World Creativity and Innovation Day 2022: ವಿಶ್ವ ಸೃಜನಶೀಲತೆ ಮತ್ತು ಆವಿಷ್ಕಾರ ದಿನ; ಏನಿದರ ವಿಶೇಷ?

| Updated By: shivaprasad.hs

Updated on: Apr 21, 2022 | 1:02 PM

World Creativity and Innovation Day 2022 History: ಮಾನವನ ಅಭಿವೃದ್ಧಿಯಲ್ಲಿ ಸೃಜನಶೀಲತೆ ಹಾಗೂ ಆವಿಷ್ಕಾರದ ಪಾತ್ರವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ವಿಶ್ವಸಂಸ್ಥೆ ‘ವಿಶ್ವ ಸೃಜನಶೀಲತೆ ಮತ್ತು ಆವಿಷ್ಕಾರ ದಿನ’ವನ್ನು ಆಚರಿಸುತ್ತದೆ. ವಿವಿಧ ದೇಶಗಳ ನಡುವೆ ಹಾಗೂ ವೈಯಕ್ತಿಕ, ಗುಂಪು ಮಟ್ಟದಲ್ಲಿ ಸೃಜನಶೀಲ ಚಿಂತನೆಯನ್ನು ಪ್ರೇರೇಪಿಸುವುದು ಇದರ ಮುಖ್ಯ ಉದ್ದೇಶ.

World Creativity and Innovation Day 2022: ವಿಶ್ವ ಸೃಜನಶೀಲತೆ ಮತ್ತು ಆವಿಷ್ಕಾರ ದಿನ; ಏನಿದರ ವಿಶೇಷ?
‘ವಿಶ್ವ ಸೃಜನಶೀಲ ಮತ್ತು ಆವಿಷ್ಕಾರ ದಿನ’ (ಪ್ರಾತಿನಿಧಿಕ ಚಿತ್ರ)
Follow us on

ವ್ಯಕ್ತಿಯೊಬ್ಬನ ಸಾಧನೆಗೆ ಕಾರಣವಾಗುವ ಅಂಶಗಳಲ್ಲಿ ಪ್ರಮುಖವಾದವುಗಳೇ ಸೃಜನಶೀಲತೆ ಹಾಗೂ ಆವಿಷ್ಕಾರಗಳು. ಮಾನವನ ಅಭಿವೃದ್ಧಿಗೂ ಇದು ಅತ್ಯಗತ್ಯ. ಮಾನವನ ಅಭಿವೃದ್ಧಿಯಲ್ಲಿ ಸೃಜನಶೀಲತೆ ಹಾಗೂ ಆವಿಷ್ಕಾರದ ಪಾತ್ರವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ವಿಶ್ವಸಂಸ್ಥೆ ‘ವೀಶ್ವ ಸೃಜನಶೀಲತೆ ಮತ್ತು ಆವಿಷ್ಕಾರ ದಿನ’ವನ್ನು (World Creativity and Innovation Day) ಆಚರಿಸುತ್ತದೆ. ವಿವಿಧ ದೇಶಗಳ ನಡುವೆ ಹಾಗೂ ವೈಯಕ್ತಿಕ, ಗುಂಪು ಮಟ್ಟದಲ್ಲಿ ಸೃಜನಶೀಲ ಚಿಂತನೆಯನ್ನು ಪ್ರೇರೇಪಿಸುವುದು ಇದರ ಮುಖ್ಯ ಉದ್ದೇಶ. ಈ ದಿನವನ್ನು ಪ್ರತಿ ವರ್ಷ ಏಪ್ರಿಲ್ 15 ರಿಂದ 21 ಏಪ್ರಿಲ್ ವರೆಗೆ ಆಚರಿಸಲಾಗುತ್ತದೆ. ಏನಿದರ ಮಹತ್ವ ಮತ್ತು ಇತಿಹಾಸ? ವಿಶ್ವಸಂಸ್ಥೆ (United Nations) ಇದರ ಬಗ್ಗೆ ಹೇಳುವುದೇನು? ಇಲ್ಲಿದೆ ಪೂರ್ಣ ಮಾಹಿತಿ.

ಇತಿಹಾಸ:

‘ವಿಶ್ವ ಸೃಜನಶೀಲತೆ ಮತ್ತು ಆವಿಷ್ಕಾರ ದಿನ’ವನ್ನು ಕೆನಡಾದ ಟೊರೊಂಟೊದಲ್ಲಿ ಆರಂಭಿಸಲಾಯಿತು. ಕೆನಡಾದ ಮಾರ್ಸಿ ಸೆಗಲ್ ಅವರು 2001ರ ಮೇ 25 ರಂದು ಇದನ್ನು ಆಚರಿಸಿದರು. ಅವರು 1977 ರಲ್ಲಿ ಯುನೈಟೆಡ್ ಸ್ಟೇಟ್ಸ್ ಬಫಲೋದಲ್ಲಿನ ‘ಸೃಜನಶೀಲ ಅಧ್ಯಯನಗಳ ಅಂತರರಾಷ್ಟ್ರೀಯ ಕೇಂದ್ರ’ದಲ್ಲಿ ವ್ಯಾಸಂಗ ಮಾಡಿದ್ದರು. ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ದಿನವನ್ನು ಆಚರಿಸಲು 2017ರ ಏಪ್ರಿಲ್ 27ರಂದು ನಿರ್ಣಯ ಅಂಗೀಕರಿಸಿತು.

ಮಹತ್ವ:

ಮಾನವ ಅಭಿವೃದ್ಧಿಯ ವಿವಿಧ ಹಂತಗಳಲ್ಲಿ ಸೃಜನಶೀಲತೆ ಮತ್ತು ಆವಿಷ್ಕಾರ ನಿರ್ಣಾಯಕ ಪಾತ್ರ ವಹಿಸಿದೆ. ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು ಏಪ್ರಿಲ್ 21 ರಂದು ‘ವಿಶ್ವ ಸೃಜನಶೀಲತೆ ಮತ್ತು ಆವಿಷ್ಕಾರ ದಿನ’ವನ್ನು ಆಚರಿಸಲು ನಿರ್ಧರಿಸಿತು.

ಸೃಜನಶೀಲತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಾಮಾನ್ಯವಾಗಿ ಎಲ್ಲಾ ಜನರಲ್ಲೂ ಅಷ್ಟಾಗಿ ಅರಿವು ಇಲ್ಲ ಎನ್ನುತ್ತದೆ ವಿಶ್ವಸಂಸ್ಥೆ. ಸಾಮಾಜಿಕ, ಆರ್ಥಿಕ ಮತ್ತು ಸುಸ್ಥಿರ ಅಭಿವೃದ್ಧಿಯ ಸಂದರ್ಭದಲ್ಲಿ ಸಮಸ್ಯೆ-ಪರಿಹಾರದ ಸಂದರ್ಭದಿಂದ ಹಿಡಿದು ಕಲಾತ್ಮಕ ಅಭಿವ್ಯಕ್ತಿಯವರೆಗೆ ಸೃಜನಶೀಲತೆ ಮುಖ್ಯವಾಗಿದೆ. ಹೀಗಾಗಿಯೇ ಇದನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಒಂದೊಂದು ರೀತಿ ವ್ಯಾಖ್ಯಾನಿಸಬಹುದು.

ಸೃಜನಶೀಲತೆ ಮತ್ತು ಸಂಸ್ಕೃತಿಯು ಕೇವಲ ಆರ್ಥಿಕವಾಗಿ ಲಾಭದಾಯಕ ಮಾತ್ರವಲ್ಲ, ಜೀವನಕ್ಕೆ ಹಣದ ಹೊರತಾದ ಒಂದು ಮೌಲ್ಯವನ್ನು ಕೂಡ ತುಂಬುತ್ತದೆ. ಇದು ಸಮಾಜದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ವಿಶ್ವಸಂಸ್ಥೆ ಹೇಳುತ್ತದೆ.

ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಕ್ಷೇತ್ರಗಳನ್ನು ತಮ್ಮ ಆರ್ಥಿಕ ಬೆಳವಣಿಗೆಯ ಯೋಜನೆಗಳ ಭಾಗವಾಗಿಸಲು ಸದಸ್ಯ ರಾಷ್ಟ್ರಗಳನ್ನು ವಿಶ್ವಸಂಸ್ಥೆ ಒತ್ತಾಯಿಸಿದೆ. ಇಂತಹ ಕ್ಷೇತ್ರಗಳು ವಿಶ್ವ ಆರ್ಥಿಕತೆಯ ಅತ್ಯಂತ ಕ್ರಿಯಾತ್ಮಕ ವಲಯಗಳಲ್ಲಿ ಒಂದಾಗಿದೆ ಎಂದು ಅದು ಹೇಳಿದೆ. ಇದಕ್ಕೆ ಅಂಕಿಅಂಶವನ್ನು ನೀಡಿರುವ ವಿಶ್ವಸಂಸ್ಥೆ, ಇಂತಹ ಸಾಂಸ್ಕೃತಿಕ ಮತ್ತು ಸೃಜನಶೀಲ ಕ್ಷೇತ್ರವು $ 2.25 ಶತಕೋಟಿ ಆದಾಯವನ್ನು ಉತ್ಪಾದಿಸುತ್ತದೆ. ಹಾಗೆಯೇ ವಿಶ್ವಾದ್ಯಂತ 29.5 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ: Guru Tegh Bahadur Jayanti 2022: ಗುರು ತೇಜ್ ಬಹದ್ದೂರ್ ಜಯಂತಿ; ಈ ದಿನದ ಇತಿಹಾಸ, ಮಹತ್ವ ಏನು? ಇಲ್ಲಿದೆ ಮಾಹಿತಿ

ಬೇಸಿಗೆ ರಜೆಯಲ್ಲಿರುವ ಮಕ್ಕಳೇ ಶಾಲೆಗೆ ಹೋಗೋಕೆ ಸಿದ್ಧರಾಗಿ; ಶಿಕ್ಷಣ ಇಲಾಖೆಯಿಂದ 22-23ನೇ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಬಿಡುಗಡೆ

Published On - 12:58 pm, Thu, 21 April 22