World Statistics Day 2025: ವಿಶ್ವ ಅಂಕಿಅಂಶ ದಿನವನ್ನು ಆಚರಿಸುವ ಉದ್ದೇಶವೇನು?

ಅಂಕಿಅಂಶಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ವಿಶ್ವಾಸಾರ್ಹ ಮತ್ತು ನವೀಕೃತ ಮಾಹಿತಿಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಎಲ್ಲಾ ತಿಳುವಳಿಕೆಯುಳ್ಳ, ಮಹತ್ವಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಅಂಕಿಅಂಶಗಳ ಮಹತ್ವವನ್ನು ಸಾರಲು ಪ್ರತಿವರ್ಷ ಅಕ್ಟೋಬರ್‌ 20 ರಂದು ವಿಶ್ವ ಅಂಕಿಅಂಶ ದಿನವನ್ನು ಆಚರಿಸಲಾಗುತ್ತದೆ.

World Statistics Day 2025: ವಿಶ್ವ ಅಂಕಿಅಂಶ ದಿನವನ್ನು ಆಚರಿಸುವ ಉದ್ದೇಶವೇನು?
ವಿಶ್ವ ಅಂಕಿಅಂಶ ದಿನ
Image Credit source: vecteezy

Updated on: Oct 20, 2025 | 9:51 AM

ನಮ್ಮ ದೈನಂದಿನ ವ್ಯವಹಾರ ಮಾತ್ರವಲ್ಲದೆ ಯಾವುದೇ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನಿಖರವಾದ ಅಂಕಿಅಂಶಗಳು (Statistics) ತುಂಬಾನೇ ಮುಖ್ಯ.  ಹೌದು ಗುಣಮಟ್ಟದ ಅಂಕಿಅಂಶಗಳಿಲ್ಲದೆ ಶಿಕ್ಷಣ, ಆರೋಗ್ಯ,  ಹವಾಮಾನ ಬದಲಾವಣೆ, ವ್ಯಾಪಾರ-ವ್ಯವಹಾರ ಆರ್ಥಿಕ ಬೆಳವಣಿಗೆಯಂತಹ ಪ್ರಮುಖ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಅಳೆಯುವುದು ಕಷ್ಟಕರವಾಗುತ್ತದೆ. ಅದಕ್ಕಾಗಿಯೇ ಅಂಕಿಅಂಶಗಳನ್ನು ಆಧುನಿಕ ಆಡಳಿತ ಮತ್ತು ಅರ್ಥಶಾಸ್ತ್ರದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಜಾಗತಿಕ ನೀತಿಗಳನ್ನು ರೂಪಿಸುವಲ್ಲಿ ಮತ್ತು ರಾಷ್ಟ್ರಗಳ ಕಲ್ಯಾಣಕ್ಕೆ ಕೊಡುಗೆ ನೀಡುವಲ್ಲಿ ವಿಶ್ವಾಸಾರ್ಹ ದತ್ತಾಂಶ ಮತ್ತು ಅಂಕಿಅಂಶಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಅಕ್ಟೋಬರ್‌ 20 ರಂದು ವಿಶ್ವ ಅಂಕಿಅಂಶ ದಿನವನ್ನು (World Statistics Day) ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ಅಂಕಿಅಂಶ ದಿನದ ಇತಿಹಾಸವೇನು?

ವಿಶ್ವಸಂಸ್ಥೆಯ ಅಂಕಿಅಂಶಗಳ ಆಯೋಗವು (UNSD) ಫೆಬ್ರವರಿ 2010 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 41 ನೇ ಅಧಿವೇಶನದಲ್ಲಿ ವಿಶ್ವ ಅಂಕಿಅಂಶಗಳ ದಿನವನ್ನು ಆಚರಿಸುವ ಪ್ರಸ್ತಾಪವನ್ನು ಮುಂದಿಟ್ಟಿತು. ಬಳಿಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿಸಿದ ನಿರ್ಣಯದ ಮೇರೆಗೆ ಮೊದಲ ಬಾರಿಗೆ ಅಕ್ಟೋಬರ್‌ 20, 2010 ರಲ್ಲಿ ವಿಶ್ವ ಅಂಕಿಅಂಶಗಳ ದಿನವನ್ನು ಆಚರಿಸಲಾಯಿತು. ಜಾಗತಿಕ ನೀತಿಗಳನ್ನು ರೂಪಿಸುವಲ್ಲಿ ಮತ್ತು ರಾಷ್ಟ್ರಗಳ ಕಲ್ಯಾಣಕ್ಕೆ ಕೊಡುಗೆ ನೀಡುವಲ್ಲಿ ವಿಶ್ವಾಸಾರ್ಹ ದತ್ತಾಂಶ ಮತ್ತು ಅಂಕಿಅಂಶಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿತ್ತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್‌ 20 ನೇ ತಾರೀಕಿನಂದು ವಿಶ್ವ ಮಟ್ಟದಲ್ಲಿ ಅಂಕಿಅಂಶಗಳ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ:  ಬಡತನ ನಿರ್ಮೂಲನಾ ದಿನದ ಪ್ರಾಮುಖ್ಯತೆಯ ಬಗ್ಗೆ ತಿಳಿಯಿರಿ

ಇದನ್ನೂ ಓದಿ
ಬಡತನ ನಿರ್ಮೂಲನಾ ದಿನದ ಪ್ರಾಮುಖ್ಯತೆಯೇನು?
ಆಹಾರ ವ್ಯರ್ಥ ಮಾಡದಿರಿ
ಸರಿಯಾರ ರೀತಿಯಲ್ಲಿ ಕೈ ತೊಳೆಯಿರಿ, ರೋಗ ರುಜಿನಗಳಿಂದ ದೂರವಿರಿ
ಮನೆ, ಮನ ಬೆಳಗುವ ಹೆಣ್ಣು ಸಮಾಜದ ಕಣ್ಣು

ವಿಶ್ವ ಅಂಕಿಅಂಶ ದಿನದ ಮಹತ್ವವೇನು?

  • ನಮ್ಮ ದೈನಂದಿನ ವ್ಯವಹಾರ ಮಾತ್ರವಲ್ಲದೆ ಯಾವುದೇ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅಂಕಿಅಶಗಳು ತುಂಬಾನೇ ಮುಖ್ಯ. ಹಾಗಾಗಿ ಅಂಕಿ ಅಂಶಗಳ ಮಹತ್ವವನ್ನು ಸಾರಲು ಹಾಗೂ ಅಂಕಿಅಂಶಗಳ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ವಿಶ್ವ ಅಂಕಿಅಂಶ ದಿನವನ್ನು ಆಚರಿಸಲಾಗುತ್ತದೆ.
  • ಅಂಕಿಅಂಶಗಳು ಬಡತನ, ನಿರುದ್ಯೋಗ, ಶಿಕ್ಷಣದ ಸ್ಥಿತಿ ಸೇರಿದಂತೆ ಸಾಮಾಜಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ.
  • ಈ ದಿನ ದತ್ತಾಂಶಗಳನ್ನು ಸಂಗ್ರಹಿಸಲು, ವಿಶ್ಲೇಷಿಸಲು ಮತ್ತು ಪ್ರಸ್ತುತಪಡಿಸಲು ಹಗಲಿರುಳು ಶ್ರಮಿಸುವ ಸಂಖ್ಯಾಶಾಸ್ತ್ರಜ್ಞರನ್ನು ಪ್ರೋತ್ಸಾಹಿಸಲಾಗುತ್ತದೆ.
  • ಈ ದಿನ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ನಡೆಯುತ್ತದೆ, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ದತ್ತಾಂಶ ವಿಶ್ಲೇಷಣೆ, ಚಾರ್ಟಿಂಗ್‌ ಮತ್ತು ಅಂಕಿಅಂಶಗಳಿಗೆ ಸಂಬಂಧಪಟ್ಟ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
  • ಈ ದಿನವು ಅಂಕಿಅಂಶಗಳು ಕೇವಲ ಸಂಖ್ಯೆಯಲ್ಲ, ಬದಲಾಗಿ ನಮ್ಮ ಸಮಾಜ, ಆರ್ಥಿಕತೆ ಮತ್ತು ಭವಿಷ್ಯವನ್ನು ರೂಪಿಸುವ ಶಕ್ತಿ ಎಂಬುದನ್ನು ನೆನಪಿಸುತ್ತದೆ. ಜೊತೆಗೆ ಈ ದಿನ ದತ್ತಾಂಶದ ಶಕ್ತಿಯನ್ನು ಅರ್ಥಮಾಡಿಕೊಳ್ಳಲು, ಗೌರವಿಸಲು ಮತ್ತು ಬಳಸಿಕೊಳ್ಳಲು ನಮಗೆ ಸ್ಪೂರ್ತಿ ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ