Kannada News Lifestyle Womens Fashion Tips : Office wear ideas for women to look stylish and comfortable Kannada News
Womens Fashion Tips : ಮಹಿಳೆಯರೇ, ಆಫೀಸಿನಲ್ಲಿ ನೀವು ಸ್ಟೈಲಿಶ್ ಆಗಿ ಕಾಣಬೇಕಾ? ಈ ರೀತಿ ಡ್ರೆಸ್ ಮಾಡಿಕೊಳ್ಳಿ
ಫ್ಯಾಷನ್ ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಹೆಣ್ಣು ಮಕ್ಕಳು. ಆದರೆ ಕೆಲವೊಮ್ಮೆ ಫ್ಯಾಷನ್ ಜೊತೆಗೆ ಆರಾಮದಾಯಕ ಮತ್ತು ಸೊಗಸಾದ ಬಟ್ಟೆಗಳನ್ನು ಧರಿಸುವುದು ತಿಳಿದಿರಬೇಕು. ಆಫೀಸಿಗೆ ಹೋಗುವ ಮಹಿಳೆಯರು ಯಾವ ರೀತಿಯ ಉಡುಗೆಯನ್ನು ಧರಿಸಬೇಕೆನ್ನುವ ಸ್ವಲ್ಪ ಮಟ್ಟಿಗಿನ ಜ್ಞಾನವನ್ನು ಹೊಂದಿರಬೇಕು. ಈ ಉಡುಗೆ ತೊಡುಗೆಗಳು ಕೆಲಸ ಮಾಡುವ ಸ್ಥಳ ಗಳಲ್ಲಿ ನಿಮ್ಮ ಘನತೆ ಹಾಗೂ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಹೀಗಾಗಿ ಮಹಿಳೆಯರಿಗೆ ಕೆಲವು ಸಲಹೆಗಳು ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಉದ್ಯೋಗಕ್ಕೆ ತೆರಳುವ ಹೆಣ್ಣು ಮಕ್ಕಳು ಗಡಿಬಿಡಿಯಲ್ಲಿ ಬಟ್ಟೆ ಬಗ್ಗೆ ಗಮನ ಕೊಡದೆ ಯಾವುದಾದರೊಂದು ಉಡುಗೆಯನ್ನು ಧರಿಸಿಕೊಂಡು ಹೋಗುತ್ತಾರೆ. ಆದರೆ ಸ್ಟೈಲಿಶ್ ಆಗಿ ಕಾಣುವುದರೊಂದಿಗೆ ಆಫೀಸಿನಲ್ಲಿ ಪ್ರತಿದಿನ ನಿಮ್ಮನ್ನು ಪ್ರೆಸೆಂಟಬಲ್ ಆಗಿಟ್ಟುಕೊಳ್ಳುವುದು ಮುಖ್ಯ. ಹೀಗಾಗಿ ನೀವು ಧರಿಸುವ ಉಡುಗೆಯು ಆರಾಮದಾಯಕವಲ್ಲದಿದ್ದರೆ, ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ಕಚೇರಿಗೆ ಹೋಗುವ ಮಹಿಳೆಯರು ಆರಾಮದಾಯಕ ಉಡುಗೆಯನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ.
ಆರಾಮದಾಯಕ ಬಟ್ಟೆಗಳ ಆಯ್ಕೆಯಿರಲಿ : ಉದ್ಯೋಗದ ಸ್ಥಳಗಳಲ್ಲಿ ನೀವು ಆತ್ಮವಿಶ್ವಾಸದಲ್ಲಿದ್ದರೆ ಇತರರನ್ನು ಸೆಳೆಯಲು ಸಾಧ್ಯ. ಜೀನ್ಸ್-ಶರ್ಟ್, ಸೂಟ್ ಅಥವಾ ಸೀರೆಯನ್ನೇ ಆಯ್ಕೆ ಮಾಡಿಕೊಳ್ಳುವಾಗ ನಿಮಗೆ ಆರಾಮದಾಯಕವಾಗಿದೆಯೇ ಎಂದು ಯೋಚಿಸಿ. ಬಟ್ಟೆಗಳ ಬಣ್ಣಗಳ ಬಗ್ಗೆಯು ಹೆಚ್ಚು ಗಮನ ಕೊಡಿ. ಉಡುಗೆಗಳು ಆರಾಮದಾಯಕ ಹಾಗೂ ಫಿಟ್ ಆಗಿದ್ದರೆ ನೀವು ಕೆಲಸವನ್ನು ಅಷ್ಟೇ ಆತ್ಮವಿಶ್ವಾಸದೊಂದಿಗೆ ಮಾಡಲು ಸಾಧ್ಯ.
ಸೈಜ್ ಮತ್ತು ಕಂಫರ್ಟ್ ಗೆ ಗಮನ ಕೊಡಿ : ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಸೈಜ್ ಸರಿಯಿದೆಯೇ, ಕಂಫರ್ಟ್ ಅಗಿದೆಯೇ ಎನ್ನುವುದರ ಕಡೆಗೆ ಗಮನಹರಿಸಬೇಕು. ಸಡಿಲವಾದ ಉಡುಗೆಗಳು ಹಾಗೂ ಬಿಗಿಯಾದ ಉಡುಗೆಗಳು ನಿಮ್ಮನ್ನು ಆರಾಮದಾಯಕವಾಗಿರಿಸುವುದಿಲ್ಲ. ಹೀಗಾಗಿ ಸೈಜ್ ಬಗ್ಗೆ ಹೆಚ್ಚು ಗಮನ ಕೊಡಿ. ಅದಲ್ಲದೆ, ಮಾರುಕಟ್ಟೆಗೆ ಯಾವುದಾದರೂ ಟ್ರೆಂಡ್ ಬಂದರೆ ಅದನ್ನು ಅನುಸರಿಸುವುದು ಸರಿಯಲ್ಲ. ಇದು ಎಲ್ಲರಿಗೂ ಕೂಡ ಇದು ಸರಿಹೊಂದದೇ ಇರಬಹುದು.
ಕ್ಯಾಶುಯಲ್ ವೇರ್ ತಪ್ಪಿಸಿ: ನೀವು ಧರಿಸುವ ಉಡುಗೆಗಳು ನಿಮ್ಮ ಘನತೆ ಹಾಗೂ ಆತ್ಮವಿಶ್ವಾಸವನ್ನು ಪ್ರತಿನಿಧಿಸುತ್ತದೆ. ಅದಲ್ಲದೇ, ವೃತ್ತಿಪರ ನೋಟವು ನಿಮ್ಮ ಪ್ರಶಾಂತತೆಯನ್ನು ತೋರಿಸುತ್ತದೆ. ವಾರದಲ್ಲಿ ಐದು ದಿನ ಕ್ಯಾಶುಯಲ್ ವೇರ್ ನಲ್ಲಿ ಆಫೀಸ್ ಗೆ ಹೋಗುವುದು ಸರಿಯಲ್ಲ. ಆಫೀಸ್ ವೇರ್ ಉಡುಗೆಗಳು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎನ್ನುವುದನ್ನು ಮರೆಯದಿರಿ.
ಪಾದರಕ್ಷೆಗಳು ಬಟ್ಟೆಗೆ ಹೊಂದಿಕೆಯಾಗುವಂತಿರಲಿ : ಹೆಚ್ಚಿನ ಮಹಿಳೆಯರು ಉಡುಗೆ ತೊಡುಗೆಗಳಿಗೆ ಗಮನ ಹರಿಸುವಷ್ಟು ಪಾದರಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆಫೀಸಿಗೆ ಧರಿಸುವ ಬಟ್ಟೆಗಳಿಗೆ ಹೊಂದಿಕೆಯಾಗುವ ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಖರೀದಿಸುವುದು ಉತ್ತಮ. ಹೆಚ್ಚಿನ ಜನರು ಮೊದಲು ನಿಮ್ಮ ಪಾದರಕ್ಷೆಗಳನ್ನು ಗಮನಿಸುತ್ತಾರೆ ಎನ್ನುವುದು ಅನೇಕರಿಗೆ ತಿಳಿದಿಲ್ಲ.