Kitchen Tips in Kannada : ಎಷ್ಟೇ ತೊಳೆದ್ರು ಮಿಕ್ಸಿ ಜಾರಿನ ಕೆಟ್ಟ ವಾಸನೆ ಹೋಗ್ತಿಲ್ವಾ? ಇಲ್ಲಿದೆ ಸಿಂಪಲ್ ಟಿಪ್ಸ್

ಅಡುಗೆ ಮನೆಯಲ್ಲಿ ಉಪಕಣಗಳದ್ದೇ ಕಾರುಬಾರು. ಹೀಗಾಗಿ ಮಹಿಳೆಯರ ಕೆಲಸವು ಸುಲಭವಾಗಿಸಿದ್ದು, ಚಟ್ ಪಟ್ ಎಂದು ಬೇಗನೇ ಅಡುಗೆ ಮಾಡಿ ಮುಗಿಸಬಹುದಾಗಿದೆ. ಅದರಲ್ಲಿಯು ಹಿಂದಿನ ಕಾಲದಲ್ಲಿ ರುಬ್ಬುವ ಕಲ್ಲನ್ನು ಬಳಕೆ ಮಾಡುತ್ತಿದ್ದರು. ಆದರೆ ಇದೀಗ ಈ ಜಾಗವನ್ನು ಮಿಕ್ಸಿ ಹಾಗೂ ಗ್ರೈಂಡರ್‌ ನಂತಹ ಉಪಕರಣಗಳು ತುಂಬಿಕೊಂಡಿವೆ. ಆದರೆ ಈ ಉಪಕರಣಗಳಲ್ಲಿ ಜಿಡ್ಡು ತುಂಬಿದಂತೆ ಕೆಟ್ಟ ವಾಸನೆಯು ಬರುತ್ತದೆ. ಈ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ಸಲಹೆಗಳನ್ನು ಪಾಲಿಸಬಹುದು.

Kitchen Tips in Kannada : ಎಷ್ಟೇ ತೊಳೆದ್ರು ಮಿಕ್ಸಿ ಜಾರಿನ ಕೆಟ್ಟ ವಾಸನೆ ಹೋಗ್ತಿಲ್ವಾ? ಇಲ್ಲಿದೆ ಸಿಂಪಲ್ ಟಿಪ್ಸ್
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:May 16, 2024 | 2:00 PM

ಅಡುಗೆ ಮನೆ ಹಾಗೂ ಆಹಾರ ತಯಾರಿಸುವ ಪಾತ್ರೆಗಳು ಸ್ವಚ್ಛತೆಯಿಂದ ಕೂಡಿದ್ದರೆ ಅಡುಗೆ ಮನೆಯತ್ತ ಹೋಗಲು ಮನಸ್ಸಾಗುತ್ತದೆ. ರುಚಿ ರುಚಿಯಾದ ಅಡುಗೆ ತಯಾರಿಸಿದ ಬಳಿಕ ಈ ಮಿಕ್ಸಿ, ಗ್ರೈಂಡರ್‌ ಉಪಕರಣಗಳನ್ನು ತೊಳೆಯುವುದು ಸ್ವಲ್ಪ ಕಷ್ಟವೇ. ಎಷ್ಟೇ ತೊಳೆದರೂ ಬ್ಲೇಡ್‌ಗಳ ಮಧ್ಯದಲ್ಲಿ ಸಿಲುಕಿ ಕೊಂಡ ಆಹಾರದ ಅಂಶಗಳು ಹೋಗುವುದೇ ಇಲ್ಲ. ಹೀಗಾಗಿ ಮಿಕ್ಸಿಯಲ್ಲಿ ಕೆಟ್ಟ ವಾಸನೆಯೊಂದು ಬರುತ್ತಿರುತ್ತದೆ. ಹೀಗಾದಾಗ ಮನೆಯಲ್ಲಿರುವ ಕೆಲವೇ ಕೆಲವು ವಸ್ತುಗಳಿಂದ ಈ ಕೆಟ್ಟ ವಾಸನೆಯಿಂದ ಮುಕ್ತಿ ಪಡೆಯಬಹುದು.

* ಬೇಕಿಂಗ್‌ ಸೋಡಾ: ಮಿಕ್ಸಿ ಜಾರಿನಲ್ಲಿ ಬ್ಲೇಡುಗಳ ನಡುವೆ ಸಿಕ್ಕಿ ಹಾಕಿಕೊಂಡ ಆಹಾರ ಅಥವಾ ಹಳೆಯ ಆಹಾರದ ವಾಸನೆ ಇದ್ದಲ್ಲಿ, ನೀರಿನ ಜೊತೆ ಬೇಕಿಂಗ್‌ ಸೋಡಾ ಹಾಕಿ ಮಿಕ್ಸಿಯನ್ನು ಕೆಲವು ಸೆಕೆಂಡುಗಳ ಕಾಲ ಹಾಗೆ ಇಟ್ಟು ಬಿಸಿನೀರಿನಿಂದ ತೊಳೆದರೆ ಕೆಟ್ಟ ವಾಸನೆಯು ಹೋಗುತ್ತದೆ.

* ನಿಂಬೆಹಣ್ಣಿನ ಸಿಪ್ಪೆ: ಮಿಕ್ಸಿ ಜಾರಿಗೆ ನಿಂಬೆಹಣ್ಣಿನ ಸಿಪ್ಪೆಯೊಂದಿಗೆ ನೀರು ಹಾಕಿ ಗ್ರೈಂಡ್ ಮಾಡಿಕೊಂಡು ಸ್ವಲ್ಪ ಸಮಯದ ನಂತರ ಬಿಸಿ ನೀರಿನಲ್ಲಿ ತೊಳೆದರೆ ಮಿಕ್ಸಿಯಲ್ಲಿರುವ ಕೆಟ್ಟ ವಾಸನೆಯು ಇಲ್ಲವಾಗುತ್ತದೆ.

ಇದನ್ನೂ ಓದಿ: ಮನೆಯಲ್ಲೇ ಮಾವಿನ ಲಸ್ಸಿ ಮಾಡುವ ಸುಲಭ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ

* ವಿನೆಗರ್:‌ ಒಂದು ಲೋಟ ನೀರಿಗೆ ಎರಡು ಚಮಚ ವಿನೆಗರನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ಸಮಯದ ಬಳಿಕ ತೊಳೆಯುವುದರಿಂದ ಮಿಕ್ಸಿ ಜಾರು ಸ್ವಚ್ಛವಾಗುವುದಲ್ಲದೆ, ಕೆಟ್ಟ ವಾಸನೆಯು ಮಾಯವಾಗುತ್ತದೆ

* ಆಲ್ಕೋಹಾಲ್:‌ ಆಲ್ಕೋಹಾಲನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ಹೊತ್ತು ಬಿಟ್ಟು ತೊಳೆದರೆ ಉಳಿದ ಆಹಾರ ಪದಾರ್ಥಗಳು ಹಾಗೂ ವಾಸನೆಯು ಇಲ್ಲದಂತಾಗುತ್ತದೆ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:00 pm, Thu, 16 May 24

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ