World Radio Day 2023: ವಿಶ್ವ ರೇಡಿಯೋ ದಿನದ ಮಹತ್ವ ಮತ್ತು ಇತಿಹಾಸ ಏನು ಗೊತ್ತಾ?

|

Updated on: Feb 13, 2023 | 2:41 PM

ರೇಡಿಯೋ ಮಾಹಿತಿಗಳನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ರೇಡಿಯೋ ಅತ್ಯಂತ ಹಳೆಯ ಹಾಗೂ ಇಂದಿಗೂ ಚಾಲ್ತಿಯಲ್ಲಿರುವ ಸಂವಹನ ಮಾಧ್ಯಮವಾಗಿದೆ. ಇಂದು ವಿಶ್ವ ರೇಡಿಯೋ ದಿನ.

World Radio Day 2023: ವಿಶ್ವ ರೇಡಿಯೋ ದಿನದ ಮಹತ್ವ ಮತ್ತು ಇತಿಹಾಸ ಏನು ಗೊತ್ತಾ?
ಸಾಂದರ್ಭಿಕ ಚಿತ್ರ
Follow us on

ರೇಡಿಯೋ ಮಾಹಿತಿಗಳನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ರೇಡಿಯೋ ಅತ್ಯಂತ ಹಳೆಯ ಹಾಗೂ ಇಂದಿಗೂ ಚಾಲ್ತಿಯಲ್ಲಿರುವ ಸಂವಹನ ಮಾಧ್ಯಮವಾಗಿದೆ. ಇಂದು ವಿಶ್ವ ರೇಡಿಯೋ ದಿನ (World Radio Day 2023) . ರೇಡಿಯೋದ ಕುರಿತ ಕೆಲವೊಂದು ಮಾಹಿತಿಪೂರಕ ವಿಚಾರಗಳು ಇಲ್ಲಿವೆ. ವಿಶ್ವ ರೇಡಿಯೋ ದಿನವನ್ನು ಪ್ರತಿ ವರ್ಷ ಫೆಬ್ರವರಿ 13ರಂದು ಪ್ರಪಂಚದದ್ಯಾಂತ ಆಚರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ರೇಡಿಯೋ ವ್ಯಾಪಕವಾಗಿ ಇಂದಿಗೂ ಚಾಲ್ತಿಯಲ್ಲಿದೆ. ಇದು ಪ್ರಜಾಪ್ರಭುತ್ವದ ಪ್ರವಚನಕ್ಕೆ ವೇದಿಕೆಯನ್ನು ಒದಗಿಸುತ್ತದೆ. ಸಾರ್ವಜನಿಕರಿಗೆ ಮಾಹಿತಿಯನ್ನು ತಲುಪಿಸಲು ರೇಡಿಯೋ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಇದು ಉಚಿತ, ಪ್ರಜಾಪ್ರಭುತ್ವ ಮತ್ತು ವಿಶ್ವಾಸಾರ್ಹವಾಗಿದೆ. ಈ ಕಾರಣದಿಂದಾಗಿ, ಇದು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಇಂದು ಇಂಟರ್‌ನೆಟ್, ಟಿವಿ, ಪತ್ರಿಕೆಗಳಿದ್ದರೂ ಹೆಚ್ಚಿನ ಮಟ್ಟದ ಪ್ರೇಕ್ಷಕರನ್ನು ರೇಡಿಯೋ ಹೊಂದಿದೆ.

ವಿಶ್ವ ರೇಡಿಯೋ ದಿನ 2023: ವಿಷಯ

ವಿಶ್ವ ರೇಡಿಯೋ ದಿನದ 12ನೇ ಆವೃತ್ತಿಯ ವಿಷಯ ರೇಡಿಯೋ ಮತ್ತು ಶಾಂತಿ :  ವಿಶ್ವ ರೇಡಿಯೋ ದಿನ 2023ರಂದು ಯುನೆಸ್ಕೊ ಸ್ವತಂತ್ರ ರೇಡಿಯೋವನ್ನು ಸಂಘರ್ಷ ತಡೆಗಟ್ಟುವಿಕೆ ಮತ್ತು ಶಾಂತಿ ನಿರ್ಮಾಣಕ್ಕೆ ಆಧಾರಸ್ತಂಭವಾಗಿದೆ ಎಂದು ಹೇಳಿದೆ. ಹಾಗೂ ರೇಡಿಯೋ ಬಳಕೆಯನ್ನು ಪ್ರೋತ್ಸಾಹಿಸುವುದು ಮತ್ತು ಉತ್ತೇಜಿಸುವುದು ಈ ದಿನ ಗುರಿಯಾಗಿದೆ.

ವಿಶ್ವ ರೇಡಿಯೋ ದಿನ: ಇತಿಹಾಸ

ಯುನೆಸ್ಕೋ ಅದರ 39ನೇ ಅಧಿವೇಶನದ ಭಾಗವಾಗಿ 2011ರ ಜನರಲ್ ಕಾನ್ಫರೆನ್ಸ್ನಲ್ಲಿ ಫೆಬ್ರವರಿ 13ರನ್ನು ವಿಶ್ವ ರೇಡಿಯೋ ದಿನವನ್ನಾಗಿ ಘೋಷಿಸಿತು. ಫೆಬ್ರವರಿ 13 ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಪ್ರಸಾರ ಸೇವೆಯಾದ ಯುನೈಟೆಡ್ ನೇಷನ್ಸ್ ರೇಡಿಯೋ ಸ್ಥಾಪನೆಯ ವಾರ್ಷಿಕೋತ್ಸವದ ದಿನವಾಗಿದೆ. ಇದನ್ನು 1946ರಲ್ಲಿ ಸ್ಥಾಪಿಸಲಾಯಿತು.

ಅದರ 64ನೇ ಅಧಿವೇಶನದಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಜನವರಿ 14, 2013ರಂದು ನಿರ್ಣಯವನ್ನು ಅಂಗೀಕರಿಸಿತು. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಫೆಬ್ರವರಿ 13ರಂದು ವಿಶ್ವ ರೇಡಿಯೋ ದಿನ ಎಂಬ ಯುನೆಸ್ಕೋದ ಘೋಷನೆಯನ್ನು ಔಪಚಾರಿಕವಾಗಿ ಅನುಮೋದಿಸಿತು.

ಇದನ್ನೂ ಓದಿ:World Children Day 2022 : ವಿಶ್ವ ಮಕ್ಕಳ ದಿನಾಚರಣೆಯ ಮಹತ್ವ, ಇತಿಹಾಸ

ಭಾರತೀಯ ರೇಡಿಯೋ ಪ್ರಸಾರವು 1920ರ ದಶಕದ ಆರಂಭದಲ್ಲಿ ಪ್ರಾರಂಭವಾಯಿತು. ಹಾಗೂ 1923ರಲ್ಲಿ ಬಾಂಬೆಯ ರೇಡಿಯೋ ಕ್ಲಬ್ ತನ್ನ ಮೊದಲ ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ಆಗ ಭಾರತದ ವೈಸ್‌ರಾಯ್ ಆಗಿದ್ದ ಲಾರ್ಡ್ ಇರ್ವಿನ್ ಅವರು ಬಾಂಬೆಯಲ್ಲಿ ಇಂಡಿಯನ್ ಬ್ರಾಡ್‌ಕಾಸ್ಟ್ ಕಂಪೆನಿಯನ್ನು ಉದ್ಘಾಟಿಸಿದರು.