World Environment Day 2021: ಪರಿಸರದ ಕುರಿತಾಗಿ ಜಾಗೃತಿ ಮೂಡಿಸುವ ಆಚರಣೆಗಳು ಯಾವುವು?

| Updated By: shruti hegde

Updated on: Jun 04, 2021 | 11:30 AM

ನೈಸರ್ಗಿಕ ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಳ್ಳುವುದರ ಪರಿಣಾಮವೇ ನಮ್ಮ ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ಏರು-ಪೇರು. ಪ್ರಸ್ತುತದಲ್ಲಿ ಜಾಗತಿಕ ತಾಪಮಾನ ಹಾಗೂ ಇತರ ರೋಗಗಳಿಂದ ಆಗುತ್ತಿರುವ ಹಾನಿಯನ್ನು ಎದುರಿಸಬೇಕಾಗುತ್ತಿದೆ. ಹೀಗಿರುವಾಗ ಪರಿಸರ ಕಾಳಜಿಯ ಕುರಿತಾಗಿ ಗಮನಹರಿಸಲೇ ಬೇಕಿದೆ.

World Environment Day 2021: ಪರಿಸರದ ಕುರಿತಾಗಿ ಜಾಗೃತಿ ಮೂಡಿಸುವ ಆಚರಣೆಗಳು ಯಾವುವು?
ವಿಶ್ವ ಪ್ರಕೃತಿ ಸಂರಕ್ಷಣಾ ದಿನ
Follow us on

ಪ್ರತಿಯೊಂದು ಸಂಪನ್ಮೂಲಕ್ಕೂ ಮಾನವರು ಪ್ರಕೃತಿಯ ಮೇಲೆ ಅವಲಂಬಿತರಾಗಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಳ್ಳುವುದರ ಪರಿಣಾಮವೇ ನಮ್ಮ ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ಏರು-ಪೇರು. ಪ್ರಸ್ತುತದಲ್ಲಿ ಜಾಗತಿಕ ತಾಪಮಾನ ಹಾಗೂ ಇತರ ರೋಗಗಳಿಂದ ಆಗುತ್ತಿರುವ ಹಾನಿಯನ್ನು ಎದುರಿಸಬೇಕಾಗುತ್ತಿದೆ. ಪರಿಸರ ಸಂರಕ್ಷಣೆಯ ಕುರಿತಾಗಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಜೂನ್​ 5ರಂದು ವಿಶ್ವ ಪರಿಸರ ದಿನವೆಂದು ಆಚರಿಸಲಾಗುತ್ತದೆ. ಹೀಗಿರುವಾಗ ಪರಿಸರ ಕಾಳಜಿಯ ಕುರಿತಾಗಿ ಗಮನಹರಿಸಲೇ ಬೇಕಿದೆ.

ಆದರೆ, ಕರ್ನಾಟಕದಲ್ಲಿ ಕೊವಿಡ್ ಸೋಂಕು ಕಡಿಮೆಯಾಗದ ಕಾರಣ ಜೂನ್ 5ರಂದು ರಾಜ್ಯ ಸರ್ಕಾರದ ವತಿಯಿಂದ ಆಚರಿಸಬೇಕಿದ್ದ ವಿಶ್ವ ಪರಿಸರ ದಿನಾಚರಣೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿವರ್ಷವೂ ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸುವ ಸಂಪ್ರದಾಯವಿದ್ದು, ಈ ದಿನವನ್ನು ವನಮಹೋತ್ಸವ ದಿನ ಎಂದೂ ಕರೆಯಲಾಗುತ್ತದೆ. ಈ ವರ್ಷ ಕೊವಿಡ್ ಪಿಡುಗು ಜೋರಾಗಿರುವ ಕಾರಣ ರಾಜ್ಯ ಸರ್ಕಾರ ಜೂನ್ 5ರಂದು ನಡೆಯಬೇಕಿದ್ದ ವಿಶ್ವ ಪರಿಸರ ದಿನವನ್ನು ತಾತ್ಕಾಲಿಕವಾಗಿ ಕರ್ನಾಟಕ ಸರ್ಕಾರ ಮುಂದೂಡಿದೆ.

1972-73ನೇ ಸಾಲಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. 1974ನೇ ಇಸವಿಯಿಂದ ಜೂನ್ 5ರಂದು ವಿಶ್ವ ಆರೋಗ್ಯ ದಿನವನ್ನಾಗಿ ಈವರೆಗೂ ಆಚರಿಸಲಾಗುತ್ತಿದೆ. ಭಾರತ ಮತ್ತು ಕರ್ನಾಟಕದಲ್ಲಂತೂ ವಿಶ್ವ ಪರಿಸರ ದಿನವನ್ನು ಶಾಲೆ, ಕಾಲೇಜು, ಸಂಘ ಸಂಸ್ಥೆಗಳು ಮತ್ತು ಪರಿಸರ ಪ್ರೇಮಿಗಳು ಅತ್ಯಂತ ಸಕ್ರಿಯವಾಗಿ ಆಚರಿಸುತ್ತಾರೆ.

ಪರಿಸರದ ಕುರಿತಾಗಿ ಜಾಗೃತಿ ಮೂಡಿಸುವ ಆಚರಣೆಗಳು
ವಿಶ್ವ ಬೈಸಿಕಲ್ ದಿನ
ಜೂನ್​ 3ರಂದು ಪ್ರತೀ ವರ್ಷ ವಿಶ್ವ ಸೈಕಲ್​ ದಿನವನ್ನು ಆಚರಿಸುತ್ತೇವೆ. ಪರಿಸರ ಸ್ನೇಹಿಯಾಗಿ, ಕಡಿಮೆ ಖರ್ಚಿನಲ್ಲಿ ಜನರ ಆರೋಗ್ಯವನ್ನು ಸುಧಾರಿಸುವ ಒಂದು ಉಪಯುಕ್ತ ಸಾಧನವಿದು. ಹಾಗೂ ಯಾವುದೇ ರೀತಿಯಲ್ಲಿ ಸೈಕಲ್​ ಉಪಯೋಗಿಸುವುದರಿಂದ ಪರಿಸರಕ್ಕೆ ಹಾನಿಯುಂಟಾಗುವುದಿಲ್ಲ.

ವಿಶ್ವ ಸಾಗರ ದಿನ
ಸಾಗರದ ಸಂರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸುವ ದೂಷ್ಟಿಯಿಂದ ಜೂನ್​ 17ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ.

ಮರಳುಗಾರಿಕೆ ಮತ್ತು ಬರವನ್ನು ಎದುರಿಸಲು ವಿಶ್ವ ದಿನ
ಸುಸ್ಥಿರ ಭೂ ನಿರ್ವಹಣಾ ಕ್ಷೇತ್ರದಲ್ಲಿ ದೇಶಗಳು ಕೈಗೊಂಡ ಕಾರ್ಯಕ್ರಮ ಮತ್ತು ಅಭಿವೃದ್ಧಿಯ ನೆನಪಿಗಾಗಿ ಜೂನ್​ 17ರಂದು ಮರುಭೂಮೀಕರಣ ಮತ್ತು ಬರವನ್ನು ಎದುರಿಸಲು ವಿಶ್ವ ದಿನವೆಂದು ಆಚರಿಸಲಾಗುತ್ತದೆ.

ವಿಶ್ವ ಮಳೆಕಾಡು ದಿನ
ಪ್ರಸ್ತುತ ಜಗತ್ತು ಮಳೆಕಾಡಿನ ಸವಕಳಿಯನ್ನು ಎದುರಿಸುತ್ತಿದೆ. ಪ್ರಕೃತಿ ಎದುರಿಸುತ್ತಿರುವ ಅತಿದೊಡ್ಡ ಬೆದರಿಕೆಯಿದು. ಮಳೆಕಾಡನ್ನು ರಕ್ಷಿಸಲು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮತ್ತು ಕ್ರಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದಾಗಿ ಜೂನ್​ 22ರಂದು ಮಳೆಕಾಡು ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ:

World Environment Day: ಜೂನ್ 5ರಂದು ನಡೆಯಬೇಕಿದ್ದ ವಿಶ್ವ ಪರಿಸರ ದಿನ ಆಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದ ಸರ್ಕಾರ

Actor Vivek: ಕೇಂದ್ರ ಸರ್ಕಾರದಿಂದ ಪರಿಸರ ಪ್ರೇಮಿ ನಟ ವಿವೇಕ್‌ಗೆ ವಿಭಿನ್ನ ಗೌರವ…?

Published On - 11:24 am, Fri, 4 June 21