World Samosa Day 2023: ಇಂದು ವಿಶ್ವ ಸಮೋಸಾ ದಿನ, ಈ ಖಾದ್ಯ ಭಾರತಕ್ಕೆ ಬಂದಿದ್ದು ಹೇಗೆ?
ಬಾಯಲ್ಲಿ ಇಟ್ಟರೆ ಸಾಕು ಬಾಯ್ತುಂಬ ಹರಡುವ ಮಸಾಲೆಭರಿತ ಆಲೂಗಡ್ಡೆ, ಈರುಳ್ಳಿ, ಬಟಾಣಿ ಹೀಗೆ ತನ್ನ ಯುನೀಕ್ ಟೇಸ್ಟ್ ಹಾಗೂ ಶೇಪ್ ಹೊಂದಿರುವ ಮತ್ತೇ ಮತ್ತೇ ತಿನ್ನಬೇಕು ಅನಿಸುವ ಸಮೋಸಾದ ದಿನವಿಂದು. ಈ ದಿನ ಸಮೋಸಾದ ಇತಿಹಾಸ ಕೆದಕೋಣ. ಭಾರತದಲ್ಲಿ ಸಮೋಸ ಹೇಗೆ ಜನಪ್ರಿಯವಾಯಿತು ಎಂಬುವುದನ್ನು ತಿಳಿಯೋಣ.
ಸಂಜೆ ಟೀ ಜೊತೆ ಪರ್ಫೆಕ್ಟ್ ಮ್ಯಾಚ್ ಆಗುವ ಸಮೋಸಾ(Samosa) ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಕೊಂಚ ಹಸಿವಾಗುತ್ತಿದೆ, ನಾಲಿಗೆ ರುಚಿ ಬಯಸುತ್ತಿದೆ, ಜೇಬಲ್ಲಿ ಹತ್ತೇ ರೂಪಾಯಿ ಇದೆ ಅಂದ್ರೆ ಮೊದಲು ನೆನಪಾಗುವುದೇ ಸಮೋಸಾ. ಏನಿದು ಇವತ್ತು ಸಮೋಸಾದ ಜಪಮಾಡ್ತಿದ್ದಾರೆ ಅಂದ್ರಾ. ಹೌದು ಇವತ್ತು ವಿಶ್ವ ಸಮೋಸಾ ದಿನ(World Samosa Day 2023). ಬಾಯಲ್ಲಿ ಇಟ್ಟರೆ ಸಾಕು ಬಾಯ್ತುಂಬ ಹರಡುವ ಮಸಾಲೆಭರಿತ ಆಲೂಗಡ್ಡೆ, ಈರುಳ್ಳಿ, ಬಟಾಣಿ ಹೀಗೆ ತನ್ನ ಯುನೀಕ್ ಟೇಸ್ಟ್ ಹಾಗೂ ಶೇಪ್ ಹೊಂದಿರುವ ಮತ್ತೇ ಮತ್ತೇ ತಿನ್ನಬೇಕು ಅನಿಸುವ ಸಮೋಸಾದ ದಿನವಿಂದು. ಈ ದಿನ ಸಮೋಸಾದ ಇತಿಹಾಸ ಕೆದಕೋಣ. ಭಾರತದಲ್ಲಿ ಸಮೋಸ ಹೇಗೆ ಜನಪ್ರಿಯವಾಯಿತು ಎಂಬುವುದನ್ನು ತಿಳಿಯೋಣ.
ಸಮೋಸಾ ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯವಾದ ಸ್ನ್ಯಾಕ್ಸ್ಗಳಲ್ಲಿ ಒಂದಾಗಿದೆ. 10ನೇ ಶತಮಾನದ ಸುಮಾರಿಗೆ ಮಧ್ಯ ಏಷ್ಯಾದಲ್ಲಿ ಸಮೋಸಾ ಖಾದ್ಯವನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು ಎಂಬ ನಂಬಿಕೆ ಇದೆ. ಆದರೆ ಈಗ ಭಾರತದಲ್ಲಿ ಅತಿ ಹೆಚ್ಚು ಬೇಡಿಕೆಯ ಸ್ನ್ಯಾಕ್ಸ್ ಇದಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ 05 ರಂದು ಸಮೋಸಾ ದಿನವನ್ನು ಆಚರಿಸಲಾಗುತ್ತದೆ.
ಇನ್ನು ಮಧ್ಯ ಏಷ್ಯಾದಲ್ಲಿದ್ದ ಸಮೋಸಾವನ್ನು ಭಾರತಕ್ಕೆ ಪರಿಚಯಿಸಿದ್ದು ಅರೇಬಿಕ್ ವ್ಯಾಪಾರಿಗಳು. ಸುಮಾರು 13ನೇ ಅಥವಾ 14ನೇ ಶತಮಾನದಲ್ಲಿ, ವ್ಯಾಪಾರಿಗಳು ರುಚಿಕರವಾದ ತಿಂಡಿಗಳನ್ನು ಭಾರತಕ್ಕೆ ತಂದರು. ಈ ವೇಳೆ ಸಮೋಸಾ ಕೂಡ ಭಾರತಕ್ಕೆ ಬಂತು. ಅಂದಿನಿಂದ ಸಮೋಸಾ ಜನಪ್ರಿಯ ಸ್ನ್ಯಾಕ್ಸ್ ಆಗಿದೆ. ಎಣ್ಣೆಯಲ್ಲಿ ಕರೆದ ಕ್ರಿಸ್ಪಿ ಆದ ಮೈದಾ ಅಥವಾ ಗೋಧಿ ಹಿಟ್ಟಿನಿಂದ ತಯಾರಿಸಲಾಗುವ ಸಮೋಸಾದಲ್ಲಿ ಅವರೆಕಾಳು, ಈರುಳ್ಳಿ, ತರಕಾರಿಗಳು, ಪನೀರ್, ಮಟನ್ ಅಥವಾ ಚಿಕನ್ ಹಾಕಲಾಗುತ್ತದೆ. ಸಮೋಸಾ ತುಂಬಾ ವೆರೈಟಿಗಳಲ್ಲಿ ಮಾಡಲಾಗುತ್ತೆ. ವೆಜ್ ಸಮೋಸಾ, ನಾನ್ ವೆಜ್ ಸಮೋಸಾ, ಈರುಳ್ಳು ಸಮೋಸಾ, ಕೈಮಾ ಸಮೋಸಾ ಜನಪ್ರಿಯ ಸಮೋಸಾಗಳು. ಸಮೋಸಾವು ಸಂಜೆಯ ಸಮಯದಲ್ಲಿ ರಸ್ತೆ ಬದಿಯ ಅಂಗಡಿಗಳಲ್ಲಿ ಕಂಡುಬರುವ ಸಾಮಾನ್ಯ ತಿಂಡಿಯಾಗಿದೆ. ಕೆಲವೊಮ್ಮೆ, ಪುದೀನಾ ಅಥವಾ ಕೊತ್ತಂಬರಿ ಚಟ್ನಿಯನ್ನು ಸಮೋಸಾದೊಂದಿಗೆ ಸವಿಯಲಾಗುತ್ತೆ.
ಇದನ್ನೂ ಓದಿ: ಸಿಹಿ ತಿನ್ನುವುದನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಡಿ, ಅದರಿಂದಲೂ ಅನಾರೋಗ್ಯ ಕಾಡಬಹುದು
ಸಮೋಸಾವನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಸಂಬೋಸ್ಕಾ, ಸಾಂಬುಸಾ, ಸಂಬೋಸಾಜ್ ಎಂದು ಅನೇಕ ಶತಮಾನಗಳ ಹಿಂದಿನ ಪುಸ್ತಕ ಮತ್ತು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಈಗಲೂ ಇದಕ್ಕೆ ಸಿಂಘಡ, ಸಾಂಬಸ, ಚಮುಕ, ಸಾಂಬುಸಜ್ ಎಂದು ಹಲವು ಹೆಸರುಗಳಿವೆ.
ವಿಶ್ವ ಸಮೋಸಾ ದಿನದ ಆಚರಣೆ ಹೇಗೆ?
ವಿಶ್ವ ಸಮೋಸಾ ದಿನವನ್ನು ಆಚರಿಸಲು ಹಲವಾರು ಮಾರ್ಗಗಳಿವೆ. ಈ ದಿನ ಡಯೆಟ್ ಮರೆತು ಎಷ್ಟು ಸಾಧ್ಯವೋ ಅಷ್ಟು ಸಮೋಸಾಗಳನ್ನು ತಿನ್ನಿ. ನಿಮ್ಮವರಿಗೂ ತಿನಿಸಿ. ಆದರೆ ಹೊಟ್ಟೆ ಕೆಡಿಸಿಕೊಳ್ಳಬೇಡಿ. ಪನೀರ್ ಸಮೋಸಾದಿಂದ ಹಿಡಿದು ಚಿಕನ್ ಸಮೋಸಾ, ಈರುಳ್ಳಿ ಸಮೋಸಗಳವರೆಗೆ ಎಲ್ಲವನ್ನೂ ಟ್ರೈ ಮಾಡಿ ಟೇಸ್ಟ್ ನೋಡಿ. ಮನೆಯಲ್ಲಿ ಸಮೋಸಾ ಮಾಡಲು ಪ್ರಯತ್ನಿಸಿ, ಮನೆವರಿಗೆ ತಿನಿಸಿ. ಸಮೋಸಾ ಮಾಡುವ ವಿಧಾನ ತುಂಬಾ ಸರಳ. ನೀವು ಅದನ್ನು ಒಮ್ಮೆ ಕಲಿತರೆ ಅವುಗಳನ್ನು ಸಂಜೆಯ ತಿಂಡಿಗಳಿಗೆ ಚಾಯ್ ಜೊತೆ ಸವಿಯಬಹುದು. ಮನೆಯಲ್ಲಿ ಸಮೋಸಾ ಪಾರ್ಟಿಯನ್ನು ಆಯೋಜಿಸಿ ತಮ್ಮ ಎಲ್ಲಾ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಉತ್ತಮ ಸಮಯ ಕಳೆಯಿರಿ. ಎಲ್ಲರಿಗೂ ವಿಶ್ವ ಸಮೋಸಾದಿನದ ಶುಭಾಶಯಗಳು.
ಜೀವನ ಶೈಲಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ