World Elder Abuse Awareness Day 2024: ಇಳಿವಯಸ್ಸಿನಲ್ಲಿ ಮತ್ತೆ ಮಗುವಾಗುತ್ತೆ ಮನಸ್ಸು, ನಿಂದಿಸುವ ಮುನ್ನ ಯೋಚಿಸಿ

ಹಿರಿಯರನ್ನು ನಿಂದಿಸುವುದು ಹಾಗೂ ನಿರ್ಲಕ್ಷ್ಯ ಮಾಡುವುದರ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಪಂಚದಾದ್ಯಂತ ಜೂನ್‌ 15ರಂದು ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯೂ ಇಲ್ಲಿದೆ.

World Elder Abuse Awareness Day 2024: ಇಳಿವಯಸ್ಸಿನಲ್ಲಿ ಮತ್ತೆ ಮಗುವಾಗುತ್ತೆ ಮನಸ್ಸು, ನಿಂದಿಸುವ ಮುನ್ನ ಯೋಚಿಸಿ
World Elder Abuse Awareness Day
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 15, 2024 | 11:00 AM

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ವೃದ್ಧಾಪ್ಯವನ್ನು ಅನುಭವಿಸಲೇ ಬೇಕು. ಆದರೆ ಮಕ್ಕಳಿಗೆ ತಮ್ಮ ತಂದೆ ತಾಯಿಯರು ಹೇಗೆ ಆಸರೆಯಾಗಿರುತ್ತಾರೋ ಅದೇ ರೀತಿ ವಯಸ್ಸಾದ ವೇಳೆ ತಂದೆ ತಾಯಿಯನ್ನು ನೋಡಿಕೊಳ್ಳುವುದು ಪ್ರತಿಯೊಬ್ಬರ ಮಕ್ಕಳ ಕರ್ತವ್ಯ ಕೂಡ ಆಗಿದೆ. ಆದರೆ ಈಗಿನವರಿಗೆ ತಂದೆ ತಾಯಿಗಳು ಇಳಿ ವಯಸ್ಸಿಗೆ ತಲುಪಿದ ಮೇಲೆ ಅವರನ್ನು ನೋಡಿಕೊಳ್ಳುವುದೆಂದರೆ ಕಷ್ಟದ ಕೆಲಸ. ಹಿರಿ ಜೀವಗಳನ್ನು ಕಂಡರೆ ಅಸಡ್ಡೆ, ಬುದ್ದಿವಾದ ಹೇಳಿದರೂ ಅದನ್ನು ನಿರ್ಲಕ್ಷ್ಯ ಮಾಡುತ್ತೇವೆ. ಅದಲ್ಲದೇ ಆಸ್ತಿಗಾಗಿ ಹಿರಿಜೀವಗಳನ್ನು ನಿಂದಿಸುವುದು, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುವ ಎಷ್ಟೋ ಮಕ್ಕಳಿದ್ದಾರೆ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಹೀಗಾಗಿ ಹಿರಿಯರ ನಿಂದನೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನದ ಇತಿಹಾಸ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಡಿಸೆಂಬರ್ 2011 ರಲ್ಲಿ ಯುಎನ್ ರೆಸಲ್ಯೂಶನ್ 66/127 ಅನ್ನು ಅಂಗೀಕರಿಸುವ ಮೂಲಕ ವಿಶ್ವ ಹಿರಿಯ ನಿಂದನೆ ಜಾಗೃತಿ ದಿನವನ್ನು ಜೂನ್ 15 ರಂದು ಆಚರಿಸುವ ಬಗ್ಗೆ ಅಧಿಕೃತವಾಗಿ ಘೋಷಿಸಿತು. ಈ ನಿರ್ಣಯಕ್ಕೆ ಸದಸ್ಯ ರಾಷ್ಟ್ರಗಳು, ಸಂಸ್ಥೆಗಳು ಹಿರಿಯರ ನಿಂದನೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ತಡೆಗಟ್ಟುವಿಕೆಯನ್ನು ಉತ್ತೇಜಿಸಲು ವಾರ್ಷಿಕವಾಗಿ ಈ ದಿನವನ್ನು ಆಚರಿಸಲು ಕರೆ ನೀಡಿತು. ಅಂದಿನಿಂದ ವಿಶ್ವಸಂಸ್ಥೆಯಲ್ಲಿ ‘ಇಂಟರ್ನ್ಯಾಷನಲ್ ನೆಟ್‌ವರ್ಕ್ ಫಾರ್ ದಿ ಪ್ರಿವೆನ್ಶನ್ ಆಫ್ ಎಲ್ಡರ್ ಅಬ್ಯೂಸ್’ ಮತ್ತು ‘ವಿಶ್ವ ಆರೋಗ್ಯ ಸಂಸ್ಥೆ’ ಜಂಟಿಯಾಗಿ ಜೂನ್ 15 ರಂದು ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ವಿಶ್ವ ಗಾಳಿ ದಿನ; ವಾಯು ಮಾಲಿನ್ಯ ತಡೆಗಟ್ಟಿ, ಪರಿಸರ ರಕ್ಷಿಸೋಣ

ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನದ ಮಹತ್ವ ಹಾಗೂ ಆಚರಣೆ

ಹಿರಿಯರ ನಿಂದನೆ ಜಾಗೃತಿ ದಿನದ ಮುಖ್ಯ ಉದ್ದೇಶವೇ ಜಾಗತಿಕ ಮಟ್ಟದಲ್ಲಿ ವೃದ್ಧರಿಗೆ ಮಾನಸಿಕ ಹಾಗೂ ದೈಹಿಕವಾದ ಬೆಂಬಲವನ್ನು ನೀಡುವುದಾಗಿದೆ. ಈ ಇಳಿ ವಯಸ್ಸಿನಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಉತ್ತಮ ಚಿಕಿತ್ಸೆ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಹಾಗೂ ಅವರ ಅಗತ್ಯತೆಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಅದರೊಂದಿಗೆ ನಿರ್ಲಕ್ಷ್ಯ ಅಥವಾ ದುರ್ವರ್ತನೆಯನ್ನು ಅನುಭವಿಸಿದ ಹಿರಿಯ ವಯಸ್ಕರಿಗೆ ಬೆಂಬಲ ಮತ್ತು ಸಹಾಯವನ್ನು ಒದಗಿಸಲು ಹಲವಾರು ಸಮುದಾಯಗಳನ್ನು ಪ್ರೋತ್ಸಾಹಿಸುವ ಕೆಲಸಗಳು ನಡೆಯುತ್ತವೆ. ಈ ಮಹತ್ವದ ದಿನದಂದು ಸರ್ಕಾರ ಸೇರಿದಂತೆ ವಿವಿಧ ಸಂಸ್ಥೆಗಳು ಸಮ್ಮೇಳನಗಳು, ಸೆಮಿನಾರ್ ಗಳು, ಕಾರ್ಯಾಗಾರಗಳು, ಜಾಗೃತಿ ಅಭಿಯಾನಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: