Relationship Tips : ಗಂಡ ಹೆಂಡತಿ ನಡುವೆ ಜಗಳ ತಂದಿಟ್ಟು ಖುಷಿ ಪಡುವವರು ಈ ವ್ಯಕ್ತಿಗಳೇ, ಇವರಿಂದ ದೂರವಿರಿ

ಗಂಡ ಹೆಂಡತಿಯರ ನಡುವೆ ಜಗಳಗಳು ನಡೆಯುವುದು ಸರ್ವೇ ಸಾಮಾನ್ಯ. ಆದರೆ ಕೆಲವೊಮ್ಮೆ ಸಣ್ಣ ಪುಟ್ಟ ವಿಷಯಕ್ಕೂ ಕಿತ್ತಾಡುತ್ತಿದ್ದರೆ ದಾಂಪತ್ಯ ಜೀವನವು ಬೇಸರವೆನಿಸುತ್ತದೆ. ದಂಪತಿಗಳಿಬ್ಬರ ನಡುವೆ ಜಗಳಗಳು ಆಗುತ್ತಿದ್ದರೆ ಯಾವ ಕಾರಣಕ್ಕಾಗಿ ಆಗುತ್ತಿದೆ ಎಂದು ಅರಿತುಕೊಳ್ಳಬೇಕು. ಒಂದು ವೇಳೆ ನಿಮ್ಮಿಬ್ಬರ ಬಗ್ಗೆ ಮೂರನೇ ವ್ಯಕ್ತಿಗಳು ಇಲ್ಲ ಸಲ್ಲದ್ದನ್ನು ಹೇಳಿಕೊಟ್ಟು ಜಗಳಗಳಾಗುತ್ತಿದ್ದರೆ ಸ್ವಲ್ಪ ಎಚ್ಚರ ವಹಿಸುವುದು ಅಗತ್ಯ. ಈ ವೇಳೆಯಲ್ಲಿ ಈ ಕೆಲವು ವ್ಯಕ್ತಿಗಳು ನಿಮ್ಮ ದಾಂಪತ್ಯ ಜೀವನದಲ್ಲಿ ಮೂಗು ತುರಿಸಲು ಬಿಡದೇ ಇರುವುದೇ ಉತ್ತಮ.

Relationship Tips : ಗಂಡ ಹೆಂಡತಿ ನಡುವೆ ಜಗಳ ತಂದಿಟ್ಟು ಖುಷಿ ಪಡುವವರು ಈ ವ್ಯಕ್ತಿಗಳೇ, ಇವರಿಂದ ದೂರವಿರಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 02, 2024 | 3:34 PM

ಸಂಬಂಧಗಳು ಬಹಳ ಸೂಕ್ಷ್ಮವಾದುದು. ಹೀಗಾಗಿ ನಾವು ಹೇಗೆ ಅದನ್ನು ಮುನ್ನೆಡಿಸಿಕೊಂಡು ಹೋಗುತ್ತೇವೆ ಎಂಬುದರ ಮೇಲೆ ಸಂಬಂಧವು ನಿಂತಿರುತ್ತದೆ. ಕೊಂಚ ನಿರ್ಲಕ್ಷ್ಯ ಮಾಡಿದರೂ ಅಥವಾ ಮೂರನೇ ವ್ಯಕ್ತಿಯಾ ಪ್ರವೇಶವಾದರೂ ಸಂಬಂಧದ ಕೊಂಡಿ ಕಳಚಿ ಬಿಡುತ್ತದೆ. ಈ ಗಂಡ-ಹೆಂಡತಿಯ ಸಂಬಂಧದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಸಣ್ಣಪುಟ್ಟ ವಿಷಯಗಳಿಂದ ಆರಂಭವಾದ ಜಗಳಗಳು ಡೈವೋರ್ಸ್ ಹಂತಕ್ಕೂ ತಲುಪಬಹುದು. ಅದಲ್ಲದೇ ನಿಮ್ಮ ನಡುವೆ ನಂಬಿಕೆ ಗಟ್ಟಿಯಾಗಿದ್ದರೆ ಮೂರನೇ ವ್ಯಕ್ತಿಯ ಪ್ರವೇಶವಾದರೂ ಬಂಧವು ಮುರಿದು ಬೀಳುವುದಿಲ್ಲ.

* ಕೆಲವೊಮ್ಮೆ ಅತ್ತೆಯ ನಡವಳಿಕೆಗಳು ಸೊಸೆಗೆ ಇಷ್ಟವಾಗದೇ ಇರಬಹುದು. ಇದನ್ನು ನೇರವಾಗಿ ಅತ್ತೆಗೆ ಹೇಳಲಾಗುವುದಿಲ್ಲ. ಹೀಗಾಗಿ ತನ್ನ ಪತಿಯ ಜೊತೆಗೆ ಹೇಳುವ ಮೂಲಕ ಇದೇ ಜಗಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಒಂದು ವೇಳೆ ಅತ್ತೆಯ ಸ್ವಭಾವದ ಬಗ್ಗೆ ಮೊದಲೇ ಸಂಗಾತಿಯ ಬಗ್ಗೆ ಹೇಳಿಕೊಳ್ಳುವುದು ಒಳ್ಳೆಯದು.

* ತಾಯಿಯು ಮಗ ಅಥವಾ ಮಗಳು ಚೆನ್ನಾಗಿರಬೇಕೆಂದು ಬಯಸುವುದು ಸಹಜ. ಆದರೆ ಮಕ್ಕಳ ಸಂಸಾರದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಾದಾಗ ಮಧ್ಯೆ ಪ್ರವೇಶಿಸುವುದು ಒಳ್ಳೆಯದಲ್ಲ. ಇದರಿಂದ ಅವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಬಹುದು. ಹೀಗಾಗಿ ಸಂಸಾರದಲ್ಲಿ ಯಾವುದೇ ಸಮಸ್ಯೆಯ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮೊದಲು ಮಾತನಾಡಿ ಅದನ್ನು ಪರಿಹರಿಸಿಕೊಳ್ಳುವತ್ತ ಗಮನ ಕೊಡಿ. ಹೆಚ್ಚಿನ ಹೆಣ್ಣು ಮಕ್ಕಳು ಈ ಬಗ್ಗೆ ತನ್ನ ತಾಯಿಯೊಂದಿಗೆ ಚರ್ಚಿಸುತ್ತಾರೆ. ಇದು ಗಂಡ ಹೆಂಡಿರ ನಡುವೆ ಜಗಳಕ್ಕೆ ಕಾರಣವಾಗಬಹುದು.

* ದಾಂಪತ್ಯ ಜೀವನವು ಮುರಿದು ಬೀಳಲು ಸ್ನೇಹಿತರು ಕಾರಣವಾಗುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಮದುವೆಯಾಗಿರುವ ಗಂಡು ಮಕ್ಕಳು ರಜಾ ದಿನಗಳಲ್ಲಿ ಸ್ನೇಹಿತರ ಜೊತೆಗೆ ಕಾಲ ಕಳೆಯುತ್ತಾರೆ. ನನ್ನ ಪತಿ ನನಗೆ ಟೈಮ್ ಕೊಡಲ್ಲ ಎನ್ನುವ ಪತ್ನಿಯ ಪೊಸೆಸಿವ್ ನೆಸ್ ಜಗಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಸ್ನೇಹಿತರೊಂದಿಗೆ ಕಾಲ ಕಳೆಯುವುದರೊಂದಿಗೆ ಪತ್ನಿಗೂ ಬೇಸರವಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ; ಆಹಾ! ಘಮ್ ಎನ್ನುವ ಹೈದರಾಬಾದ್ ದಮ್ ಬಿರಿಯಾನಿ, ಮನೆಯಲ್ಲೇ ಮಾಡಿ

* ಕೆಲಸದಲ್ಲಿ ಬ್ಯುಸಿಯಿರುವ ಗಂಡಸರು ಮನೆಗೆ ಬಂದ ಮೇಲೂ ಆಫೀಸ್, ಕಾಲ್ ಎಂದು ಬ್ಯುಸಿ ಇರುತ್ತಾರೆ. ಹೀಗಾಗಿ ಪತ್ನಿಗಿಂತ ಸಹೋದ್ಯೋಗಿಗಳ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ. ಇದುವೇ ಗಂಡ ಹೆಂಡಿರ ನಡುವೆ ಜಗಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಕೆಲಸ ಬಿಟ್ಟು ಮನೆಗೆ ಬಂದ ತಕ್ಷಣ, ತನ್ನ ಕುಟುಂಬಕ್ಕೆ ಆದ್ಯತೆ ನೀಡಿದರೆ ಸಂಬಂಧದಲ್ಲಿ ಬಿರುಕು ಮೂಡುವುದಿಲ್ಲ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್