World Food Day: ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ ಯುವಜನತೆ

ಇತ್ತೀಚಿಗೆ ಯುವಜನತೆ ಜಂಕ್ ಫುಡ್ ನ ಹಿಂದೆ ಬಿದ್ದು  ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಜಂಕ್ ಫುಡ್ ಗಳಿಂದ ಉತ್ತಮ ಆರೋಗ್ಯದ ಕೊರತೆ ಕಾಡುತ್ತಿದೆ.

World Food Day: ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ ಯುವಜನತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Oct 16, 2022 | 8:04 AM

ಜಗತ್ತಿನಲ್ಲಿ ಪ್ರತಿನಿತ್ಯ ಆಹಾರವಿಲ್ಲದೆ ಸಾವಿರಾರು ಜನ ಸಾಯ್ತಾ ಇದ್ದಾರೆ. ಅದರ ವಿರುದ್ಧ ಹೋರಾಡಲೆಂದು ಇರುವುದೇ ವಿಶ್ವ ಆಹಾರ ದಿನ. 1945ರಲ್ಲಿ ವಿಶ್ವಸಂಸ್ಥೆಯು ಅಕ್ಟೋಬರ್ 16ರಂದು ಕೃಷಿ ಸಂಸ್ಥೆಯ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಆಹಾರ ದಿನವನ್ನು ಆಚರಿಸಲಾಗುತ್ತಿದೆ. ಆಹಾರ ಎನ್ನುವುದು ಮಾನವನ ಬದುಕಲು ಬೇಕಾಗಿರುವ ಬಹಳ ಪ್ರಮುಖ ಅಂಶವಾಗಿದೆ. ಮನುಷ್ಯ ಪ್ರತಿನಿತ್ಯ ತನ್ನ ಜೀವನದಲ್ಲಿ ಹೋರಾಟ ನಡೆಸುವುದೇ ಒಂದು ಹೊತ್ತಿನ ಆಹಾರಕ್ಕಾಗಿ. ತುತ್ತು ಅನ್ನವು ಕೂಡ ಒಬ್ಬನ ಪ್ರಾಣ ಉಳಿಸಬಹುದು. ಇವತ್ತು ದೇಶದಲ್ಲಿ ಪ್ರತಿನಿತ್ಯ ಹಸಿವಿನಿಂದ ಸಾಕಷ್ಟು ಜನ ಸಾಯ್ತಾ ಇದ್ದಾರೆ. ಇದರ ವಿರುದ್ಧ ಹೋರಾಡುವುದಕ್ಕಾಗಿಯೇ ವಿಶ್ವ ಆಹಾರ ದಿನವನ್ನ ಮಾಡಲಾಗುತ್ತಿದೆ.

ಇತ್ತೀಚಿಗೆ ಯುವಜನತೆ ಜಂಕ್ ಫುಡ್ ನ ಹಿಂದೆ ಬಿದ್ದು  ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಜಂಕ್ ಫುಡ್ ಗಳಿಂದ ಉತ್ತಮ ಆರೋಗ್ಯದ ಕೊರತೆ ಕಾಡುತ್ತಿದೆ. ಮತ್ತು ಪಾರ್ಟಿ ಎಂಬ ಹೆಸರಲ್ಲಿ ಬಹಳಷ್ಟು ಆಹಾರವನ್ನು ವ್ಯರ್ಥ ಮಾಡುವುದು ಕಾಣುತ್ತಿದೆ. ಪಾರ್ಟಿ ಹೆಸರಲ್ಲಿ ಹೋಟೆಲ್ ಅಲ್ಲಿ ಹೆಚ್ಚಾಗಿ ಆರ್ಡರ್ ಮಾಡಿ ಅದನ್ನ ತಿನ್ನದೆ ಹಾಗೆ ಬಿಟ್ಟು ಬರುವುದು, ಇಲ್ಲವೆಂದರೆ ತಮಗೆ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ತಟ್ಟೆ ಅಲ್ಲಿ ಬಳಸಿಕೊಂಡು ಆಹಾರವನ್ನು ವೇಸ್ಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: Global Hunger Index: ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 107ನೇ ಸ್ಥಾನ; ದೇಶದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ಎಂದ ಸರ್ಕಾರ

ಪ್ರತಿಯೊಂದು ಅನ್ನದ ಆಗಳಿನ ಹಿಂದೆ ಸಾಕಷ್ಟು ರೈತರ ಶ್ರಮ ವಿರುತ್ತದೆ. ಅದ್ದೂರಿ ಮದುವೆ ಭರದಲ್ಲಿ ವಿವಿಧ ರೀತಿಯ ಆಹಾರ ತಯಾರಿಸಿ ಬಂದವರಿಗೆ ಬಳಸಿದ ನಂತರ ಉಳಿದ ಆಹಾರವನ್ನು ವ್ಯರ್ಥ ಮಾಡುತ್ತಾರೆ. ಪ್ರತಿನಿತ್ಯ ಆಹಾರವಿಲ್ಲದೆ ಏಷ್ಟೋ ಜೀವಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ಅದರಲ್ಲೂ 5 ವರುಷದ ಕೆಳಗಿನ ಮಕ್ಕಳೇ ಹೆಚ್ಚು ಆಹಾರ ಕೊರತೆಯಿಂದ ಹಸುನೀಗುತಿದ್ದಾರೆ. ಭಾರತದಲ್ಲಿ ಅಧಿಕವಾಗಿ ಆಹಾರ ಕೊರತೆ ಇಂದ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚಿದೆ. ಇನ್ನಾದರೂ ಎಚ್ಚೆತ್ತು ಕೊಂಡು ಅಹಾರವನ್ನು ವ್ಯರ್ಥ ಮಾಡದೆ ಮಿತವಾಗಿ ತಮಗೆ ಬೇಕಾದಷ್ಟು  ಬಳಸಿ ಕೊಳ್ಳಿ  ಮೋಜು ಮಸ್ತಿ ಹೆಸರಲ್ಲಿ ಆಹಾರವನ್ನು ವ್ಯರ್ಥ ಮಾಡಬೇಡಿ  ಇನ್ನೊಂದು ಜೀವ ಅಲ್ಲಿ ಆಹಾರವಿಲ್ಲದೆ ನರಳುತ್ತಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಿ. ಇದನ್ನೂ ಓದಿ: Instant Foods: ಎರಡೇ ನಿಮಿಷದಲ್ಲಿ ತಯಾರಾಗುವ ಆಹಾರ ದೇಹಕ್ಕೆ ಮಾರಕವಾ?

ಬರಹ: ಐಶ್ವರ್ಯ ಕೋಣನ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್