Relationship Tips : ನಿಮ್ಮ ಸಂಗಾತಿ ಸಣ್ಣ ಪುಟ್ಟ ವಿಚಾರವನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಾರಾ? ಅವರನ್ನು ನಿಭಾಯಿಸುವುದು ಹೇಗೆ?

ಸಂಬಂಧವು ಯಾವುದೇ ಮನಸ್ತಾಪಗಳಿಲ್ಲದೇ ಸಾಗಲು ಪ್ರೀತಿಯೊಂದಿದ್ದರೆ ಸಾಲದು. ನಂಬಿಕೆ, ವಿಶ್ವಾಸಗಳೊಂದಿಗೆ ಒಬ್ಬರ ಇಷ್ಟ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿರಬೇಕು. ಸಂಗಾತಿಗಳಿಬ್ಬರಲ್ಲಿ ಒಬ್ಬರು ಭಾವನಾತ್ಮಕವಾಗಿದ್ದರೆ, ಆ ವೇಳೆ ಸಂಬಂಧವನ್ನು ಕಾಪಾಡಿಕೊಳ್ಳುವುದು ಕಷ್ಟಕರ. ಭಾವನಾತ್ಮಕ ವ್ಯಕ್ತಿಯನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ. ನಿಮ್ಮ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆಗಳಾದರೂ ಅವರಿಗೆ ನೋವಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಈ ಸಲಹೆಗಳನ್ನು ಪಾಲಿಸಿ ಭಾವನಾತ್ಮಕ ವ್ಯಕ್ತಿಯೊಂದಿಗೆ ಖುಷಿ ಖುಷಿಯಾಗಿಯೇ ಜೀವಿಸಬಹುದು.

Relationship Tips : ನಿಮ್ಮ ಸಂಗಾತಿ ಸಣ್ಣ ಪುಟ್ಟ ವಿಚಾರವನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಾರಾ? ಅವರನ್ನು ನಿಭಾಯಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 01, 2024 | 5:18 PM

ಯಾವುದೇ ಸಂಬಂಧವಿರಲಿ ಭಾವನ್ಮಾತಕವಾಗಿ ಬೆಸೆದು ಕೊಂಡಿದ್ದರೆ, ಆ ಬಂಧವು ದೀರ್ಘಕಾಲ ಉಳಿಯಲು ಸಾಧ್ಯ. ಆದರೆ ಕೆಲವು ವ್ಯಕ್ತಿಗಳು ತೀರಾ ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಸಣ್ಣ ಪುಟ್ಟ ವಿಚಾರಗಳಿಂದ ಮನಸ್ಸಿಗೆ ನೋವು ಮಾಡಿಕೊಳ್ಳುತ್ತಾರೆ. ಅಂತಹವರ ಸಂಗಾತಿಯಾಗಿ ಬಿಟ್ಟರೆ ಅವರನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟದ ಕೆಲಸ. ಹೀಗಾಗಿ ಹೆಚ್ಚಿನವರು ಭಾವನಾತ್ಮಕ ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳಲು ಹೆಣಗಾಡುವುದಿದೆ.

* ಅರ್ಥ ಮಾಡಿಕೊಳ್ಳುವಿಕೆ ಬಹಳ ಮುಖ್ಯ : ಸಂಗಾತಿಯಿಬ್ಬರಲ್ಲಿ ಒಬ್ಬರು ಭಾವನಾತ್ಮಕ ವ್ಯಕ್ತಿಯಾಗಿದ್ದರೆ ಅವರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಇಂತಹ ವ್ಯಕ್ತಿಗಳು ಸಣ್ಣ ಪುಟ್ಟ ವಿಷಯಗಳಿಗೆ ಅಸಮಾಧಾನಗೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದರೆ ಕೆಲವೊಮ್ಮೆ ಭಾವನಾತ್ಮಕ ವ್ಯಕ್ತಿಯನ್ನು ನಿರ್ಲಕ್ಷಿಸುವುದೇ ಹೆಚ್ಚು..ಇದರಿಂದ ಜಗಳಗಳು ಉಂಟಾಗುವುದೇ ಹೆಚ್ಚು. ಹೀಗಾಗಿ ಅವರ ಭಾವನೆಗಳನ್ನು ಗೌರವಿಸುವುದನ್ನು ಕಲಿತರೆ ಸಂಬಂಧವು ಉತ್ತಮವಾಗಿರಲು ಸಾಧ್ಯ.

* ಕೋಪದ ವರ್ತನೆ ಬೇಡ : ನಿಮ್ಮ ಜೊತೆಗಿರುವ ವ್ಯಕ್ತಿಯು ಭಾವನಾತ್ಮಕವಾಗಿದ್ದರೆ ಅವರ ನಿರೀಕ್ಷೆಗಳು ಹೆಚ್ಚೇ ಇರುತ್ತದೆ. ಈ ವೇಳೆ ನೀವು ಆ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವಾಗದೇ ಇರಬಹುದು. ಹೀಗಾಗಿ ಇಬ್ಬರಲ್ಲಿ ಜಗಳಗಳಾಗುತ್ತವೆ ಈ ವೇಳೆಯಲ್ಲಿ ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಶಾಂತತೆಯಿಂದ ಪ್ರತಿಕ್ರಿಯಿಸಿ. ಕೋಪದಿಂದ ಅವರ ಮೇಲೆ ರೆಗಾಡುವುದಾಗಲಿ, ಕೂಗಾಡುವುದಾಗಲಿ ಮಾಡಬೇಡಿ. ಇದರಿಂದ ಎದುರಿಗಿರುವ ವ್ಯಕ್ತಿಯ ಮನಸ್ಸಿಗೆ ನೋವಾಗುತ್ತದೆ.

ಇದನ್ನೂ ಓದಿ: ಹುಚ್ಚರಂತೆ ಪ್ರೀತಿಸುವ ಹುಡುಗಿಯರು ಸಮಯ ಕಳೆದಂತೆ ಬದಲಾಗುವುದು ಏಕೆ? ಕಾರಣ ಇಲ್ಲಿದೆ

* ಆ ವ್ಯಕ್ತಿಯಿಂದ ದೃಷ್ಟಿಕೋನದಲ್ಲನ್ನೊಮ್ಮೆ ಯೋಚಿಸಿ : ನಿಮ್ಮ ಜೊತೆಗಾರರು ಸೂಕ್ಷ್ಮ ವ್ಯಕ್ತಿಯಾಗಿದ್ದಾಗ ಅವರು ಸಣ್ಣ ಪುಟ್ಟ ವಿಷಯಕ್ಕೂ ಕೋಪಗೊಳ್ಳುವುದು ಸಹಜ. ಅದಲ್ಲದೆ ಆ ಸಂದರ್ಭ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಎಷ್ಟೋ ಬಾರಿ ಮನಸ್ಸಿನಲ್ಲಿ ಇಟ್ಟುಕೊಂಡಿರುವ ವಿಷಯಗಳು ಆ ಸಮಯದಲ್ಲಿ ಹೊರಬರುತ್ತವೆ. ಹೀಗಾದಾಗ ಅವರ ಮಾತುಗಳನ್ನು ಸ್ಪಷ್ಟವಾಗಿ ಕೇಳಿ. ಅವರ ಸ್ಥಾನದಲ್ಲಿ ನಿಂತು ಯೋಚಿಸುವುದು ಉತ್ತಮ.

* ಪ್ರೀತಿ ಸದಾ ಇರಲಿ : ನಿಮ್ಮ ಜೀವನ ಸಂಗಾತಿಯು ಭಾವನಾತ್ಮಕ ಜೀವಿಯಾಗಿದ್ದರೆ ಅವರಿಗೆ ನಿಮ್ಮಿಂದ ಸಾಧ್ಯವಾದಷ್ಟು ಪ್ರೀತಿ ನೀಡಿ. ಇದರಿಂದ ಅವರಿಗೆ ಸುರಕ್ಷಿತ ಎನ್ನುವ ಭಾವವೊಂದು ಮೂಡುತ್ತದೆ. ಅಷ್ಟೇ ಅಲ್ಲದೇ, ಅಪರೂಪಕ್ಕೊಮ್ಮೆಯಾದರೂ ಉಡುಗೊರೆ ನೀಡಿ ಸಂತೋಷಪಡಿಸಿ. ಈ ನಡವಳಿಕೆಯಿಂದಾಗಿ ನೀವು ಅವರನ್ನು ಎಷ್ಟು ಪ್ರೀತಿಸುತ್ತೀರಿ ಎನ್ನುವುದನ್ನು ತಿಳಿಸಿದಂತಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ