ಇಂದಿನ ಬದಲಾದ ಜೀವನ ಶೈಲಿ ಹಾಗೂ ಗುಣಮಟ್ಟವಲ್ಲದ ಆಹಾರ ಸೇವನೆಯು ಅಧಿಕ ರಕ್ತದೊತ್ತಡಕ್ಕೆ ಸಮಸ್ಯೆಗೆ ಕಾರಣವಾಗುತ್ತಿದೆ. ಒಂದು ವೇಳೆ ಅಧಿಕ ರಕ್ತದೊತ್ತಡದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳದೇ ಹೋದಲ್ಲಿ, ಹೃದ್ರೋಗಗಳು, ಪಾರ್ಶ್ವವಾಯು ಹೀಗೆ ಗಂಭೀರ ಆರೋಗ್ಯ ಸಮಸ್ಯೆಗೆ ದಾರಿ ಮಾಡಿಕೊಡಬಹುದು. ಅದಲ್ಲದೇ, ಅಧಿಕ ರಕ್ತದೊತ್ತಡವು ತಲೆನೋವು, ವಾಕರಿಕೆ, ವಾಂತಿ, ತಲೆತಿರುಗುವಿಕೆ ಹಾಗೂ ಉಸಿರಾಟದ ಸಮಸ್ಯೆ, ಗೊಂದಲ, ಆತಂಕ, ಎದೆ ನೋವು ಮತ್ತು ಸ್ನಾಯು ನಡುಕ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಈ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
2005 ಮೇ 14ರಂದು ವರ್ಲ್ಡ್ ಟೈಪರ್‌ಟೆನ್ಷನ್ ಲೀಗ್ ಅಧಿಕ ರಕ್ತದೊತ್ತಡ ದಿನವನ್ನು ಪರಿಚಯ ಮಾಡಿತು. ಆದರೆ 2006ರಿಂದ ಪ್ರತಿವರ್ಷ ಮೇ 17 ರಂದು ಅಧಿಕ ರಕ್ತದೊತ್ತಡ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ. ವರ್ಲ್ಡ್ ಟೈಪರ್‌ಟೆನ್ಷನ್ ಲೀಗ್ ಎಂಬುದು ಅಧಿಕ ರಕ್ತದೊತ್ತಡ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಸಂಸ್ಥೆಯಲ್ಲಿ ಒಂದು. ಹೀಗಾಗಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಧಿಕ ರಕ್ತದೊತ್ತಡ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವ ಅಧಿಕ ರಕ್ತದೊತ್ತಡ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ಆರೋಗ್ಯ ಸಮಸ್ಯೆ ಹೊಂದಿದವರಿಗೆ ಸಹಾಯ ಮಾಡಲು ಲೀಗ್‌ಗಳು ಸಹಕರಿಸುತ್ತವೆ. ಈ ದಿನದಂದು ಆರೋಗ್ಯ ಸಂಸ್ಥೆಗಳು ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತವೆ.
ಇದನ್ನೂ ಓದಿ: ಎಷ್ಟೇ ತೊಳೆದ್ರು ಮಿಕ್ಸಿ ಜಾರಿನ ಕೆಟ್ಟ ವಾಸನೆ ಹೋಗ್ತಿಲ್ವಾ? ಇಲ್ಲಿದೆ ಸಿಂಪಲ್ ಟಿಪ್ಸ್
* ಉಪ್ಪು ಸೇವನೆಯು ಮಿತವಾಗಿರಲಿ.
* ಹಣ್ಣು ಹಂಪಲು ಮತ್ತು ಸೊಪ್ಪು ತರಕಾರಿಗಳನ್ನು ಸೇವಿಸಿ.
* ತಂಬಾಕು ಸೇವನೆ, ಆಲ್ಕೊಹಾಲ್ ನಿಂದ ದೂರವಿರುವುದು.
* ಕೊಬ್ಬಿನ ಅಂಶವಿರುವ ಆಹಾರ ಸೇವನೆಯನ್ನು ಕಡಿಮೆಗೊಳಿಸುವುದು.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ