ಪ್ರಪಂಚದ ತುಂಬಾ ಯಾವುದೇ ಸದ್ದು ಗದ್ದಲವಿಲ್ಲದೇ ಪ್ರಶಾಂತವಾಗಿದ್ದರೆ ಹೇಗಿರುತ್ತದೆ ಎಂದೊಮ್ಮೆ ಯೋಚಿಸಿ. ನಿಶಬ್ದತೆಯಿಂದ ಕೂಡಿರುವುದನ್ನು ಯೋಚಿಸಿದರೆ ಒಂದು ಕ್ಷಣ ಭಯವಾಗುತ್ತದೆ. ನಮ್ಮ ಸುತ್ತ ಮುತ್ತಲಿನ ಕೆಲವು ಜನರೂ ಯಾವುದೇ ಶಬ್ದಗಳ ಅರಿವೇ ಇಲ್ಲದೆ ಜೀವಿಸುತ್ತಿದ್ದಾರೆ. ಮನುಷ್ಯನ ಪ್ರತಿಯೊಂದು ಅಂಗವು ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಆತನಿಗೆ ಎಲ್ಲರಂತೆ ಬದುಕಲು ಸಾಧ್ಯವಾಗುತ್ತದೆ. ಸಣ್ಣ ಪುಟ್ಟ ಸಮಸ್ಯೆಯಿದ್ದರೂ ಸಮಾಜವು ಆತನನ್ನು ನೋಡುವ ರೀತಿಯೇ ಭಿನ್ನ. ಇತ್ತೀಚಿನ ದಿನಗಳಲ್ಲಿ ಕಿವಿಗೆ ಸಂಬಂಧಪಟ್ಟ ಸಮಸ್ಯೆ ಹೆಚ್ಚಾಗ್ತಿದೆ. ಕೆಲವರು ಎದುರಿಗಿರುವ ವ್ಯಕ್ತಿಯು ಏನನ್ನು ಹೇಳುತ್ತಿದ್ದಾರೆ ಎನ್ನುವುದನ್ನು ಆಲಿಸುವಲ್ಲಿ ವಿಫಲರಾಗುತ್ತಾರೆ. ಶ್ರವಣ ದೋಷ ಹೊಂದಿರುವವರ ಮಾತನಾಡುವಂತೆ ಉತ್ತೇಜಿಸಲು, ಅವರ ಮನಸ್ಸಿನ ಮಾತಿಗೆ ಕಿವಿಯಾಗಲು ಇರುವ ದಿನವೇ ವಿಶ್ವ ಶ್ರವಣ ದಿನ. ಪ್ರತಿವರ್ಷ ಮಾರ್ಚ್ 3ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಶ್ರವಣ ದಿನದ ಆಚರಣೆಯನ್ನು 2007 ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಯಿತು. ಈ ದಿನವನ್ನು ಅಂತರರಾಷ್ಟ್ರೀಯ ಕಿವಿಯ ಆರೈಕೆ ದಿನ ಎನ್ನಲಾಗುತ್ತಿತ್ತು. ಆದರೆ, 2016ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ವಿಶ್ವ ಶ್ರವಣ ದಿನ ಎಂದು ಘೋಷಣೆ ಮಾಡಲಾಯಿತು. ಅಂದಿನಿಂದ ಪ್ರತಿವರ್ಷ ಮಾರ್ಚ್ 3 ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಸುಡು ಬಿಸಿಲಿನ ನಡುವೆ ಚರ್ಮದ ಆರೈಕೆ ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಮಾರ್ಚ್ 3 ರಂದು ಆಚರಿಸಲಾಗುವ ವಿಶ್ವ ಶ್ರವಣ ದಿನವು ಶ್ರವಣ ದೋಷದ ಬಗ್ಗೆ ಜಾಗೃತಿ ಮೂಡಿಸುವುದು. ಶ್ರವಣದ ಆರೈಕೆ ಹಾಗೂ ಶ್ರವಣ ದೋಷ ಹಾಗೂ ಸಂಬಂಧಿತ ಸಮಸ್ಯೆಗಳ ಕುರಿತು ಮಾಹಿತಿ ನೀಡುವ ಉದ್ದೇಶವನ್ನು ಹೊಂದಿದೆ. ಇನ್ನು ಕೆಲವರು ಶ್ರವಣ ದೋಷಕ್ಕೆ ಪ್ರಾರಂಭದ ಹಂತದಲ್ಲಿಯೇ ಸರಿಯಾದ ಚಿಕಿತ್ಸೆಯನ್ನು ಪಡೆಯುವುದಿಲ್ಲ. ಅಂತಹವರಿಗೆ ಈ ದಿನದಂದು ಸೂಕ್ತ ಚಿಕಿತ್ಸೆಯ ಬಗೆಗೆ ಸರಿಯಾಗಿ ಮಾಹಿತಿ ನೀಡುವುದು. ಕಿವುಡುತನ ಎನ್ನುವುದು ಭಯಂಕರವಾಗಿರುವ ಕಾರಣ ಕಿವಿಗೆ ಅಪ್ಪಳಿಸುವ ಭಯಂಕರ ಶಬ್ದಗಳಿಂದ ಶ್ರವಣವನ್ನು ಹೇಗೆ ರಕ್ಷಿಸಬಹುದು ಎನ್ನುವ ಬಗ್ಗೆ ಮಾಹಿತಿ ನೀಡುವ ಕೆಲಸಗಳು ಆಗುತ್ತವೆ . ಈ ದಿನದಂದು ಕಿವುಡುತನದಿಂದ ಪಾರಾಗುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ