World Biriyani Day 2024: ಆಹಾ! ಘಮ್ ಎನ್ನುವ ಹೈದರಾಬಾದ್ ದಮ್ ಬಿರಿಯಾನಿ, ಮನೆಯಲ್ಲೇ ಮಾಡಿ

ನಾವೇನಾದರೂ ಹೋಟೆಲಿಗೆ ಹೋದರೆ ಆರ್ಡರ್ ಲಿಸ್ಟ್ ನಲ್ಲಿ ಮೊದಲು ಇರುವುದೇ ಬಿರಿಯಾನಿ. ನಾನ್ ವೆಜ್ ಪ್ರಿಯರ ನೆಚ್ಚಿನ ಆಹಾರಗಳಲ್ಲಿ ಇದು ಮೊದಲಿರುತ್ತದೆ. ಈಗಾಗಲೇ ಭಾರತದಲ್ಲಿ ವಿವಿಧ ಬಗೆಯ ಬಿರಿಯಾನಿಯಿದ್ದು, ಆದರೆ ಹೈದರಾಬಾದಿನ ಚಿಕನ್ ದಮ್ ಬಿರಿಯಾನಿಯ ರುಚಿಯೇ ಬೇರೆ. ಹಬೆಯಲ್ಲಿ ಬೇಯುವ ಈ ಬಿರಿಯನ್ನೊಮ್ಮೆ ಸವಿದರೆ ಮತ್ತೆ ಮತ್ತೆ ಬೇಕೆನಿಸುವುದು ಖಂಡಿತ. ಹಾಗಾದ್ರೆ ಈ ಬಿರಿಯಾನಿ ರೆಸಿಪಿ ಮಾಡುವ ವಿಧಾನದ ಕುರಿತಾದ ಸಂಪೂರ್ಣ ಮಾಹಿತಿಯು ಇಲ್ಲಿದೆ.

World Biriyani Day 2024: ಆಹಾ! ಘಮ್ ಎನ್ನುವ ಹೈದರಾಬಾದ್ ದಮ್ ಬಿರಿಯಾನಿ, ಮನೆಯಲ್ಲೇ ಮಾಡಿ
ಹೈದರಾಬಾದ್ ದಮ್ ಬಿರಿಯಾನಿImage Credit source: pinterest
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 02, 2024 | 9:49 AM

ಭಾರತೀಯ ಫುಡ್​ನಲ್ಲಿ ಬಿರಿಯಾನಿಗೆ ವಿಶಿಷ್ಟ ಸ್ಥಾನವಿದ್ದರೂ, ಹೈದರಾಬಾದ್ ಬಿರಿಯಾನಿ ಅಂದ್ರೆ ಮತ್ತಷ್ಟು ವಿಶೇಷ. ನಾನ್ ವೆಜ್ ಇಷ್ಟ ಪಡುವವರು ಈ ಸ್ಥಳಕ್ಕೆ ಹೋದರೆ ಮೊದಲು ಆರ್ಡರ್ ಮಾಡುವುದೇ ಈ ಬಿರಿಯಾನಿಯನ್ನೇ. ಇಲ್ಲಿ ಮಾತ್ರವಲ್ಲದೇ ಹೊರ ರಾಜ್ಯ ಹಾಗೂ ಹೊರದೇಶದಲ್ಲಿಯು ಈ ಬಿರಿಯಾನಿ ಅಷ್ಟೇ ಫೇಮಸ್.

ಒಮ್ಮೆ ರುಚಿ ಸವಿದರೆ ಮತ್ತೆ ಮತ್ತೆ ಇದನ್ನೇ ಆರ್ಡರ್ ಮಾಡುವುದಂತೂ ಖಂಡಿತ. ಹೈದರಾಬಾದ್ ಪ್ರದೇಶದ ಬಾಣಸಿಗರಿಂದ ವಿಶೇಷವಾದ ರೀತಿಯಲ್ಲಿ ತಯಾರಿಸಲಾದ ಈ ಬಿರಿಯಾನಿಯು ಇಂದು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಉತ್ತರ ಭಾರತದಲ್ಲಿ ನೆಚ್ಚಿನ ಫುಡ್ ಆಗಿದೆ. ಕಚ್ಚಿ ಹಾಗೂ ಪಕ್ಕಿ ಎಂಬ ಎರಡು ರೂಪಗಳಲ್ಲಿ ಈ ಬಿರಿಯಾನಿ ದೊರೆಯುತ್ತದೆ.

ಹೈದರಾಬಾದ್ ದಮ್ ಬಿರಿಯಾನಿ ಮಾಡಲು ಬೇಕಾದ ಸಾಮಗ್ರಿಗಳು

1 ಕಿಲೋ ಚಿಕನ್‌, 1/2 ಕಿಲೋ ಬಾಸ್ಮತಿ ಅಕ್ಕಿ, 4 ಸ್ಟಾರ್‌ ಅನೀಸ್‌, 4 ರಿಂದ 5 ಬಿರಿಯಾನಿ ಎಲೆ, 2 ಚೆಕ್ಕೆ ತುಂಡು, 5 ರಿಂದ 6 ಏಲಕ್ಕಿ, ಒಂದು ಕಪ್ ನಷ್ಟು ಕಂದುಬಣ್ಣಕ್ಕೆ ಹುರಿದ ಈರುಳ್ಳಿ, ಎರಡು ಚಮಚದಷ್ಟು ಬಿರಿಯಾನಿ ಮಸಾಲೆ, ಒಂದು ಚಮಚದಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಧನಿಯಾ ಪುಡಿ, ಕರಿಮೆಣಸು, ಖಾರದ ಪುಡಿ ಹಾಗೂ ಜೀರಿಗೆ ಪುಡಿ, ಒಂದು ಕಪ್ ಮೊಸರು, ಕಾಲು ಚಮಚ ಅರಿಶಿನ, ಒಂದು ಕಪ್ ಕೊತ್ತಂಬರಿ ಸೊಪ್ಪು, ಅರ್ಧ ಕಪ್ ಪುದೀನಾ, ನಾಲ್ಕರಿಂದ ಐದು ಹಸಿ ಮೆಣಸಿನಕಾಯಿ, ಅರ್ಧ ಕಪ್ ಎಣ್ಣೆ, ಒಂದೆರಡು ಚಮಚ ನಿಂಬೆ ರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಇದನ್ನೂ ಓದಿ: ವಿಶ್ವ ಕ್ರೀಡಾ ಪತ್ರಕರ್ತರ ದಿನದ ಇತಿಹಾಸ ಹಾಗೂ ಮಹತ್ವವೇನು?

ಹೈದರಾಬಾದ್ ದಮ್ ಬಿರಿಯಾನಿ ಮಾಡುವ ವಿಧಾನ

  • ಮೊದಲಿಗೆ ನೀರಿನಲ್ಲಿ ಅಕ್ಕಿಯನ್ನು ನೆನೆಸಿಡಬೇಕು. ಮತ್ತೊಂದೆಡೆ ಚಿಕನ್ ನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಬೇಕು.
  • ಉಪ್ಪು, ಕೆಂಪು ಮೆಣಸಿನಕಾಯಿ ಪುಡಿ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಅರಿಶಿನ, ಗರಂ ಮಸಾಲಾ ಪುಡಿ ಹಾಗೂ ಮೊಸರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು.
  • ಆ ಬಳಿಕ ಕೊತ್ತಂಬರಿ, ಪುದೀನಾ ಮತ್ತು ಹಸಿರು ಮೆಣಸಿನಕಾಯಿಯನ್ನು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಕೊಂಡು, ಈಗಾಗಲೇ ಮಾಡಿಟ್ಟ ಮಸಾಲೆಗೆ ಸೇರಿಸಬೇಕು.
  • ಗ್ಯಾಸ್ ಮೇಲೆ ಬಾಣಲೆಯಿಟ್ಟು, ಎಣ್ಣೆ ಕಾಯಿಸಿ ಅದರಲ್ಲಿ ಈರುಳ್ಳಿಯನ್ನು ಕೆಂಪಗಾಗುವವರೆಗೆ ಹುರಿದುಕೊಳ್ಳಬೇಕು.ಇದನ್ನು ತೊಳೆದಿಟ್ಟ ಚಿಕನ್ ಗೆ ಹಾಕಿ, ಸಿದ್ಧ ಮಾಡಿದ ಮಸಾಲೆ ಮಿಶ್ರಣವನ್ನು ಇದಕ್ಕೆ ಬೆರೆಸಿಕೊಳ್ಳಬೇಕು.
  • ನೆನೆಸಿಟ್ಟ ಅಕ್ಕಿಗೆ ಸ್ವಲ್ಪ ಅರಿಶಿಣ, ಸ್ವಲ್ಪ ಗರಂ ಮಸಾಲೆ ಹಾಗೂ ಅಗತ್ಯವಿದ್ದಷ್ಟು ನೀರು ಹಾಕಿ ಬೇಯಿಸಿಕೊಳ್ಳಬೇಕು..
  • ಅಕ್ಕಿ ಅರ್ಧ ಬೇಯುತ್ತಿದ್ದಂತೆ ನೀರನ್ನು ಬಸಿದು ಅನ್ನವನ್ನು ಬೇರ್ಪಡಿಸಬೇಕು. ಆ ಬಳಿಕ ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ಸ್ವಲ್ಪ ಚಿಕನ್ ಮಿಶ್ರಣ ಮತ್ತು ಸ್ವಲ್ಪ ಅನ್ನ ಸೇರಿಸಬೇಕು.
  • ಕೊನೆಗೆ ಈ ಪಾತ್ರೆಗೆ ಮುಚ್ಚಳ ಮುಚ್ಚಿ 20 ನಿಮಿಷ ಹಬೆ ಬರುವ ತನಕ ಬೇಯಿಸಿದರೆ ಘಮ್ ಎನ್ನುವ ಹೈದರಾಬಾದ್ ಚಿಕನ್ ದಮ್ ಬಿರಿಯಾನಿ ಸವಿಯಲು ಸಿದ್ದ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ