಸೇವೆಯನ್ನು ಮಾಡುವುದಲ್ಲದೆ, ಮನೆಯನ್ನು ತೂಗಿಸಿಕೊಂಡು ಹೋಗುವ ಸಂಸಾರವಂತೆಯಾಗಿದ್ದಳು. ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ಮನೆಯವರ ನೋವು, ನಲಿವಿಗೆ ಸ್ಪಂದಿಸಿದರು, ಆಕೆಯ ಮನಸಿನ ಭಾವನೆಯನ್ನು ಅರ್ಥ ಮಾಡಿಕೊಳ್ಳುವವರು ಯಾರು ಇಲ್ಲಾ. ಹೊರ ಪ್ರಪಂಚದ ಅರಿವು ಇಲ್ಲದ ಹೆಣ್ಣು, ಜೀತದಾಳು ಪದ್ಧತಿಯಂತಹ ಅದೆಷ್ಟೋ ಇಂತಹ ಕಟುರ ನೋವಿಗೆ ಸಿಲುಕಿದ್ದಲು. ಅಷ್ಟೇ ಅಲ್ಲದೆ ಹೆಣ್ಣು ಅಂದ್ರೆ ಅಸಡ್ಡೆ ಭಾವನೆ. ತನ್ನ ಸೇವೆ ಮಾಡಲು ಮಡದಿಯಾಗಿ ಹೆಣ್ಣು ಬೇಕು, ಆದ್ರೆ ಮಗಳಾಗಿ ಮಾತ್ರ ಬೇಡ. ಹೆಣ್ಣು ಗರ್ಭಿಣಿಯಾಗಿ ಮೂರು ತಿಂಗಳ ನಂತರ ಲಿಂಗ ಪತ್ತೆ ಮಾಡಿ, ಹೆಣ್ಣು ಮಗು ಅಂತ ತಿಳಿದ ತಕ್ಷಣ ಹೆಣ್ಣು ಬ್ರೂಣಹತ್ಯೆ ಮಾಡುತ್ತಿದ್ದರು. ಇವೆಲ್ಲದಕ್ಕೆ ಕಡಿವಾಣ ಹಾಕಬೇಕು, ಹೆಣ್ಣಿಗೆ ಗಂಡಿನಷ್ಟೇ ಸಮಾನ ಹಕ್ಕು ಸಿಗಬೇಕು ಅಂತ ಸಾವಿತ್ರಿ ಭಾಯಿ ಪುಲೆಯಂತಹ ಸಾಕಷ್ಟು ವೀರ ಮಹಿಳೆ ಹೋರಾಟ ಮಾಡಿ ಸಮಾಜದಲ್ಲಿ ಹೆಣ್ಣಿಗೆ ಸ್ಥಾನಮಾನ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು. ಅಂದಿನಿಂದ ಇಂದಿನವರೆಗೂ ಹೆಣ್ಣು ಸ್ವಾತಂತ್ರ್ಯವನ್ನು ಪಡೆದಿದ್ದಾಳೆ. ಎಲ್ಲಾ ಹಕ್ಕನ್ನು ಪಡೆಯುವವಳಾಗಿದ್ದಾಳೆ.

ನಂತರದ ದಿನಗಳಲ್ಲಿ ಶಿಕ್ಷಣ, ಉದ್ಯೋಗ, ಸಾಂಸ್ಕೃತಿಕ, ಸಿನಿಮಾ ಕ್ಷೇತ್ರ, ರಾಜಕೀಯ ಇನ್ನಿತರ ಅನೇಕ ವಿಷಯಗಳಲ್ಲಿ ಅವಕಾಶವನ್ನು ಪಡೆದುಕೊಂಡಳು. ಹೆಣ್ಣಿಗೆ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಹೆಣ್ಣು ಕಲಿತರೆ ಶಾಲೆಯೊಂದು ತೆರೆದಂತೆ ಅನ್ನುವ ಸ್ಲೋಗನ್ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. ಹೆಣ್ಣು ಭ್ರೂಣ ಹತ್ಯೆಯನ್ನು ಕಡಿತಗೊಳಿಸುವ ಕಾರಣದಿಂದ ಹೆಣ್ಣು ಮಕ್ಕಳಿಗೋಸ್ಕರ ಭಾಗ್ಯ ಜ್ಯೋತಿಯಂತಹ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಹೆಣ್ಣು ಭ್ರೂಣ ಹತ್ಯೆಯನ್ನು ಪತ್ತೆ ಹಚ್ಚಿದವರಿಗೂ ಹಾಗೂ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಸಹಕಾರ ಮಾಡಿದವರಿಗೆ ಸರ್ಕಾರದಿಂದ ಶಿಕ್ಷೆಗೆ ಒಳಗಾಗುತ್ತಾರೆ. ಈ ಕಾರಣದಿಂದ ಲಿಂಗ ಪತ್ತೆಯು ತೀರಾ ಕಡಿಮೆಗೊಂಡಿದೆ. ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳು ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದರು.ಆದರೆ ಇಂದಿನ ಕಾಲದಲ್ಲಿ ಮಹಿಳೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸಿದರೆ ಧ್ವನಿ ಎತ್ತಿ ಮಾತನಾಡುವ ಧೈರ್ಯವನ್ನು ತುಂಬಿಕೊಂಡಿದ್ದಾಳೆ. ಹೆಣ್ಣು ಒಂದು ಬಾರಿ ಜವಬ್ದಾರಿಯನ್ನು ಹೊತ್ತರೆ ತನ್ನನ್ನು ತಾನೇ ಮರೆಯುವಳು, ಗಂಡ, ಮಕ್ಕಳು, ಅತ್ತೆ- ಮಾವ, ತಂದೆ – ತಾಯಿಯ ಆಗು ಹೋಗುಗಳನ್ನು ನೋಡಿಕೊಂಡು, ಮನೆಯ ಕೆಲಸವನ್ನು ಮಾಡಿ, ಮನೆಯ ಹೊರಗಡೆ ದುಡಿದು ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವವಳು. ಈಕೆಗೆ ಒಂದು ಮನೆಯನ್ನು ಆನಂದ ಸಾಗರವನ್ನಾಗಿಸುವ ಶಕ್ತಿ ಇದೆ ಎಂದರೆ ಅದು ಹೆಣ್ಣಿಗೆ ಮಾತ್ರ. ಆದ್ರಿಂದ ಹೆಣ್ಣನ್ನು ತ್ಯಾಗಮಯಿ, ದೈವಿರೂಪಿ ಎನ್ನುತ್ತಾರೆ. ಒಟ್ಟಾರೆ ಹೇಳುವುದಾದರೆ ಹೆಣ್ಣಿಗೆ ಸಿಗಬೇಕಾದ ಸ್ಥಾನಮಾನ ದೊರಕಿದೆ. ಮಹಿಳೆಯರ ಹಕ್ಕುಗಳನ್ನು ಚಲಾಯಿಸುವ ಸಲುವಾಗಿ 20 ನೇ ಶತಮಾನದಲ್ಲಿ ವಿಶ್ವ ಸಂಸ್ಥೆಯು ಆರಂಭಿಸುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರು ಕಠಿಣ ಕೆಲಸದ ವಿರುದ್ಧ ಪ್ರತಿಭಟಿಸುತ್ತಾರೆ. ಅಲ್ಲಿಂದ ಪ್ರತಿವರ್ಷ ಮಹಿಳಾ ದಿನಾಚರಣೆಯನ್ನು ಥೀಮ್ ಹಾಗೂ ಘೋಷ ವಾಕ್ಯದೊಂದಿಗೆ ಆಚರಿಸುತ್ತಾರೆ. ಅಷ್ಟೇ ಅಲ್ಲದೇ ಶಿಕ್ಷಣ, ಉದ್ಯೋಗ, ಸಾಂಸ್ಕೃತಿಕ, ಸಿನಿಮಾ ಕ್ಷೇತ್ರ, ರಾಜಕೀಯ ಅನೇಕ ಕ್ಷೇತ್ರದ ಸಾಧಕಿಯರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ.

ಇದನ್ನೂ ಓದಿ: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ; ಇದರ ಇತಿಹಾಸ, ಮಹತ್ವವೇನು?

ಈ ವರ್ಷದ ಥೀಮ್ ಪ್ರಗತಿಯ ವೇಗವರ್ಧನೆಗೆ ಮಹಿಳೆಯ ಹೂಡಿಕೆ. ಈ ಥೀಮ್ ನ ಉದ್ದೇಶ ಮಹಿಳೆಯರಿಗೆ ಉಪಯೋಗವಾಗುವಂತಹ ಆರೋಗ್ಯ, ಶಿಕ್ಷಣ, ಉದ್ಯೋಗ ಅನೇಕ ಯೋಜನೆಗಳನ್ನು ರೂಪಿಸಿ ಹಣ ಹೂಡಿಕೆ ಮಾಡುವುದಾಗಿದೆ. ಇದರಿಂದ ಮಹಿಳೆಯರಿಗೆ ಮುಂದಿನ ದಿನಗಳಲ್ಲಿ ಸಾಕಷ್ಟು ಉಪಯೋಗವಾಗಬಹು, ಜೊತೆಗೆ ಮಹಿಳೆಯ ಬೆಳವಣಿಗೆ ಅಭಿವೃದ್ಧಿಯಾಗುವುದಲ್ಲದೆ, ದೇಶದ ಪ್ರಗತಿ ಕೂಡ ಹೆಚ್ಚು ಅಭಿವೃದ್ಧಿಯನ್ನು ಕಾಣಬಹುದು ಎಂಬುವುದು ಇದರ ಅರ್ಥವಾಗಿದೆ. ಅಂತೆಯೇ 2024 ಮಹಿಳಾ ದಿನಾಚರಣೆಯ ಘೋಷಣೆ ‘Inspire Inclusion ‘ ಎಂಬುದು ಘೋಷ ವಾಕ್ಯವಾಗಿದೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಬಹಳ ಅರ್ಥ ಪೂರ್ಣವಾದ ಆಚರಣೆ ಎನ್ನಬಹುದು. ಭಾರತದಾದ್ಯಂತ ಹಬ್ಬಗಳು ಯಾವ ರೀತಿ ಆಚರಣೆಯಾಗತ್ತೋ ಅದೇ ರೀತಿ ಮಹಿಳಾ ದಿನಾಚರಣೆಯು ಆಚರಣೆಯಾಗಬೇಕು. ಇದರಿಂದ ಹೆಣ್ಣುಮಕ್ಕಳ ಮೌಲ್ಯ, ಹೆಣ್ಣುಮಕ್ಕಳಿಗೆ ನೀಡುವ ಸ್ಥಾನಮಾನ, ಗೌರವ ಮತ್ತಷ್ಟು ಹೆಚ್ಚಬೇಕು.

ಧರ್ಮಶ್ರೀ ಧರ್ಮಸ್ಥಳ

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ