ಭಾರತೀಯ ಫುಡ್ನಲ್ಲಿ ಬಿರಿಯಾನಿಗೆ ವಿಶಿಷ್ಟ ಸ್ಥಾನವಿದ್ದರೂ, ಹೈದರಾಬಾದ್ ಬಿರಿಯಾನಿ ಅಂದ್ರೆ ಮತ್ತಷ್ಟು ವಿಶೇಷ. ನಾನ್ ವೆಜ್ ಇಷ್ಟ ಪಡುವವರು ಈ ಸ್ಥಳಕ್ಕೆ ಹೋದರೆ ಮೊದಲು ಆರ್ಡರ್ ಮಾಡುವುದೇ ಈ ಬಿರಿಯಾನಿಯನ್ನೇ. ಇಲ್ಲಿ ಮಾತ್ರವಲ್ಲದೇ ಹೊರ ರಾಜ್ಯ ಹಾಗೂ ಹೊರದೇಶದಲ್ಲಿಯು ಈ ಬಿರಿಯಾನಿ ಅಷ್ಟೇ ಫೇಮಸ್.
ಒಮ್ಮೆ ರುಚಿ ಸವಿದರೆ ಮತ್ತೆ ಮತ್ತೆ ಇದನ್ನೇ ಆರ್ಡರ್ ಮಾಡುವುದಂತೂ ಖಂಡಿತ. ಹೈದರಾಬಾದ್ ಪ್ರದೇಶದ ಬಾಣಸಿಗರಿಂದ ವಿಶೇಷವಾದ ರೀತಿಯಲ್ಲಿ ತಯಾರಿಸಲಾದ ಈ ಬಿರಿಯಾನಿಯು ಇಂದು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಉತ್ತರ ಭಾರತದಲ್ಲಿ ನೆಚ್ಚಿನ ಫುಡ್ ಆಗಿದೆ. ಕಚ್ಚಿ ಹಾಗೂ ಪಕ್ಕಿ ಎಂಬ ಎರಡು ರೂಪಗಳಲ್ಲಿ ಈ ಬಿರಿಯಾನಿ ದೊರೆಯುತ್ತದೆ.
1 ಕಿಲೋ ಚಿಕನ್, 1/2 ಕಿಲೋ ಬಾಸ್ಮತಿ ಅಕ್ಕಿ, 4 ಸ್ಟಾರ್ ಅನೀಸ್, 4 ರಿಂದ 5 ಬಿರಿಯಾನಿ ಎಲೆ, 2 ಚೆಕ್ಕೆ ತುಂಡು, 5 ರಿಂದ 6 ಏಲಕ್ಕಿ, ಒಂದು ಕಪ್ ನಷ್ಟು ಕಂದುಬಣ್ಣಕ್ಕೆ ಹುರಿದ ಈರುಳ್ಳಿ, ಎರಡು ಚಮಚದಷ್ಟು ಬಿರಿಯಾನಿ ಮಸಾಲೆ, ಒಂದು ಚಮಚದಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್, ಧನಿಯಾ ಪುಡಿ, ಕರಿಮೆಣಸು, ಖಾರದ ಪುಡಿ ಹಾಗೂ ಜೀರಿಗೆ ಪುಡಿ, ಒಂದು ಕಪ್ ಮೊಸರು, ಕಾಲು ಚಮಚ ಅರಿಶಿನ, ಒಂದು ಕಪ್ ಕೊತ್ತಂಬರಿ ಸೊಪ್ಪು, ಅರ್ಧ ಕಪ್ ಪುದೀನಾ, ನಾಲ್ಕರಿಂದ ಐದು ಹಸಿ ಮೆಣಸಿನಕಾಯಿ, ಅರ್ಧ ಕಪ್ ಎಣ್ಣೆ, ಒಂದೆರಡು ಚಮಚ ನಿಂಬೆ ರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
ಇದನ್ನೂ ಓದಿ: ವಿಶ್ವ ಕ್ರೀಡಾ ಪತ್ರಕರ್ತರ ದಿನದ ಇತಿಹಾಸ ಹಾಗೂ ಮಹತ್ವವೇನು?
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ