AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Radio Day 2026: ಇಂಟರ್‌ನೆಟ್‌ ಯುಗದಲ್ಲೂ ಜನರ ವಿಶ್ವಾಸಾರ್ಹ ಧ್ವನಿಯಾಗಿ ಉಳಿದಿದೆ ರೇಡಿಯೋ

ಆಧುನಿಕ ಕಾಲದಲ್ಲಿಯೂ ಸಹ, ರೇಡಿಯೋ ಜ್ಞಾನ, ಮನರಂಜನೆ ಮತ್ತು ಪ್ರಚಲಿತ ಘಟನೆಗಳ ಮಾಹಿತಿಯನ್ನು ನೀಡುವ ಸಂವಹನ ಮಾಧ್ಯಮವಾಗಿ ಉಳಿದಿದೆ. ವಿಶ್ವಾಸಾರ್ಹ ಸುದ್ದಿಗಳನ್ನು ನೀಡುತ್ತಿದೆ, ಎಫ್‌ಎಂ ರೇಡಿಯೋ ಸ್ಟೇಷನ್‌ಗಳ ಮುಖಾಂತರ ಮನೋರಂಜನೆಯ ವ್ಯಾಪ್ತಿಯೂ ದೊಡ್ಡದಾಗಿದೆ. ಹೀಗೆ ಮಾಧ್ಯಮದ ಪ್ರಮುಖ ಮೂಲವಾಗಿರುವ ರೇಡಿಯೋದ ಮಹತ್ವ ಮತ್ತು ಕೊಡುಗೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವವನ್ನು ತಿಳಿಯೋಣ.

World Radio Day 2026: ಇಂಟರ್‌ನೆಟ್‌ ಯುಗದಲ್ಲೂ ಜನರ ವಿಶ್ವಾಸಾರ್ಹ ಧ್ವನಿಯಾಗಿ ಉಳಿದಿದೆ ರೇಡಿಯೋ
ವಿಶ್ವ ರೇಡಿಯೋ ದಿನImage Credit source: vecteezy
ಮಾಲಾಶ್ರೀ ಅಂಚನ್​
|

Updated on: Feb 13, 2026 | 8:40 AM

Share

ಇಂದಿನ ಈ ಇಂಟರ್‌ನೆಟ್‌ ಯುಗದಲ್ಲಿ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಪ್ರಪಂಚದಾದ್ಯಂತ ನಡೆಯುವ ಪ್ರತಿಯೊಂದು ಕ್ಷಣ ಕ್ಷಣದ ಮಾಹಿಯನ್ನು ಬೇಕಾದರೂ ತಿಳಿಯಬಹುದು ಜೊತೆಗೆ ಇಂದು ಸಾಕಷ್ಟು ಮನೋರಂಜನೆಯ ಆಯ್ಕೆಗಳೂ ಇವೆ. ಆದ್ರೆ ಒಂದು ಕಾಲದಲ್ಲಿ ರೇಡಿಯೋವೇ ಎಲ್ಲಾ ಆಗಿತ್ತು. ಹೌದು ಪ್ರಚಲಿತ ಘಟನೆಗಳ ಮಾಹಿತಿಯನ್ನು ನೀಡುವ ಸಂವಹನ ಮಾಧ್ಯಮವಾಗಿತ್ತು, ಇದರ ಮೂಲಕವೇ ಜನ ಸುದ್ದಿಗಳನ್ನು ತಿಳಿಯುತ್ತಿದ್ದರು. ಇಂದಿಗೂ ಕೂಡ ರೇಡಿಯೋ (Radio) ಅತ್ಯಂತ ಪ್ರಭಾವಶಾಲಿ ಸಮೂಹ ಮಾಧ್ಯಮವಾಗಿ, ವಿಶ್ವಾಸಾರ್ಹ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ರೇಡಿಯೋದ ಮಹತ್ವ ಮತ್ತು ಅದರ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ರೇಡಿಯೋ ದಿನದ ಇತಿಹಾಸವೇನು?

  • ಅಂತರರಾಷ್ಟ್ರೀಯ ಮಟ್ಟದಲ್ಲಿ ರೇಡಿಯೋ ದಿನವನ್ನು ಆಚರಿಸುವ ಪ್ರಸ್ತಾಪವನ್ನು 2011 ರಲ್ಲಿ ಮುಂದಿಡಲಾಯಿತು.
  • ನಂತರ ಯುನೆಸ್ಕೋದ ಸದಸ್ಯ ರಾಷ್ಟ್ರಗಳು ಇದನ್ನು ವಿಶ್ವಸಂಸ್ಥೆಯ ಸಭೆಗೆ ಪ್ರಸ್ತಾಪಿಸಿದವು, ಇದನ್ನು 2012 ರಲ್ಲಿ ಅಂತರರಾಷ್ಟ್ರೀಯ ದಿನವೆಂದು ಅಂಗೀಕರಿಸಲಾಯಿತು.
  • ಫೆಬ್ರವರಿ 13 ಅಮೆರಿಕದ ರೇಡಿಯೋ ಇತಿಹಾಸದಲ್ಲಿ ಸ್ಮರಣೀಯ ದಿನ. 1946 ರಲ್ಲಿ, ಅಮೆರಿಕದಿಂದ ಮೊದಲ ರೇಡಿಯೋ ಪ್ರಸಾರ ನಡೆಯಿತು. ತರುವಾಯ, ವಿಶ್ವಸಂಸ್ಥೆಯು ರೇಡಿಯೊದಲ್ಲಿಯೂ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಅದಕ್ಕಾಗಿಯೇ ಈ ದಿನವನ್ನು ಆಚರಿಸಲು ಫೆಬ್ರವರಿ 13 ನ್ನು ಆಯ್ಕೆ ಮಾಡಲಾಯಿತು.

ವಿಶ್ವ ರೇಡಿಯೋ ದಿನದ ಮಹತ್ವವೇನು?

  • ವಿಶ್ವಸಂಸ್ಥೆಯ ಪ್ರಕಾರ, ವಿಶ್ವ ರೇಡಿಯೋ ದಿನವು ಸಾರ್ವಜನಿಕರಲ್ಲಿ ಮತ್ತು ಮಾಧ್ಯಮಗಳಲ್ಲಿ ರೇಡಿಯೊದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
  • ಸಾರ್ವಜನಿಕರಿಗೆ ರೇಡಿಯೊದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನವು ರೇಡಿಯೋ ಬಳಕೆ ಬಳಕೆ ಮಾಡಬೇಕೆಂದು ಯುವ ಸಮುದಾಯವನ್ನು ಪ್ರೋತ್ಸಾಹಿಸುತ್ತದೆ.

ಇದನ್ನೂ ಓದಿ: ವಿಜ್ಞಾನ ಕ್ಷೇತ್ರದಲ್ಲಿ ಹೆಣ್ಣುಮಕ್ಕಳ ಭಾಗವಹಿಸುವಿಕೆಯನ್ನು ಉತ್ತೇಜಿಸಲಿರುವ ವಿಶೇಷ ದಿನವಿದು

ಡಿಜಿಟಲ್‌ ಯುಗದಲ್ಲಿ ರೇಡಿಯೋ:

ರೇಡಿಯೋ ಇಂದು ಮರದ ಅಥವಾ ಪ್ಲಾಸ್ಟಿಕ್ ಪೆಟ್ಟಿಗೆಗೆ ಸೀಮಿತವಾಗಿಲ್ಲ. ಇದು ಈಗ  ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್ ಆಗಿ ಅಸ್ತಿತ್ವದಲ್ಲಿದೆ. ಈ ಎಫ್‌ಎಂಗಳ ಮೂಲಕ ಪಾಡ್‌ಕ್ಯಾಸ್ಟ್‌, ಸುದ್ದಿ, ಹಾಡು ಇತ್ಯಾದಿ ಕಾರ್ಯಕ್ರಮಗಳನ್ನೂ ಕೇಳಬಹುದು. ಎಫ್‌ಎಂ ರೇಡಿಯೋ ಸ್ಟೇಷನ್‌ಗಳ ಮುಖಾಂತರ ಮನೋರಂಜನೆಯ ವ್ಯಾಪ್ತಿಯೂ ದೊಡ್ಡದಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!