AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Secrets : ವಿವಾಹಿತ ಹೆಣ್ಣು ತನ್ನ ಗಂಡನ ಬಳಿ ಈ ವಿಚಾರಗಳ ಬಗ್ಗೆ ಬಾಯಿ ಬಿಡುವುದೇ ಇಲ್ವಂತೆ

ಹೆಣ್ಣು ಚಂಚಲೆ, ಹೀಗಾಗಿ ಅರ್ಥ ಮಾಡಿಕೊಳ್ಳುವುದೇ ಕಷ್ಟ ಎನ್ನುವುದು ಅನೇಕರ ಅಭಿಪ್ರಾಯ. ಆದರೆ ತನ್ನ ಜೀವಮಾನವನ್ನು ತನ್ನ ಪತಿ ಮಕ್ಕಳ ಸಂತೋಷಕ್ಕಾಗಿ ಮೀಸಲಿಡುವ ಹೆಣ್ಣಿಗೂ ಆಸೆ ಆಕಾಂಕ್ಷೆಗಳಿರುತ್ತದೆ. ಎಷ್ಟೇ ನೋವಿದ್ದರೂ ತಾನೇ ಅನುಭವಿಸಿಕೊಂಡು ಎಲ್ಲರ ಮುಂದೆ ನಗುವ ಮುಖವಾಡ ಧರಿಸಿಕೊಂಡಿರುತ್ತಾಳೆ. ಅದಲ್ಲದೇ, ತನ್ನ ಗಂಡನೇ ಸರ್ವಸ್ವ ಎಂದು ಭಾವಿಸಿಕೊಳ್ಳುವ ಹೆಣ್ಣು, ಆತನ ಬಳಿಯೂ ಕೆಲವು ರಹಸ್ಯಗಳನ್ನು ಕಾಪಾಡುತ್ತಾಳೆ. ಈ ಕೆಲ ವಿಚಾರಗಳ ಬಗ್ಗೆ ಆಕೆಯು ತನ್ನ ಪತಿಯ ಬಳಿಯು ಹೇಳಿಕೊಳ್ಳುವುದಿಲ್ಲವಂತೆ.

Women Secrets : ವಿವಾಹಿತ ಹೆಣ್ಣು ತನ್ನ ಗಂಡನ ಬಳಿ ಈ ವಿಚಾರಗಳ ಬಗ್ಗೆ ಬಾಯಿ ಬಿಡುವುದೇ ಇಲ್ವಂತೆ
Women Secrets
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ|

Updated on: Jun 14, 2024 | 6:10 PM

Share

ಮದುವೆ ಎನ್ನುವುದು ಎರಡು ಕುಟುಂಬಗಳ ಬೆಸುಗೆ ಮಾತ್ರವಲ್ಲದೇ ಎರಡು ಮನಸ್ಸುಗಳ ಸಮ್ಮಿಲನ. ಮದುವೆ ಎನ್ನುವ ಬಂಧದಿಂದ ಹೆಣ್ಣು ಗಂಡಿನ ಬದುಕಿನಲ್ಲಿ ಮಹತ್ತರದ ಬದಲಾವಣೆಯಾಗುತ್ತದೆ. ಆದರೆ ಹೆಣ್ಣಾದವಳು ಗಂಡನ ಜೊತೆಗೆ ಎಷ್ಟೇ ಆತ್ಮೀಯವಾಗಿದ್ದರೂ ಕೂಡ ಈ ಕೆಲವುದರ ಬಗ್ಗೆ ಬಾಯಿಬಿಟ್ಟು ಮಾತನಾಡುವುದೇ ಇಲ್ಲ. ಅಷ್ಟೇ ಅಲ್ಲದೇ ಈ ಬಗ್ಗೆ ಮಾತನಾಡಿದರೆ ಪತಿಯು ತನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎನ್ನುವ ಅಳುಕೊಂದು ಆಕೆಯನ್ನು ಕಾಡುತ್ತದೆ. ಅದಲ್ಲದೇ ಸಂಸಾರವು ಚೆನ್ನಾಗಿ ಸಾಗಬೇಕಾದರೆ ಈ ಕೆಲವು ವಿಚಾರಗಳ ಬಗ್ಗೆ ಮಾತನಾಡದೇ ಇರುವುದು ಒಳ್ಳೆಯದೇ ಎಂದುಕೊಳ್ಳುತ್ತಾಳೆ.

ಪತಿಯ ನಿರ್ಧಾರದ ಕುರಿತು ಮರುಮಾತನಾಡಲ್ಲ:

ಪತ್ನಿಯಾದವಳಿಗೆ ಇಷ್ಟ ಕಷ್ಟಗಳಿವೆ. ಆದರೆ ಕುಟುಂಬದ ವಿಚಾರದಲ್ಲಿ ಪತಿಯೂ ತೆಗೆದುಕೊಳ್ಳುವ ನಿರ್ಧಾರಗಳು ಇಷ್ಟವಾಗದಿದ್ರೂ ಮಹಿಳೆಯೂ ಮರು ಉತ್ತರ ನೀಡದೇ ಅದನ್ನು ಒಪ್ಪಿಕೊಳ್ಳುತ್ತಾಳೆ. ಅದಲ್ಲದೇ ಪತಿಯ ನಿರ್ಧಾರದ ಬಗ್ಗೆ ತನ್ನ ಮನಸ್ಸಲ್ಲಿ ಏನಿದೆ ಎನ್ನುವುದನ್ನು ಗಂಡನ ಬಳಿ ಹೇಳಿಕೊಳ್ಳುವುದೇ ಇಲ್ಲ.

ಹಳೆಯ ಸಂಬಂಧದ ಬಗ್ಗೆ ಹೇಳಲ್ಲ :

ಹೆಣ್ಣು ಮಕ್ಕಳು ಮದುವೆಗೂ ಮುಂಚಿತವಾಗಿ ತಾವೇನಾದರೂ ಪ್ರೀತಿಯಲ್ಲಿ ಬಿದ್ದಿದ್ದರೆ, ಹಳೆಯ ಪ್ರೇಮಿ ಅಥವಾ ಹಳೆಯ ಪ್ರೇಮದ ಬಗ್ಗೆ ತನ್ನ ಪತಿಗೆ ಹೇಳಿಕೊಳ್ಳುವುದಿಲ್ಲ. ಸಂಸಾರದಲ್ಲಿ ಬಿರುಕು ಮೂಡಬಹುದು ಎನ್ನುವ ಭಯವು ಆಕೆಯನ್ನು ಕಾಡಬಹುದು. ಹಳೆಯ ನೆನಪುಗಳನ್ನು ನೆನೆದು ಒಳಗೊಳಗೆ ಸಂತೋಷಪಟ್ಟುಕೊಳ್ಳುತ್ತಾಳೆ. ಅಷ್ಟೇ ಅಲ್ಲದೇ ತನ್ನ ಹಳೆಯ ಪ್ರೇಮಿ ನೆನಪಾದರೂ ಅದನ್ನು ಹೇಳದೇನೇ ತನ್ನೊಳಗೆಯೇ ಇಟ್ಟುಕೊಳ್ಳುತ್ತಾಳೆ.

ತನ್ನ ಕನಸಿನ ಜೀವನದ ಬಗ್ಗೆ ಮಾತನಾಡಲ್ಲ :

ಒಂದು ಹೆಣ್ಣು ಮದುವೆಯ ಮುಂಚೆಯೇ ತನ್ನ ವೈವಾಹಿಕ ಜೀವನವು ಆಗಿರಬೇಕು, ಹೀಗಿರಬೇಕು ಎಂದುಕೊಂಡಿರುತ್ತಾಳೆ. ಆದರೆ ಆಕೆಯು ಅಂದುಕೊಂಡಂತೆ ಆಗದೇ ಇದ್ದರೆ ಆ ಬಗ್ಗೆಯೂ ತನ್ನ ಗಂಡನ ಬಳಿ ಹೇಳಲ್ಲ. ತನ್ನ ಕನಸಿನ ಜೀವನವ ಆಸೆಯನ್ನು ಬದಿಗೊತ್ತಿ ಪತಿಯ ಖುಷಿಯಲ್ಲಿ ತನ್ನ ಖುಷಿಯನ್ನು ಕಾಣಲು ಪ್ರಯತ್ನಿಸುತ್ತಾಳೆ.

ಅನಾರೋಗ್ಯ ಕಾಡಿದಾಗ ಹೇಳಿಕೊಳ್ಳುವುದಿಲ್ಲ :

ಮಹಿಳೆಯೂ ಪುರುಷರ ಬಳಿ ತನ್ನ ಆರೋಗ್ಯ ಸರಿಯಿಲ್ಲ ಎಂದು ಹೇಳಿಕೊಳ್ಳುವುದಿಲ್ಲ. ಅನಾರೋಗ್ಯವಿದ್ದರೂ ಮನೆಯ ಎಲ್ಲಾ ಕೆಲಸಗಳನ್ನು ತಾನೇ ಮಾಡುತ್ತಾಳೆ. ಪತಿಯೇ ಎಲ್ಲವನ್ನು ಅರಿತುಕೊಂಡು ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ ಎಂದುಕೊಳ್ಳುತ್ತಾಳೆ. ಮುಟ್ಟಿನ ಸಮಯದಲ್ಲಿ ಗಂಡನ ಆರೈಕೆಯೂ ನನಗೆ ಬೇಕು ಎಂದು ಮನಸ್ಸಲ್ಲಿ ಅಂದುಕೊಳ್ಳುತ್ತಾಳೆಯೇ ಹೊರತು ಅದನ್ನು ಕೂಡ ಹೇಳಿಕೊಳ್ಳುವುದಿಲ್ಲ.

ಇದನ್ನೂ ಓದಿ: ಅಂಬಾನಿ ಕುಟುಂಬದ ಸದಸ್ಯರು ಕುಡಿಯುವ 1 ಲೀ. ಹಾಲಿನ ಬೆಲೆ 152 ರೂ. ;ಯಾಕಿಷ್ಟು ದುಬಾರಿ ಗೊತ್ತಾ?

ಪರಪುರುಷನು ಚೆನ್ನಾಗಿ ಕಂಡರೂ ಹೇಳಲ್ಲ :

ಗಂಡನಾದವನು ಮದುವೆಯಾದ ಬಳಿಕ ಪತ್ನಿಯ ಬಳಿಯೇ ಪರಸ್ತ್ರೀಯ ಸೌಂದರ್ಯವನ್ನು ಹೊಗಳುತ್ತಾನೆ. ಆದರೆ ಹೆಣ್ಣು ಆಗಲ್ಲ, ಎಷ್ಟೇ ಸುಂದರವಾದ ವ್ಯಕ್ತಿ ಎದುರಿಗೆ ಬಂದರೂ ಆತನನ್ನು ನೋಡಿ ಒಳಗೊಳಗೆಯೇ ಮೆಚ್ಚುಗೆ ವ್ಯಕ್ತಪಡಿಸುತ್ತಾಳೆಯೇ ಹೊರತು ಪತಿಯ ಮುಂದೆ ಪರಪುರುಷನನ್ನು ಹೊಗಳುವುದಿಲ್ಲ. ತನ್ನ ಗಂಡನು ತನ್ನ ಬಗ್ಗೆ ತಪ್ಪು ತಿಳಿದುಕೊಂಡರೆ ಎನ್ನುವ ಭಯವು ಕಾಡುತ್ತಿರುತ್ತದೆ.

ಕೂಡಿಟ್ಟ ಹಣದ ಬಗ್ಗೆ ಲೆಕ್ಕ ಕೊಡಲ್ಲ:

ಸಾಮಾನ್ಯವಾಗಿ ಮಹಿಳೆಯರು ಗಂಡನಿಗೆ ಗೊತ್ತಿಲ್ಲದೇ ಕೂಡಿಟ್ಟ ಹಣದ ಬಗ್ಗೆ ಕೇಳಿದರೆ, ಯಾರಿಗೂ ಕೂಡ ಸರಿಯಾದ ಲೆಕ್ಕ ಸಿಗಲ್ಲ. ಮಹಿಳೆಯರು ಹಣ ಉಳಿತಾಯದ ವಿಚಾರದಲ್ಲಿ ತುಂಬಾ ಜಾಣರು. ಉಳಿತಾಯದ ದುಡ್ಡನ್ನು ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಬಂದಾಗ ಬಳಸುತ್ತಾರೆ. ಮನೆಯ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ತಾವು ಕೂಡಿಟ್ಟ ಹಣದ ಬಗ್ಗೆ ಹೇಳುವುದೇ ಇಲ್ಲ. ತನ್ನ ಬಳಿ ಹಣವಿದೆಯೆಂದು ಹೇಳಿಕೊಂಡರೂ ಒಟ್ಟು ಹಣದ ಬಗ್ಗೆ ಗಂಡನ ಮುಂದೆ ಹೇಳಲ್ಲ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್