World Beard Day 2022: ವಿಶ್ವ ಗಡ್ಡ ದಿನದ ಬಗ್ಗೆ ನಿಮಗೆಷ್ಟು ಗೊತ್ತು! ಇಲ್ಲಿದೆ ಇತಿಹಾಸ, ಮಹತ್ವ

ಈ ಹಿಂದೆ ರೇಜರ್​ ಬ್ಲೇಡ್​ಗಳ ಆವಿಷ್ಕಾರವಾಗುವವರೆಗೂ ಪ್ರತಿಯೊಬ್ಬ ಪುರುಷ ಗಡ್ಡ ಬಿಡುವುದು ಅನಿವಾರ್ಯವಾಗಿತ್ತು. ಹಾಗಾಗಿ ಆದಿಮಾನವರಿಂದ ಈ ಗಡ್ಡವನ್ನು ನಾವು ಕಾಣಬಹುದು.

World Beard Day 2022: ವಿಶ್ವ ಗಡ್ಡ ದಿನದ ಬಗ್ಗೆ ನಿಮಗೆಷ್ಟು ಗೊತ್ತು! ಇಲ್ಲಿದೆ ಇತಿಹಾಸ, ಮಹತ್ವ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 03, 2022 | 7:51 AM

ನೀವು ಗಡ್ಡ (Beard) ಹೊಂದಿದ್ದೀರಾ? ಅಥವಾ ನೀವು ಗಡ್ಡವನ್ನು ಪ್ರೀತಿಸುತ್ತೀರಾ? ಹಾಗಾದರೆ ನಿಮ್ಮ ಕ್ಯಾಲೆಂಡರ್​ಲ್ಲಿ ಸೆಪ್ಟೆಂಬರ್ 3ನ್ನು  ಗುರುತಿಸಿಕೊಳ್ಳಿ. ಏಕೆಂದರೆ ಈ ದಿನ ವಿಶ್ವ ಗಡ್ಡ ದಿನ. (World Beard Day) ಪ್ರಪಂಚದಾದ್ಯಂತದ ಜನರು ವಿಶ್ವ ಗಡ್ಡ ದಿನವನ್ನು ಆಚರಿಸುತ್ತಾರೆ. ನೀವು ದೊಡ್ಡ ಕುರುಚಲು ಗಡ್ಡವನ್ನು ಹೊಂದಿದ್ದು ಅಥವಾ ನೀಟಾಗಿ ಟ್ರಿಮ್ ಮಾಡಿ ಸುಂದರವಾಗಿ ಕಾಣುವಂತೆ ಮಾಡಲು ಇದು ದಿನವಾಗಿದೆ. ಜಗತ್ತಿನ್ನ ಗಡ್ಡ ಬಿಡದ ಗಂಡಸರು ಯಾರಿದ್ದಾರೆ ಹೇಳಿ? ಈ ಗಡ್ಡ ಎನ್ನುವುದ ಪುರುಷರ ಗಂಡಸುತನದ ಒಂದು ಸಂಕೇತವೆಂದು ಹೇಳಬಹುದು. ಆದಿಮಾನವರ ಕಾಲದಿಂದಲೂ ಗಡ್ಡಕ್ಕೆ ಅದರದೇ ಆದ ಒಂದು ಪ್ರಾಶಸ್ತ್ಯವಿದೆ. ಇತ್ತೀಚಿನ ದಿನಮಾನಗಳಲ್ಲಿ ಕ್ಲೀನ್​ ಶೇವರ್​ಗಳು ಬಂದು ಗಡ್ಡಕ್ಕೆ ಮತ್ತಷ್ಟು ಮೆರಗನ್ನು ನೀಡಿವೆ. ಅದರಲ್ಲೂ ಉದ್ದುದ್ದ ಗಡ್ಡ ಬಿಡುವುದು ಕೂಡ ಒಂದು ಟ್ರೆಂಡ್​ ಆಗಿದೆ.

ವಿಶ್ವ ಗಡ್ಡ ದಿನದ ಇತಿಹಾಸ:

ಈ ಹಿಂದೆ ರೇಜರ್​ ಬ್ಲೇಡ್​ಗಳ ಆವಿಷ್ಕಾರವಾಗುವವರೆಗೂ ಪ್ರತಿಯೊಬ್ಬ ಪುರುಷ ಗಡ್ಡ ಬಿಡುವುದು ಅನಿವಾರ್ಯವಾಗಿತ್ತು. ಹಾಗಾಗಿ ಆದಿಮಾನವರಿಂದ ಈ ಗಡ್ಡವನ್ನು ನಾವು ಕಾಣಬಹುದು. ಭಾರತೀಯ ಇತಿಹಾಸದಲ್ಲಿ ಖುಷಿ ಮುನಿಗಳು ಸಹ ಗಡ್ಡಧಾರಿಗಳಾಗಿದ್ದರು. ನಮ್ಮಲ್ಲಿ ಕೆಲ ವರ್ಷಗಳ ಹಿಂದೆ ಜಾಸ್ತಿ ಗಡ್ಡ ಬಿಟ್ಟರೆ ಸಾಕು ದೇವದಾಸ ಎಂದು ಹೇಳಿ ಅಪಹಾಸ್ಯ ಮಾಡಲಾಗುತ್ತಿತ್ತು. ಆದರೆ ಇಂದು ಸಮಯ ಬದಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಗಡ್ಡ ಬಿಟ್ಟು ಟ್ರೆಂಡ್​ ಮಾಡಿದ್ದಾರೆ.

ಇದನ್ನೂ ಓದಿ: High Blood Pressure: ಅಧಿಕ ರಕ್ತದೊತ್ತಡವಿದೆಯೇ? ನಿಮ್ಮ ಜೀವನಶೈಲಿಯನ್ನು ಸ್ವಲ್ಪ ಬದಲಿಸಿಬಿಡಿ

ಹ್ಯಾಂಡಲ್‌ಬಾರ್ ಕ್ಲಬ್ ಸದಸ್ಯರು ಮುಖದ ಕೂದಲನ್ನು ಆಚರಿಸಲು ಮತ್ತು ಆರೋಗ್ಯಕರ ಗಡ್ಡವನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ವಿಶ್ವ ಗಡ್ಡ ದಿನವನ್ನಾಗಿ ಗುರುತಿಸಿದರು. ಗಡ್ಡ, ಮೀಸೆ ಮತ್ತು ಇತರ ರೀತಿಯ ಮುಖದ ಕೂದಲನ್ನು ಬೆಳೆಸಲು ಹೆಚ್ಚಿನ ಜನರನ್ನು ಪ್ರೋತ್ಸಾಹಿಸಲು ಅವರು ಆಶಿಸಿದರು. ಇತ್ತೀಚಿನ ವರ್ಷಗಳಲ್ಲಿ ಗಡ್ಡ ಹೆಚ್ಚು ಜನಪ್ರಿಯವಾಗಿದೆ, ಪ್ರಪಂಚದಾದ್ಯಂತದ ವಿವಿಧ ದೇಶಗಳಲ್ಲಿ ಈ ದಿನ ನಡೆಯುತ್ತಿದೆ.

ಪ್ರತಿ ವರ್ಷ, ವಿಶ್ವ ಗಡ್ಡ ದಿನದಲ್ಲಿ ಹೆಚ್ಚು ಹೆಚ್ಚು ಜನರು ತೊಡಗಿಸಿಕೊಳ್ಳುವುದನ್ನು ಮತ್ತು ಅವರ ಮುಖದ ಕೂದಲನ್ನು ಆಚರಿಸುವುದನ್ನು ಕಾಣಬಹುದಾಗಿದೆ. ಹಾಗಾದರೆ ಈ ವರ್ಷ ವಿಶ್ವ ಗಡ್ಡ ದಿನವನ್ನು ಮೋಜಿನಲ್ಲಿ ಏಕೆ ಆಚರಿಸಬಾರದು? ನೀವು ಗಡ್ಡವನ್ನು ಹೊಂದಿದ್ದೀರಾ ಅಥವಾ ಇಲ್ಲದಿರಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸೇರಲು ಮತ್ತು ಸ್ವಲ್ಪ ಮೋಜು ಮಾಡಲು ಇದು ಉತ್ತಮ ಸಮಯವಾಗಿದೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.