World Consumer Rights Day 2022: ವಿಶ್ವ ಗ್ರಾಹಕ ಹಕ್ಕುಗಳ ದಿನ ಆಚರಣೆಯ ಇತಿಹಾಸವೇನು? ಇಲ್ಲಿದೆ ಮಾಹಿತಿ

| Updated By: Pavitra Bhat Jigalemane

Updated on: Mar 15, 2022 | 11:10 AM

ಪ್ರತೀ ವರ್ಷ ಮಾರ್ಚ್​ 15ರಂದು ಗ್ರಾಹಕರ ಹಕ್ಕುಗಳು ಮತ್ತು ಅಗತ್ಯತೆಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು, ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ವಿಶ್ವ ಗ್ರಾಹಕರ ದಿನವನ್ನುಆಚರಿಸಲಾಗುತ್ತದೆ.

World Consumer Rights Day 2022: ವಿಶ್ವ ಗ್ರಾಹಕ ಹಕ್ಕುಗಳ ದಿನ ಆಚರಣೆಯ ಇತಿಹಾಸವೇನು? ಇಲ್ಲಿದೆ ಮಾಹಿತಿ
ವಿಶ್ವ ಗ್ರಾಹಕ ಹಕ್ಕುಗಳ ದಿನ
Follow us on

ಗ್ರಾಹಕರ (Consumer)ಹಕ್ಕುಗಳು ಮತ್ತು ಅಗತ್ಯತೆಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು, ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು, ಮಾರುಕಟ್ಟೆಯಲ್ಲಿನ ದುರುಪಯೋಗದ ಬಗ್ಗೆ ಅರಿವು ಮೂಡಿಸುಲು ಜಾಗತಿಕವಾಗಿ ಮಾರ್ಚ್ 15 ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು (World Consumer Rights Day) ಆಚರಿಸಲಾಗುತ್ತದೆ.

ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜಾನ್ ಎಫ್ ಕೆನಡಿ ಮಾರ್ಚ್ 15, 1962 ರಂದು ಗ್ರಾಹಕರ ಹಕ್ಕುಗಳ ಕುರಿತು ಯುಎಸ್​ ಕಾಂಗ್ರೆಸ್‌ಗೆ ಮಾಡಿದ ಭಾಷಣದಿಂದಾಗಿ ವಿಶ್ವ ಗ್ರಾಹಕರ ದಿನ ಆಚರಣೆಗೆ ಬಂದಿದೆ.  ಈ ರೀತಿ ಗ್ರಾಹಕರ ಹಕ್ಕುಗಳ ಬಗ್ಗೆ ಮಾತನಾಡಿದ ಮೊದಲ ವಿಶ್ವ ನಾಯಕ ಜಾನ್ ಎಫ್ ಕೆನಡಿ. ಆ ಬಳಿಕ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು 1983 ರಿಂದ ಮಾರ್ಚ್​15ರಂದು ಆಚರಿಸಲಾಗುತ್ತಿದೆ.

ಈ ವರ್ಷ, ಕನ್ಸ್ಯೂಮರ್ಸ್ ಇಂಟರ್‌ನ್ಯಾಶನಲ್‌ನ ಸದಸ್ಯತ್ವಕ್ಕೆ 100 ದೇಶಗಳಲ್ಲಿ 200 ಗ್ರಾಹಕ ಗುಂಪುಗಳು ಆಯ್ಕೆಯಾಗಿದೆ. ಈ ಬಾರಿ ಫೇರ್ ಡಿಜಿಟಲ್ ಫೈನಾನ್ಸ್ ಅನ್ನು ಜಾಗತಿಕ ವಿಷಯವಾಗಿ ಆಯ್ಕೆ ಮಾಡಲಾಗಿದೆ. 2024 ರ ವೇಳೆಗೆ, ಡಿಜಿಟಲ್ ಬ್ಯಾಂಕಿಂಗ್ ಗ್ರಾಹಕರು 3.6 ಬಿಲಿಯನ್ ಮೀರುವ ನಿರೀಕ್ಷೆಯಿದೆ.

ಭಾರತದಲ್ಲಿನ ಗ್ರಾಹಕರ ಕುಂದುಕೊರತೆಗಳನ್ನು ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಪರಿಹರಿಸುತ್ತದೆ, ಇದು 1988 ರಲ್ಲಿ ಗ್ರಾಹಕ ಸಂರಕ್ಷಣಾ ಕಾಯಿದೆಯಡಿಲ್ಲಿ ಜಾರಿಗೆ ತರಲಾಯಿತು. 1986 ರಲ್ಲಿ ಅಧಿಕೃತವಾಗಿ ಭಾರತದಲ್ಲಿ ವಿಶ್ವ ಗ್ರಾಹಕರ ದಿನವನ್ನು ಆಚರಣೆಗೆ ತರಲಾಯಿತು. ಆಯೋಗವು ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿದೆ.

ಇದನ್ನೂ ಓದಿ:

Negative Thoughts: ಋಣಾತ್ಮಕ ಆಲೋಚನೆಗಳಿಂದ ಹೊರಬರೋದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ