Weight Loss Tips : ತುಂಬಾ ದಪ್ಪ ಇದ್ದೀರಾ? ತೆಳ್ಳಗಾಗಲು ಈ ಆಹಾರಗಳನ್ನು ದಿನನಿತ್ಯ ಸೇವಿಸಿ

ಈಗಿನವರ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಲ್ಲಿನ ಬದಲಾವಣೆಯಿಂದ ಅತಿಯಾದ ತೂಕದ ಸಮಸ್ಯೆ ಎಲ್ಲರಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ದಪ್ಪ ಇದ್ದವರಿಗೆ ತೂಕ ಇಳಿಸಿಕೊಳ್ಳುವುದು ಹೇಗೆ ಅನ್ನೋ ಚಿಂತೆ. ಆದರೆ ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಈ ಕೆಲವು ಆಹಾರವನ್ನು ನಿಯಮಿತವಾಗಿ ಸೇವಿಸಿದರೆ ದಪ್ಪ ಇರುವವರು ಸ್ಲಿಮ್ ಆಗುವುದೇನು ಕಷ್ಟವಲ್ಲ.

Weight Loss Tips : ತುಂಬಾ ದಪ್ಪ ಇದ್ದೀರಾ? ತೆಳ್ಳಗಾಗಲು ಈ ಆಹಾರಗಳನ್ನು ದಿನನಿತ್ಯ ಸೇವಿಸಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 14, 2024 | 2:19 PM

ಕೆಲವರಿಗೆ ತೆಳ್ಳಗಿದ್ದೇನೆ ದಪ್ಪ ಆಗೋದು ಹೇಗೆ ಅನ್ನೋ ಟೆನ್ಶನ್. ಇನ್ನು ಕೆಲವರು ದಪ್ಪ ಇದ್ದೇನೆ ಸ್ಲಿಮ್ ಆಗೋದು ಹೇಗೆ ಅನ್ನೋ ಯೋಚನೆ. ಆದರೆ ದೇಹದ ತೂಕ ಹೆಚ್ಚಳು ಈಗ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ದೇಹದ ಪ್ರತಿಯೊಂದು ಭಾಗದಲ್ಲೂ ಬೊಜ್ಜು ಕಾಣಿಸಿಕೊಳ್ಳಲಾರಂಭಿಸುತ್ತದೆ. ಇದರಿಂದ ತಮ್ಮ ದೇಹದ ಬಗ್ಗೆ ಕೀಳರಿಮೆ ಮೂಡಬಹುದು. ಕೆಲವರು ತೆಳ್ಳಗಾಗಲು ನಾನಾ ರೀತಿಯ ಸರ್ಕಸ್ ಮಾಡುತ್ತಲೇ ಇರುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಪೌಡರ್ ಸೇರಿದಂತೆ ಔಷಧಿಗಳ ಸೇವನೆಯನ್ನು ಮಾಡುತ್ತಾರೆ. ಆದರೆ ಮನೆಯಲ್ಲೇ ಆಹಾರ ಕ್ರಮದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡರೆ ದಪ್ಪಗಿರುವವರು ತೆಳ್ಳಗಾಗಬಹುದು.

ತೂಕ ಇಳಿಕೆಗೆ ಈ ಆಹಾರಗಳನ್ನು ಸೇವಿಸಿ

* ಹಣ್ಣು ಹಂಪಲು : ಕಡಿಮೆ ಕ್ಯಾಲೊರಿ, ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಋತುಮಾನದ ಹಣ್ಣುಗಳ ಸೇವನೆಯತ್ತ ಹೆಚ್ಚು ಗಮನ ಕೊಡುವುದು ಒಳ್ಳೆಯದು. ಈ ಹಣ್ಣುಗಳು ಜೀರ್ಣಕ್ರಿಯೆಗೆ ಸಹಕಾರಿದ್ದು, ಹಸಿವಾಗುವುದನ್ನು ತಪ್ಪಿಸಿ ದೀರ್ಘಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.

* ಮೊಳಕೆ ಕಾಳು : ನಿಯಮಿತವಾಗಿ ಮೊಳಕೆ ಕಾಳುಗಳಲ್ಲಿ ಸೇವನೆಯು ದೇಹದ ತೂಕವನ್ನು ನಿಯಂತ್ರಣದಲ್ಲಿಡಬಹುದು. ಇದರಲ್ಲಿ ನಾರಿನಾಂಶ ಹಾಗೂ ಪ್ರೊಟೀನ್ ಅಧಿಕವಾಗಿದ್ದು ತೂಕ ಇಳಿಕೆ ಸೇರಿದಂತೆ ಮಧುಮೇಹ ನಿಯಂತ್ರಣ ಮತ್ತು ರಕ್ತದೊತ್ತಡ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಬೆಳಗ್ಗೆ ಮೊಳಕೆ ಕಾಳನ್ನು ಸೇವಿಸುವುದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ.

* ಮಖಾನ : ಪ್ರತಿದಿನ ಮಖಾನ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯದೊಂದಿಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಈ ಮಖಾನವನ್ನು ತುಪ್ಪದಲ್ಲಿ ಹುರಿದು ಸೇವಿಸಿದರೆ ಬೇಗನೆ ಹಸಿವಾಗುವುದಿಲ್ಲ.

ಇದನ್ನೂ ಓದಿ: ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಮಿಕ್ಸಿಗೆ ಹಾಕಿ ರುಬ್ಬಬೇಡಿ, ಯಾಕೆ ಗೊತ್ತಾ?

* ಓಟ್ ಮೀಲ್ : ದೇಹಕ್ಕೆ ಶಕ್ತಿ ತುಂಬುವ ಓಟ್ ಮೀಲ್ ಸೇವನೆಯು ಉತ್ತಮ ಆಯ್ಕೆಯಾಗಿದೆ. ಹೀಗಾಗಿ ತೂಕ ಇಳಿಸಿಕೊಳ್ಳಬೇಕೆನ್ನುವವರು ಓಟ್ ಮೀಲ್ ದಿನನಿತ್ಯ ಸೇವಿಸುವುದರಿಂದ ತೂಕ ನಷ್ಟ ಮಾಡಿಕೊಳ್ಳಬಹುದು.

* ಮಜ್ಜಿಗೆ : ಮಜ್ಜಿಗೆ ತುಂಬಾ ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿದ್ದು, ದಿನನಿತ್ಯದ ಇದರ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. * ಪುದೀನಾ ಹಾಗೂ ನಿಂಬೆ ಚಹಾ : ತೂಕ ಇಳಿಸಿಕೊಳ್ಳಲು ಈ ಚಹಾ ಸೇವನೆ ಮಾಡುವುದು ಪರಿಣಾಮಕಾರಿಯಾಗಿದೆ. ಈ ಪುದೀನಾ ಎಲೆಗಳು ಹಸಿವನ್ನು ಕಡಿಮೆ ಮಾಡಿ, ದೀರ್ಘಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: