
ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ಸ್ಮಾರ್ಟ್‌ಫೋನ್ ಬಂದ ಮೇಲೆ ಯುವ ಜನತೆ ದೈಹಿಕ ಚಟುವಟಿಕೆಗಳಲ್ಲಿ (physical activity) ತೊಡಗುವುದು ಕಡಿಮೆಯಾಗುತ್ತಾ ಬಂದಿದೆ. ಮೊದಲೆಲ್ಲಾ ಸಂಜೆ ಕಾಲೇಜು, ಕೆಲಸ ಮುಗಿದ ಬಳಿಕ ಯುವಕರೆಲ್ಲಾ ಜೊತೆಯಾಗಿ ಕ್ರಿಕೆಟ್ ಇತ್ಯಾದಿ ಆಟಗಳನ್ನು ಆಡುತ್ತಿದ್ದರು. ಆದ್ರೆ ಈ ಸ್ಮಾರ್ಟ್ ಫೋನ್ ಬಂದ ನಂತರ ಜನ ದಿನದ 24 ಗಂಟೆಯೂ ಮೊಬೈಲ್‌ನಲ್ಲಿಯೇ ಸಮಯವನ್ನು ಕಳೆಯುತ್ತಿದ್ದಾರೆ. ಮತ್ತು ಕ್ರೀಡೆಯಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಯುವಕರು ಹೆಚ್ಚು ಹೆಚ್ಚು ಅಥ್ಲೆಟಿಕ್ಸ್‌ನಲ್ಲಿ (Athletics) ಭಾಗವಹಿಸಿವುದನ್ನು ಉತ್ತೇಜಿಸಲು, ಫಿಟ್ನೆಸ್ ಬಗ್ಗೆ ಜಾಗೃತಿಯನ್ನು ಮೂಡಿಸಲು, ಅಥ್ಲೆಟಿಕ್ಸ್ ಆಟಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವಿಶ್ವ ಅಥ್ಲೆಟಿಕ್ಸ್ (World Athletics Day) ದಿನವನ್ನು ಪ್ರತಿವರ್ಷ ಮೇ 07 ರಂದು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ಪ್ರತಿ ವರ್ಷ ಮೇ 7 ರಂದು ‘ವಿಶ್ವ ಅಥ್ಲೆಟಿಕ್ಸ್ ದಿನ’ವನ್ನು ಆಚರಿಸಲಾಗುತ್ತದೆ. ಮಕ್ಕಳು ಮತ್ತು ಯುವಕರಲ್ಲಿ ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅಥ್ಲೆಟಿಕ್ಸ್ ಆಟಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್’ (IAAF) ಈ ದಿನದ ಆಚರಣೆಯನ್ನು ಪ್ರಾರಂಭಿಸಿತು. ಈ ದಿನವನ್ನು ಮೊದಲ ಬಾರಿಗೆ 1996 ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಪ್ರತಿವರ್ಷ ಐಎಎಎಫ್ ಸಂಸ್ಥೆ ಈ ವಿಶೇಷ ದಿನವನ್ನು ಆಚರಿಸುತ್ತಾ ಬರುತ್ತಿದೆ.
ಇದನ್ನೂ ಓದಿ: ಕಾಫಿ-ಗೂಬೆ, ನಿಮಗೆ ಕಾಣಿಸಿದ್ದೇನು? ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವದ ರಹಸ್ಯ ತಿಳಿಯಿರಿ
ಯುವಕರಲ್ಲಿ ಕ್ರೀಡೆಗಳ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುವುದು, ಶಾಲಾ-ಕಾಲೇಜುಗಳಲ್ಲಿ ಅಥ್ಲೆಟಿಕ್ಸ್ ಅನ್ನು ಪ್ರಾಥಮಿಕ ಕ್ರೀಡೆಯಾಗಿ ಉತ್ತೇಸುವುದು, ಕ್ರೀಡೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವುದು ಮತ್ತು ಕ್ರೀಡೆಗಳ ಮಹತ್ವದ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವುದು ಈ ದಿನದ ಆಚರಣೆಯ ಉದ್ದೇಶವಾಗಿದೆ. ಅಲ್ಲದೆ ಅಥ್ಲೆಟಿಕ್ಸ್ ಜನರು ಒಟ್ಟಿಗೆ ಸೇರಲು ಮತ್ತು ತಂಡವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ, ಇದು ಜನರಲ್ಲಿ ಒಗ್ಗಟ್ಟಿನ ಮನೋಭಾವವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಕ್ರೀಡೆಗಳು ಜನರು ಹೆಚ್ಚು ಸಕ್ರಿಯರಾಗಲು, ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಹೆಚ್ಚು ಚಲನಶೀಲರನ್ನಾಗಿರುವಂತೆ ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ. ಇದು ವಿವಿಧ ಕಾಯಿಲೆಗಳನ್ನು ನಿವಾರಿಸಲು ಮತ್ತು ಹೆಚ್ಚು ಸದೃಢ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಹೊಂದಲು ನಮಗೆ ಸಹಾಯ ಮಾಡುತ್ತದೆ. ಕ್ರೀಡೆಯ ಈ ಆರೋಗ್ಯ ಪ್ರಯೋಜನಗಳ ಬಗ್ಗೆಯೂ ಈ ದಿನ ಜಾಗೃತಿಯನ್ನು ಮೂಡಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ