World Chocolate Day 2024: ಹೋಮ್ ಮೇಡ್ ಚಾಕೊಲೇಟ್ ಸವಿಯಬೇಕಾದ್ರೆ ಈ ಸ್ಥಳಗಳಲ್ಲಿ ತಪ್ಪದೇ ಭೇಟಿ ನೀಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 06, 2024 | 1:01 PM

ಚಾಕೊಲೇಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಹೇಳಿ. ಮಕ್ಕಳಿಂದ ಹಿಡಿದು ವಯೋವೃದ್ಧರೂ ಕೂಡ ಎಂಜಾಯ್ ಮಾಡುತ್ತಾ ಚಾಕೊಲೇಟ್ ಸೇವಿಸುತ್ತಾರೆ. ಆದರೆ ಹೋಮ್ ಮೇಡ್ ಚಾಕೊಲೇಟ್ ತಿನ್ನಬೇಕೆನ್ನುವ ಕರ್ನಾಟಕದ ಈ ಸ್ಥಳ ಗಳಿಗೆ ಭೇಟಿ ನೀಡುವುದು ಉತ್ತಮ. ಇಲ್ಲಿ ಮನೆಯಲ್ಲೇ ತಯಾರಿಸಿದ ಫ್ರೆಶ್ ಚಾಕೊಲೇಟ್ ಲಭ್ಯವಿದ್ದು ಆರೋಗ್ಯಕ್ಕೂ ಉತ್ತಮವಾಗಿದೆ.

World Chocolate Day 2024: ಹೋಮ್ ಮೇಡ್ ಚಾಕೊಲೇಟ್ ಸವಿಯಬೇಕಾದ್ರೆ ಈ ಸ್ಥಳಗಳಲ್ಲಿ ತಪ್ಪದೇ ಭೇಟಿ ನೀಡಿ
ಸಾಂದರ್ಭಿಕ ಚಿತ್ರ
Follow us on

ನಮ್ಮ ಜೀವನದ ಖುಷಿಯ ಕ್ಷಣದಲ್ಲಿ ಸಿಹಿಯಿರಲೇಬೇಕು. ಅದರಲ್ಲಿ ಪ್ರೀತಿ ಪಾತ್ರರ ಹುಟ್ಟುಹಬ್ಬ ಬಂದಾಗ ವಿವಿಧ ಬಗೆಯ ಚಾಕೊಲೇಟನ್ನು ಉಡುಗೊರೆಯಾಗಿ ನೀಡುತ್ತೇವೆ. ಬಾಯನ್ನು ಸಿಹಿಯಾಗಿಸುವ ಈ ಚಾಕೊಲೇಟ್ ಗೂ ಒಂದು ವಿಶೇಷ ದಿನವಿದೆ. ಪ್ರತಿ ವರ್ಷ ಜುಲೈ 7 ರಂದು ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ಚಾಕಲೇಟ್ ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ. ಕೆಲ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ.

* ಕೊಡಗು : ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳ ಸಾಲಿಗೆ ಸೇರಿರುವ ಕೊಡಗಿನ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ಆದರೆ ಇಲ್ಲಿ ಮಡಿಕೇರಿಗೆ ತೆರಳಿದರೆ ಹೋಮ್ ಮೇಡ್ ಚಾಕೊಲೇಟ್ ಗಳು ಲಭ್ಯವಿದೆ. ಆರೋಗ್ಯಕ್ಕೆ ಉತ್ತಮವೆನಿಸುವ ಈ ಚಾಕೊಲೇಟ್ ಗಳು ಇಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ. ಗೋಲ್ಡನ್‌ ಟೆಂಪಲ್‌ ಗೇಟ್‌ ಉದ್ದಕ್ಕೂ ಇರುವ ಅಂಗಡಿಗಳಲ್ಲಿ ಈ ಹೋಮ್‌ ಮೇಡ್‌ ಚಾಕೋಲೇಟ್‌ ಗಳು ಸಿಗುತ್ತದೆ.

* ಊಟಿ : ಮದುವೆಯಾದ ದಂಪತಿಗಳು ಹನಿಮೂನ್ ಗೆಂದು ಊಟಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸ್ಥಳವು ಹನಿಮೂನ್ ಗೆ ಮಾತ್ರವಲ್ಲದೇ ಹೋಮ್ ಮೇಡ್ ಚಾಕೊಲೇಟ್ ಗೂ ಅಷ್ಟೇ ಫೇಮಸ್ ಆಗಿದೆ. ಮನೆಯಲ್ಲೇ ತಯಾರಿಸಿದ ಕಾಫಿ ಫ್ಲೆವರ್ ಚಾಕೊಲೇಟ್ ಸೇರಿದಂತೆ ಡಾರ್ಕ್ ಚಾಕೊಲೇಟ್ ಸಿಗುತ್ತದೆ. ಹೀಗಾಗಿ ಊಟಿಗೆ ಹೋದವರು ಯಾವುದೇ ಬಣ್ಣಗಳನ್ನು ಹಾಕದೇ ತಯಾರಿಸಿದ ಫ್ರೆಶ್ ಆಗಿರುವ ಚಾಕೊಲೇಟ್ ಗಳನ್ನು ಖರೀದಿ ಮಾಡೇ ಮಾಡುತ್ತಾರೆ.

ಇದನ್ನೂ ಓದಿ: ವಿಶ್ವ ಚಾಕೊಲೇಟ್‌ ದಿನದಂದು ನಿಮ್ಮ ಗರ್ಲ್ ಫ್ರೆಂಡ್​​​​ಗೆ ಈ ರೀತಿ ಸ್ವೀಟ್ ಮೆಸೇಜ್ ಕಳುಹಿಸಿ

* ಕೂಕುನೂರು : ಫ್ರೆಶ್ ಹಾಗೂ ಹೋಮ್ ಮೇಡ್ ಚಾಕೊಲೇಟ್ ಗಳು ಕೂಕುನೂರಿನಲ್ಲಿ ಲಭ್ಯವಿದೆ. ಕೂನೂರಿನ ಗ್ರೀನ್ ಶಾಪ್, ಚಿತ್ತಸ್ ಚಾಕೊಲೇಟ್ ಹಬ್ ಗಳಲ್ಲಿ ಹೋಮ್ ಮೇಡ್ ಚಾಕೊಲೇಟ್ ಗಳನ್ನು ಮಾರಾಟ ಮಾಡಲಾಗುತ್ತದೆ. ಇಲ್ಲಿಗೆ ಭೇಟಿ ನೀಡಿದರೆ ಪ್ರಕೃತಿಯ ಸೌಂದರ್ಯವನ್ನು ಸವಿಯುವುದರೊಂದಿಗೆ ಚಾಕೊಲೇಟನ್ನು ಖರೀದಿ ಮಾಡಬಹುದಾಗಿದೆ.

* ಮುನ್ನಾರ್ : ಕೇರಳದ ಪ್ರಸಿದ್ಧ ತಾಣವಾಗಿರುವ ಮುನ್ನಾರ್ ತನ್ನ ಪ್ರಕೃತಿಯ ಸೌಂದರ್ಯದಿಂದಲೇ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಚಹಾ ಗಿಡಗಳಿಂದ ಕೂಡಿರುವ ಮುನ್ನಾರ್, ಮನೆಯಲ್ಲೇ ತಯಾರಿಸಿದಂತಹ ಹೋಮ್‌ ಮೇಡ್‌ ಕೂಡ ಅಷ್ಟೇ ಫೇಮಸ್ ಆಗಿದೆ. ಮನ್ನಾ ಚಾಕೋಲೆಟ್ ಕಿಚನ್, ಮುನ್ನಾರ್ ಸ್ಪೈಸಸ್‌ನಲ್ಲಿ ಫ್ರೆಶ್ ಚಾಕೋಲೇಟ್ ಗಳು ದೊರೆಯುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:33 pm, Sat, 6 July 24