ಯಾವುದೇ ಕಾಯಿಲೆ ಬಂದಾಗ ದೇಹದಲ್ಲಿ ಬದಲಾವಣೆ ಆಗಿರುವುದರ ಕುರಿತು ಕಾಳಜಿ ವಹಿಸಬೇಕು. ಪ್ರಾರಂಭದಲ್ಲಿಯೇ ನಿರ್ಲಕ್ಷ್ಯ ವಹಿಸಿದರೆ ಅಸ್ತಮಾ ಬರುವ ಸಾಧ್ಯತೆಯು ಅಧಿಕವಾಗಿರುತ್ತದೆ. ಅನುವಂಶಿಕತೆ, ಆರೋಗ್ಯ ಸಮಸ್ಯೆಗಳು, ಅಲರ್ಜಿ, ಸೋಂಕು ಹಾಗೂ ಹವಾಮಾನದಲ್ಲಾಗುವ ಬದಲಾವಣೆಯಿಂದ ಈ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ. ಪ್ರಾರಂಭದಲ್ಲಿ ಇದಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಂಡರೆ ಈ ಅಪಾಯಕಾರಿ ಕಾಯಿಲೆಯಿಂದ ಪಾರಾಗಬಹುದು. ಅಸ್ತಮಾದಂತಹ ಅಪಾಯಕಾರಿಯ ಕಾಯಿಲೆಯ ನಿರ್ಮೂಲನೆಗಾಗಿ ವಿಶ್ವ ಅಸ್ತಮಾ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ವಿಶ್ವ ಅಸ್ತಮಾ ದಿನವನ್ನು ಮೊದಲ ಬಾರಿಗೆ 1998ರಲ್ಲಿ ಆಚರಿಸಲಾಯಿತು. ಅಸ್ತಮಾ ದಿನವನ್ನು ಮೇ ತಿಂಗಳ ಮೊದಲ ಮಂಗಳವಾರ ಆಚರಿಸಲಾಗುತ್ತದೆ. ಈ ದಿನದ ಮುಖ ಉದ್ದೇಶವೇ ಅಸ್ತಮಾ ಕಾಯಿಲೆಯ ಬಗ್ಗೆ ಅರಿವು ಮೂಡಿಸುವುದು ಹಾಗೂ ರೋಗಿಗಳನ್ನು ಆರೈಕೆ ಮಾಡುವ ಮೂಲಕ ಆರೋಗ್ಯ ಸುಧಾರಿಸುವುದಾಗಿದೆ. ಗ್ಲೋಬಲ್ ಇನಿಶಿಯೇಟಿವ್ ಫಾರ್ ಅಸ್ತಮಾ ಎಂಬ ಸಂಸ್ಥೆ ವಾರ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ದೇಹದ ವಾಯುಮಾರ್ಗಗಳ ಸುತ್ತ ಸ್ನಾಯುಗಳನ್ನು ಬಿಗಿಗೊಳಿಸುವುದರಿಂದ ಈ ಅಸ್ತಮಾವು ಉಂಟಾಗುತ್ತದೆ. ಈ ವಾಯುಮಾರ್ಗಗಳ ಒಳಪದರವು ಊದಿಕೊಳ್ಳುತ್ತದೆ ಇಲ್ಲದಿದ್ದರೆ ಉರಿಯುತ್ತದೆ.
ಅಸ್ತಮಾದ ಲಕ್ಷಣಗಳು ಹಾಗೂ ಚಿಕಿತ್ಸೆ ಹೇಗೆ?
* ಉಸಿರಾಟದ ತೊಂದರೆ
* ವಿಪರೀತ ಕೆಮ್ಮು ಮತ್ತು ದೀರ್ಘಕಾಲದ ಶೀತದಂತಹ ಲಕ್ಷಣಗಳು
* ವಿಪರೀತ ಎದೆ ನೋವು
* ನಿದ್ರಿಸಲು ಆಗದಿರುವುದು
ಇದನ್ನೂ ಓದಿ: ಎಳನೀರು ಕುಡಿಯುವವರ ಗಮನಕ್ಕೆ, ಈ ವಿಚಾರ ನಿಮಗೆ ತಿಳಿದಿರಲೇಬೇಕು
ಅಸ್ತಮಾ ಕಾಯಿಲೆಯು ಆರಂಭವಾದ ಕೂಡಲೇ ಇನ್ಹಲೇಷನ್ ಚಿಕಿತ್ಸೆ ಪಡೆದುಕೊಂಡರೆ ಪರಿಣಾಮಕಾರಿಯಾಗಿ ಗುಣವಾಗುತ್ತದೆ. ಸರಿಯಾದ ಸಮಯಕ್ಕೆ ಔಷಧವನ್ನು ಸೇವಿಸಿ, ವೈದ್ಯರ ಸೂಚನೆಯಂತೆ ಜೀವನಶೈಲಿ ಹಾಗೂ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಈ ಕಾಯಿಲೆಯಿಂದ ಗುಣಮುಖರಾಗಬಹುದು. ಅದಲ್ಲದೇ ರೋಗಿಗಳು ವೈದ್ಯಕೀಯ ಸಲಹೆಯಿಲ್ಲದೆ ತೀವ್ರ ಒತ್ತಡದ ವ್ಯಾಯಾಮಗಳನ್ನು ಮಾಡುವಂತಿಲ್ಲ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ